Foods Avoid With Milk: ಹಾಲು ಕುಡಿಯುವ ಮುನ್ನ ಐದು ಆಹಾರಗಳನ್ನು ಖಂಡಿತಾ ಸೇವಿಸಬೇಡಿ

Foods Avoid With Milk:ಹಾಲು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಹಾಲು ಕುಡಿಯುವುದರಿಂದ ದೇಹಕ್ಕೆ ಅನೇಕ ಪೋಷಕಾಂಶಗಳು ಸಿಗುತ್ತವೆ. ಆದರೆ, ಕೆಲವು ಆಹಾರಗಳನ್ನು ಹಾಲಿನೊಂದಿಗೆ ತಿನ್ನಬಾರದು. ಅಥವಾ ಹಾಲು ಕುಡಿಯುವ ಮುನ್ನ ಸೇವಿಸಬಾರದು.  

Written by - Ranjitha R K | Last Updated : Jun 17, 2021, 02:50 PM IST
  • ಹಾಲು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ
  • ಕೆಲವು ಆಹಾರಗಳನ್ನು ಹಾಲಿನೊಂದಿಗೆ ತಿನ್ನಬಾರದು.
  • ಈ ಆಹಾರ ಪದಾರ್ಥಗಳನ್ನು ಹಾಲಿನೊಂದಿಗೆ ಸೇವಿಸಿದರೆ ಲಾಭದ ಬದಲು ನಷ್ಟವೇ ಹೆಚ್ಚು
Foods Avoid With Milk: ಹಾಲು ಕುಡಿಯುವ ಮುನ್ನ  ಐದು ಆಹಾರಗಳನ್ನು ಖಂಡಿತಾ ಸೇವಿಸಬೇಡಿ title=
ಕೆಲವು ಆಹಾರಗಳನ್ನು ಹಾಲಿನೊಂದಿಗೆ ತಿನ್ನಬಾರದು. (photo india.com)

ನವದೆಹಲಿ :  ಹಾಲು ಆರೋಗ್ಯಕ್ಕೆ ಬಹಳ (Health benefits of milk) ಪ್ರಯೋಜನಕಾರಿ. ಹಾಲು ಕುಡಿಯುವುದರಿಂದ ದೇಹಕ್ಕೆ ಅನೇಕ ಪೋಷಕಾಂಶಗಳು ಸಿಗುತ್ತವೆ. ಆದರೆ, ಕೆಲವು ಆಹಾರಗಳನ್ನು ಹಾಲಿನೊಂದಿಗೆ ತಿನ್ನಬಾರದು. ಅಥವಾ ಹಾಲು ಕುಡಿಯುವ ಮುನ್ನ ಸೇವಿಸಬಾರದು.  ಈ ಆಹಾರ ಪದಾರ್ಥಗಳನ್ನು ಹಾಲಿನೊಂದಿಗೆ ಸೇವಿಸಿದರೆ, ಆರೋಗ್ಯಕ್ಕೆ ಲಾಭವಾಗುವ ಬದಲು ನಷ್ಟವೇ (Foods Avoid With Milk) ಹೆಚ್ಚಾಗಲಿದೆ. ಹಾಗಿದ್ದರೆ ಯಾವ  ಆಹಾರ ಪದಾರ್ಥಗಳನ್ನು ಹಾಲು ಕುಡಿಯುವ ಮುನ್ನ ತಿನ್ನಬಾರದು ನೋಡೋಣ.. 

1. ಹಾಲು (Milk) ಕುಡಿಯುವ ಮೊದಲು ಉಪ್ಪಿನ ಅಂಶ ಹೆಚ್ಚಿರುವ ಹಾರಗಳನ್ನು ತಿನ್ನಬಾರದು. ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.   ಉಪ್ಪು (Salt) ಮತ್ತು ಹಾಲು ಒಟ್ಟಿಗೆ ಹೊಟ್ಟೆ ಸೇರಿದರೆ, ಸಮಸ್ಯೆ ಉಂಟಾಗುತ್ತದೆ. ಉಪ್ಪಿನ ಅಂಶ ಹೆಚ್ಚಾಗಿ ಇರುವ ವಸ್ತುಗಳನ್ನು ತಿಂದರೆ, ಆ ವಸ್ತುವನ್ನು ಸೇವಿಸಿದ ಎರಡು ಗಂಟೆಗಳ ಬಳಿಕ ಹಾಲು ಕುಡಿಯುವುದು ಒಳ್ಳೆಯದು. 

ಇದನ್ನೂ ಓದಿ : ಕಟ್ ಮಾಡಿದ ಕಲ್ಲಂಗಡಿ ಹಣ್ಣನ್ನು ಫ್ರಿಜ್ ನಲ್ಲಿ ಏಕೆ ಇಡಬಾರದು ಗೊತ್ತಾ..?

2. ಉದ್ದಿನ ಬೇಳೆಯಿಂದ (Urad dal) ಮಾಡಿದ ತಿಂಡಿಗಳನ್ನು ತಿಂದ ನಂತರವೂ ಹಾಲು ಸೇವನೆ ನಿಷಿದ್ಧ. ಉದ್ದಿನ ಬೇಳೆ ಉಪಯೋಗಿಸಿ, ಮಾಡಿದ ತಿಂಡಿಯನ್ನು ತಿಂದ ಕೂಡಲೇ ಹಾಲು ಕುಡಿದರೆ ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು. 

3. ಹುಳಿ ವಸ್ತುಗಳನ್ನು ಅಥವಾ ಹುಳಿ ಹಣ್ಣುಗಳನ್ನು ಸೇವಿಸಿದ ನಂತರ ಹಾಲು ಕುಡಿಯಬಾರದು.

ಇದನ್ನೂ ಓದಿ : Vitamin A : 'ವಿಟಮಿನ್-A' ಕೊರತೆಯ ಲಕ್ಷಣಗಳೇನು? ಸಮಸ್ಯೆಗಳು ಯಾವುವು? ನಿಯಂತ್ರಣ ಹೇಗೆ? ಇಲ್ಲಿದೆ ಮಾಹಿತಿ

4. ಮೀನು (Fish) ತಿಂದ ನಂತರ ಹಾಲು ಸೇವಿಸಬಾರದು. ಮೀನು ತಿಂದ ಬಳಿಕ ಹಾಲು ಕುಡಿದರೆ ಫುಡ್ ಪಾಯಿಸನ್ ಆಗುವ ಸಾಧ್ಯತೆಗಳಿರುತ್ತವೆ. ಹೀಗಾದಲ್ಲಿ ಆರೋಗ್ಯ ಸಮಸ್ಯೆಗಳು (Health problems) ಕಾಣಿಸಿಕೊಳ್ಳುತ್ತವೆ. 

5.ಮೊಸರು (Curd) ತಿಂದ ಕೂಡಲೇ ಹಾಲು ಕುಡಿಯಬಾರದು. ಮೊಸರು ತಿಂದು ಹಾಲು ಕುಡಿದರೆ  ಜೀರ್ಣಕ್ರಿಯೆಯಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ. ದೇಹವು ಹಾಲಿನ ಪೋಷಕಾಂಶಗಳನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಮೊಸರು ತಿಂದ ಕೂಡಲೇ ಹಾಲು ಸೇವನೆ ಬೇಡವೇ ಬೇಡ.

ಇದನ್ನೂ ಓದಿ : Benefits of betel leaf : ನಿಮಗೆ ಗೊತ್ತಾ..? ವೀಳ್ಯದೆಲೆಯ ನಾಲ್ಕು ಮಹತ್ವದ ಆರೋಗ್ಯಕಾರಿ ಗುಣ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News