ಚರ್ಮದಿಂದ ಪಾದದವರೆಗೆ ಕಂಡುಬರುವ ಈ ಚಿಹ್ನೆಗಳು ಕೊಲೆಸ್ಟ್ರಾಲ್ ಹೆಚ್ಚಳದ ಸಂಕೇತವೂ ಆಗಿರಬಹುದು, ಎಚ್ಚರ!

High Cholesterol Symptoms: ನಮ್ಮ ದೇಹದ ಹಲವು ಅಂಗಗಳು ಕೂಡ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳದ ಬಗ್ಗೆ ಸೂಚನೆ ನೀಡುತ್ತವೆ. ಇದನ್ನು ಸರಿಯಾದ ಸಮಯಕ್ಕೆ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಭವಿಷ್ಯದಲ್ಲಿ ಇದು ಮಾರಕವಾಗಿ ಪರಿಣಮಿಸಬಹುದು. ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್‌ನ ಎಚ್ಚರಿಕೆ ಚಿಹ್ನೆಯನ್ನು ಹೇಗೆ ಗುರುತಿಸುವುದು? ಎಂದು ತಿಳಿಯಿರಿ... 

High Cholesterol Symptoms: ಒತ್ತಡಭರಿತ ಜೀವನ ಶೈಲಿ, ಕಳಪೆ ಆಹಾರ ಸೇವನೆ ಎಲ್ಲವೂ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪ್ರಸ್ತುತ ಜಗತ್ತಿನಲ್ಲಿ ಕೊಲೆಸ್ಟ್ರಾಲ್ ಹೆಚ್ಚಳ ಸಾಮಾನ್ಯವಾಗಿದೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳವು ಹೃದಯಾಘಾತ, ಅಧಿಕ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯತೆ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ನಾಳೀಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಲಿಪಿಡ್ ಪ್ರೊಫೈಲ್ ಪರೀಕ್ಷೆಯ ಮೂಲಕ ಪತ್ತೆಹಚ್ಚಲಾಗುತ್ತದೆ. ಆದರೆ, ನಮ್ಮ ದೇಹದ ಹಲವು ಅಂಗಗಳು ಕೂಡ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳದ ಬಗ್ಗೆ ಸೂಚನೆ ನೀಡುತ್ತವೆ. ಇದನ್ನು ಸರಿಯಾದ ಸಮಯಕ್ಕೆ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಭವಿಷ್ಯದಲ್ಲಿ ಇದು ಮಾರಕವಾಗಿ ಪರಿಣಮಿಸಬಹುದು. ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್‌ನ ಎಚ್ಚರಿಕೆ ಚಿಹ್ನೆಯನ್ನು ಹೇಗೆ ಗುರುತಿಸುವುದು? ಎಂದು ತಿಳಿಯಿರಿ... 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಸೊಂಟದ ಸುತ್ತಲಿನ ಬೊಜ್ಜು: ಪ್ರಸ್ತುತ ಬಹುತೇಕ ಮಂದಿಯ ಸಾಮಾನ್ಯ ಸಮಸ್ಯೆ ಎಂದರೆ ಸೊಂಟದ ಸುತ್ತ ಶೇಖರಣೆ ಆಗುವ ಬೊಜ್ಜು. ನಿಮಗೂ ಹೊಟ್ಟೆ ಮತ್ತು ಸೊಂಟದ ಸುತ್ತಲೂ ಬೊಜ್ಜು ಅತಿಯಾಗಿದ್ದರೆ ಅದು ಕೊಲೆಸ್ಟ್ರಾಲ್ ಹೆಚ್ಚಳದ ಸಂಕೇತ ಎಂಬುದನ್ನು ಅರ್ಥ ಮಾಡಿಕೊಳ್ಳಿ. 

2 /5

ಪದೇ ಪದೇ ಕಾಣಿಸಿಕೊಳ್ಳುವ ಎದೆನೋವು: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಅದು ಹೃದಯದ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತದೆ. ಪದೇ ಪದೇ ಕಾಣಿಸಿಕೊಳ್ಳುವ ಎದೆ ನೋವು ಕೂಡ ಅಧಿಕ ಕೊಲೆಸ್ಟ್ರಾಲ್ ಚಿಹ್ನೆಯಾಗಿರಬಹುದು, ಎಚ್ಚರ!

3 /5

ಕಾಲುಗಳಲ್ಲಿ ನೋವು: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳವಾದಾಗ ರಕ್ತನಾಳಗಳಲ್ಲಿ ಪ್ಲೇಕ್ ಸಂಗ್ರಹವಾಗಲು ಪ್ರಾರಂಭವಾಗುತ್ತದೆ. ಇದರಿಂದಾಗಿ ರಕ್ತನಾಳಗಳಲ್ಲಿ ಅಡಚಣೆಯಿಂದಾಗಿ ರಕ್ತ ಮತ್ತು ಆಮ್ಲಜನಕವು ಪಾದಗಳಿಗೆ ಸರಿಯಾಗಿ ತಲುಪುವುದಿಲ್ಲ. ಇದರಿಂದ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

4 /5

ವಿಪರೀತ ಬೆವರುವಿಕೆ: ಬಿಸಿಲು ಹೆಚ್ಚಿದ್ದಾಗ ಅಥವಾ ದೈಹಿಕ ಚಟುವಟಿಕೆಗಳು ಹೆಚ್ಚಾದಾಗ ಬೆವರುವಾದ ಸಾಮಾನ್ಯವಾಗಿದೆ. ಆದರೆ, ಯಾವುದೇ ಕಾರಣವಿಲ್ಲದೆ ನೀವು ವಿಪರೀತ ಬೆವರುತ್ತಿದ್ದರೆ ಇದು ಅಪಾಯದ ಎಚ್ಚರಿಕೆಯ ಗಂಟೆ ಎಂಬುದನ್ನು ನೆನಪಿಡಿ.

5 /5

ಚರ್ಮದ ಬಣ್ಣ ಬದಲಾವಣೆ: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ದೇಹದ ಅನೇಕ ಭಾಗಗಳಲ್ಲಿ ರಕ್ತದ ಹರಿವಿನ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ. ಇದರಿಂದ ಚರ್ಮವು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇಂತಹ ಲಕ್ಷಣಗಳು ಕಂಡು ಬಂದಾಗ ತಪ್ಪದೇ ತಡಮಾಡದೆಯೇ ವೈದ್ಯರನ್ನು ಸಂಪರ್ಕಿಸಿ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.