ನವದೆಹಲಿ : Protein Deficiency Symptoms: ದೇಹವು ಆರೋಗ್ಯವಾಗಿರಲು ಎಲ್ಲಾ ಪೋಷಕಾಂಶಗಳ ಅಗತ್ಯವಿದೆ. ಆದರೆ ಬಿಡುವಿಲ್ಲದ ಜೀವನಶೈಲಿಯಿಂದಾಗಿ (Lifestyle), ಜನರು ತಮ್ಮ ಆಹಾರ ಮತ್ತು ಪಾನೀಯಗಳತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ಅವರ ದೇಹದಲ್ಲಿ ಕೆಲವು ಪೋಷಕಾಂಶಗಳ ಕೊರತೆ ಎದುರಾಗುತ್ತದೆ. ಅಂದಹಾಗೆ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಎಲ್ಲಾ ಪೋಷಕಾಂಶಗಳು ಬೇಕಾಗುತ್ತವೆ. ಆದರೆ, ಇಂದು ಪ್ರೋಟೀನ್ ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೇಳಲಿದ್ದೇವೆ. ದೇಹದಲ್ಲಿ ಪ್ರೋಟೀನ್ ಕೊರತೆಯಾದರೆ (Protein Deficiency) ದೇಹ ನೀಡುವ ಲಕ್ಷಣಗಳು ಯಾವುವು ನೋಡೋಣ. 


COMMERCIAL BREAK
SCROLL TO CONTINUE READING

ಪ್ರೋಟೀನ್ ಕೊರತೆಯ ಲಕ್ಷಣಗಳು:
-ಆಯಾಸ, ದೌರ್ಬಲ್ಯ
- ಕೂದಲು ಮತ್ತು ಉಗುರುಗಳ ದೌರ್ಬಲ್ಯ ಮತ್ತು ಉದುರುವುದು (Hair Fall)  
- ಕೂದಲಿನ ಸಿಕ್ಕು ಮತ್ತು ಶುಷ್ಕತೆ
- ಸ್ನಾಯುಗಳಲ್ಲಿ ದುರ್ಬಲತೆ
- ಮೂಳೆಗಳು ದುರ್ಬಲಗೊಳ್ಳುವುದರಿಂದ ಮುರಿಯುವ ಅಪಾಯ
- ಪದೇ ಪದೇ ಕಾಣಿಸಿಕೊಳ್ಳುವ ಸೋಂಕು 


ಇದನ್ನೂ ಓದಿ : Health Tips: ಮೆಟ್ಟಿಲುಗಳನ್ನು ಹತ್ತುವಾಗ, ಇಳಿಯುವಾಗ ನಿಮಗೂ ಏದುಸಿರು ಬರುತ್ತಾ? ಈ ಬಗ್ಗೆ ಹುಷಾರಾಗಿರಿ!


ಪ್ರೋಟೀನ್ ಕೊರತೆಯನ್ನು ನಿವಾರಿಸಲು ಪರಿಹಾರಗಳು: 
ಮೊಟ್ಟೆ : ಮೊಟ್ಟೆ (Egg) ಪ್ರೋಟೀನ್ ನ ಉತ್ತಮ ಮೂಲವಾಗಿದೆ. ಪ್ರೋಟೀನ್ ಮಾತ್ರವಲ್ಲದೆ, ಕ್ಯಾಲ್ಸಿಯಂ, ಒಮೆಗಾ -3 ಫ್ಯಾಟಿ ಆಸಿಡ್  ಮೊಟ್ಟೆಯಲ್ಲಿ ಕಂಡುಬರುತ್ತವೆ. 


ಡೈರಿ ಉತ್ಪನ್ನಗಳು : ದೇಹಕ್ಕೆ ಪ್ರೋಟೀನ್‌ ಸರಿಯಾದ ಪ್ರಮಾಣದಲ್ಲಿ ಸಿಗಬೇಕಾದರೆ ಡೈರಿ ಉತ್ಪನ್ನಗಳನ್ನು ಸೇವಿಸಬೇಕು. ಡೈರಿ ಉತ್ಪನ್ನಗಳೆಂದರೆ ಹಾಲು (milk) , ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆ, ಪನೀರ್ (Paneer) ಹೀಗೆ ಇದನ್ನು ಸೇವಿಸಿದರೆ ದೇಹಕ್ಕೆ ಸೂಕ್ತ ಪ್ರಮಾಣದಲ್ಲಿ ಪ್ರೋಟೀನ್ ಸಿಗುತ್ತದೆ. ಅಲ್ಲದೆ, ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಇತ್ಯಾದಿ ಪೋಷಕಾಂಶಗಳು ಕಂಡುಬರುತ್ತವೆ. 


ಸೋಯಾ : ಪ್ರೋಟೀನ್ ಕೊರತೆಯನ್ನು ನೀಗಿಸಲು ಇರುವ ಮತ್ತೊಂದು ಮುಖ್ಯವಾದ ಆಹಾರ.  ನೀವು ಆಹಾರದಲ್ಲಿ ಸೋಯಾ ಹಾಲು (Soya milk), ಸೋಯಾ ತೋಫು, ಸೋಯಾ ಬೀಜಗಳು, ಸೋಯಾ ಬೀನ್ಸ್ ಅನ್ನು ಸೇರಿಸಿಕೊಳ್ಳಬಹುದು.


ಇದನ್ನೂ ಓದಿ : Dark Underarms Treatment: ಮನೆಯಲ್ಲೇ ಇರುವ ಈ ಪದಾರ್ಥಗಳನ್ನು ಬಳಸಿ ಐದೇ ನಿಮಿಷದಲ್ಲಿ ಡಾರ್ಕ್ ಅಂಡರ್ ಆರ್ಮ್ಸ್ ಸಮಸ್ಯೆಯಿಂದ ಪರಿಹಾರ ಪಡೆಯಿರಿ


ಮೊಳಕೆಯೊಡೆದ ಧಾನ್ಯಗಳು : ಮೊಳಕೆಯೊಡೆದ ಧಾನ್ಯಗಳು ಇತರ ಪೋಷಕಾಂಶಗಳ ಜೊತೆಗೆ ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ತೂಕ ನಿಯಂತ್ರಣದಲ್ಲಿಡಲು ಕೂಡಾ ಸಹಾಯ ಮಾಡುತ್ತದೆ. 


ಚಿಕನ್ : ಚಿಕನ್ ನಲ್ಲಿ (Chicken) ವಿಟಮಿನ್ ಬಿ ಮತ್ತು ಹೆಚ್ಚಿನ ಪೋಷಕಾಂಶಗಳು ಸಿಗುತ್ತವೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಪ್ರೋಟೀನ್ ಕೊರತೆಯನ್ನು ಪೂರೈಸಲು ಸಹಾಯ ಮಾಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.