Radish Leaves Benefits: ಉತ್ತಮ ಆರೋಗ್ಯಕ್ಕೆ ಹಸಿರು ತರಕಾರಿಗಳು ಬಹಳ ಮುಖ್ಯ. ಸಾಮಾನ್ಯವಾಗಿ ನಾವು ತರಕಾರಿಯ ಸಿಪ್ಪೆ ತೆಗೆದು ತರಕಾರಿಯನ್ನಷ್ಟೇ ಬಳಸುತ್ತೇವೆ. ಅದರ ಮೇಲಿನ ಎಲೆಗಳು ಅಂದರೆ ಸೊಪ್ಪನ್ನು ಕಸಕ್ಕೆ ಹಾಕುತ್ತೇವೆ. ಆದರೆ, ಕೇವಲ ತರಕಾರಿ ಮಾತ್ರವಲ್ಲ ಕೆಲವು ತರಕಾರಿಗಳ ಸೊಪ್ಪುಗಳು ಕೂಡ ಆರೋಗ್ಯದ ಗಣಿ ಎಂದು ನಿಮಗೆ ತಿಳಿದಿದೆಯೇ? ಅಂತಹವುಗಳಲ್ಲಿ ಮೂಲಂಗಿ ಸೊಪ್ಪು ಕೂಡ ಒಂದು. ಮೂಲಂಗಿ ಸೊಪ್ಪು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದರಲ್ಲಿ  ವಿಟಮಿನ್ ಎ, ವಿಟಮಿನ್ ಬಿ1, ವಿಟಮಿನ್ ಬಿ6, ವಿಟಮಿನ್ ಸಿ, ಫೋಲಿಕ್ ಆಮ್ಲದಂತಹ ಪೋಷಕಾಂಶಗಳು ಕಂಡು ಬರುತ್ತವೆ. ಮೂಲಂಗಿ ಸೊಪ್ಪು ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದಂತಹ ಖನಿಜಗಳಲ್ಲಿ ಸಮೃದ್ಧವಾಗಿವೆ. ಹಾಗಾಗಿ, ಮೂಲಂಗಿ ಸೊಪ್ಪಿನ ಸೇವನೆಯಿಂದ ಹಲವು ರೋಗಗಳಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಹೌದು, ಹಲವು ರೋಗಗಳಿಗೆ ಮೂಲಂಗಿ ಸೊಪ್ಪು ವರದಾನವಿದ್ದಂತೆ. ಮೂಲಂಗಿ ಸೊಪ್ಪು ಆರೋಗ್ಯಕ್ಕೆ ಯಾವ ರೀತಿ ಪ್ರಯೋಜನಕಾರಿ ಆಗಿದೆ ಎಂದು ತಿಳಿಯೋಣ...


ಜೀರ್ಣಕ್ರಿಯೆಗೆ ಪ್ರಯೋಜನಕಾರಿ:
ಮೂಲಂಗಿ ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ ಆಗಿದೆ. ಮೂಲಂಗಿ ಸೊಪ್ಪಿನಲ್ಲಿ ಫೈಬರ್ ಕೂಡ ಉತ್ತಮ ಪ್ರಮಾಣದಲ್ಲಿರುತ್ತದೆ. ಮೂಲಂಗಿ ಸೊಪ್ಪಿನ ಸೇವನೆಯಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ದೂರವಾಗುತ್ತವೆ. ಇದು ಆಹಾರವನ್ನು ಉತ್ತಮ ರೀತಿಯಲ್ಲಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- ಚರ್ಮದಿಂದ ಪಾದದವರೆಗೆ ಕಂಡುಬರುವ ಈ ಚಿಹ್ನೆಗಳು ಕೊಲೆಸ್ಟ್ರಾಲ್ ಹೆಚ್ಚಳದ ಸಂಕೇತವೂ ಆಗಿರಬಹುದು, ಎಚ್ಚರ!


ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ: 
ಮೂಲಂಗಿ ಸೊಪ್ಪಿನಲ್ಲಿರುವ ಪೋಷಕಾಂಶಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇವುಗಳಲ್ಲಿ ಸೋಡಿಯಂ ಇರುತ್ತದೆ. ಕಡಿಮೆ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ಮೂಲಂಗಿ ಸೊಪ್ಪು ಸೇವನೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 


ರೋಗನಿರೋಧಕ ಶಕ್ತಿ ಹೆಚ್ಚಳ:
ಮೂಲಂಗಿ ಸೊಪ್ಪಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಮೂಲಂಗಿ ಸೊಪ್ಪನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಶೀತ ಮತ್ತು ಜ್ವರದಂತಹ ರೋಗಗಳನ್ನು ದೂರ ಇಡುತ್ತದೆ. ಇವುಗಳಲ್ಲಿ ವಿಟಮಿನ್ ಸಿ ಯಥೇಚ್ಛವಾಗಿ ಕಂಡುಬರುತ್ತದೆ, ಇದು ಋತುಮಾನದ ಕಾಯಿಲೆಗಳಿಂದ ದೇಹವನ್ನು ರಕ್ಷಿಸುವಲ್ಲಿ ಸಹಕಾರಿ ಆಗಿದೆ.


ಇದನ್ನೂ ಓದಿ- Foods For Acidity: ಅಸಿಡಿಟಿ ಇರುವವರಿಗೆ ಬೆಸ್ಟ್ ಆಹಾರಗಳಿವು


ರಕ್ತದ ಕೊರತೆ ನಿವಾರಿಸಲು:
ಮೂಲಂಗಿ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು ಅದು ರಕ್ತದ ಕೊರತೆಯನ್ನು ನಿವಾರಿಸಲು ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ.


ತೂಕ ಇಳಿಕೆ:
ಮೂಲಂಗಿ ಸೊಪ್ಪು ತೂಕ ಇಳಿಕೆಯಲ್ಲಿಯೂ ಪ್ರಯೋಜನಕಾರಿ ಆಗಿದೆ. ಇದು ಕಡಿಮೆ ಕ್ಯಾಲೋರಿ ತರಕಾರಿ. ಹಾಗಾಗಿ, ಮೂಲಂಗಿ ಸೊಪ್ಪಿನ ಸೇವನೆಯಿಂದ ಚಯಾಪಚಯ ಹೆಚ್ಚಳವಾಗಿ ತ್ವರಿತ ತೂಕ ಇಳಿಕೆಗೆ ಸಹಕಾರಿ ಆಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.