Ragi Flour For Diabetes: ಮಧುಮೇಹ ಎನ್ನುವುದು ಕೇವಲ ಭಾರತದ ಸಮಸ್ಯೆಯಲ್ಲ. ಈ ಕಾಯಿಲೆ ಇಡೀ ಜಗತ್ತನ್ನೇ ಕಾಡುತ್ತಿದೆ. ಈ ಕಾಯಿಲೆ ನಿರ್ಮೂಲನೆಗೆ ಇನ್ನೂ ಯಾವ ಔಷಧಿಯನ್ನು ಕಂಡುಹಿಡಿಯಲಾಗಿಲ್ಲ. ಮಧುಮೇಹವನ್ನು ಕೇವಲ ನಿಯಂತ್ರಣ ಮಾಡಬಹುದು ಅಷ್ಟೇ.  ಇದೇ ಕಾರಣಕ್ಕೆ  ಮಧುಮೇಹಿಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣ ಮೀರಿದರೆ, ಅನೇಕ ರೋಗಗಳ ಅಪಾಯವನ್ನು ಸೃಷ್ಟಿಸುತ್ತದೆ.


COMMERCIAL BREAK
SCROLL TO CONTINUE READING

 ಮಧುಮೇಹಿಗಳಿಗೆ ರಾಗಿ ಹಿಟ್ಟು : 
ಸಾಮಾನ್ಯವಾಗಿ, ನಮ್ಮ ದೈನಂದಿನ ಆಹಾರದಲ್ಲಿ ಗೋಧಿ ಹಿಟ್ಟನ್ನು ಹೆಚ್ಚಾಗಿ ಬಳಸುತ್ತೇವೆ.  ಆದರೆ ಮಧುಮೇಹಿಗಳು ಗೋಧಿ ಹಿಟ್ಟಿನ ಬದಲಿಗೆ ರಾಗಿ ಹಿಟ್ಟನ್ನು ಪ್ರಯತ್ನಿಸಬೇಕು. ಇದರೊಂದಿಗೆ ಮಧುಮೇಹ ಮಾತ್ರವಲ್ಲ, ಬೊಜ್ಜು, ಅಧಿಕ ರಕ್ತದೊತ್ತಡದಂತಹ  ರೋಗಗಳಿಂದ ಮುಕ್ತಿ ಪಡೆಯಬಹುದು. ಭಾರತದಲ್ಲಿ ಎಲ್ಲಾ ವಯಸ್ಸಿನ ಜನರು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಡಯಾಬಿಟೀಸ್ ರೋಗಿಗಳು ತಮ್ಮ ದೈನಂದಿನ ಆಹಾರದಲ್ಲಿ ರಾಗಿಯನ್ನು ಸೇರಿಸಿಕೊಳ್ಳಬೇಕು.


ಇದನ್ನೂ ಓದಿ : ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಈ ಬೇಳೆ ಕಾಳುಗಳನ್ನು ತಪ್ಪದೇ ಸೇವಿಸಿ


ಮಧುಮೇಹ ರೋಗಿಗಳಿಗೆ ದೊಡ್ಡ  ಸವಾಲು ಎಂದರೆ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು  ಕಾಪಾಡಿಕೊಳ್ಳುವುದು.  ಆಹಾರ ಸೇವನೆಯ ಸಣ್ಣ ನಿರ್ಲಕ್ಷ್ಯವೂ  ದುಬಾರಿಯಾಗಿ ಪರಿಣಮಿಸಿಬಿಡಬಹುದು. ಹೆಚ್ಚಿನ ಆರೋಗ್ಯ ತಜ್ಞರು ಕೂಡಾ ರಾಗಿ ಹಿಟ್ಟು ತಿನ್ನಲು ಶಿಫಾರಸು ಮಾಡುತ್ತಾರೆ.


ಮಧುಮೇಹದಲ್ಲಿ ರಾಗಿ  ಹೇಗೆ ಪ್ರಯೋಜನಕಾರಿ?
ರಾಗಿಯಲ್ಲಿ  ಅನೇಕ ರೀತಿಯ ಪ್ರಮುಖ ಪೋಷಕಾಂಶಗಳು ಕಂಡುಬರುತ್ತವೆ. ಇದರಲ್ಲಿ ನಾರಿನಂಶ ಹೇರಳವಾಗಿರುತ್ತದೆ. ಇದು ಜೀರ್ಣವಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ರಾಗಿ ತಿಂದ ನಂತರ ಹೆಚ್ಚು ಹೊತ್ತು ಹಸಿವಾಗುವುದಿಲ್ಲ. ಆದ್ದರಿಂದಲೇ ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ Joint Pain Relief: ಕೀಲು ನೋವಿನಿಂದ ತ್ವರಿತ ಪರಿಹಾರಕ್ಕಾಗಿ ಈ ಮನೆಮದ್ದುಗಳನ್ನು ಟ್ರೈ ಮಾಡಿ


ರಾಗಿಯಲ್ಲಿ ಪ್ರೊಟೀನ್, ಕ್ಯಾಲ್ಸಿಯಂ, ವಿಟಮಿನ್ ಡಿ, ಕಬ್ಬಿಣಾಂಶವೂ ಹೇರಳವಾಗಿದ್ದು, ಸಕ್ಕರೆ ಪ್ರಮಾಣವನ್ನು ಕಾಯ್ದುಕೊಳ್ಳುವುದರೊಂದಿಗೆ ಮೂಳೆಗಳನ್ನು ಗಟ್ಟಿಯಾಗಿಸುತ್ತದೆ. ಇದನ್ನು ತಿನ್ನುವುದರಿಂದ ದೇಹದಲ್ಲಿ ರಕ್ತದ ಕೊರತೆಯಾಗುವುದಿಲ್ಲ. ರಾಗಿ ಹಿಟ್ಟಿನಿಂದ ರೊಟ್ಟಿ,  ಇಡ್ಲಿ ಮತ್ತು ದೋಸೆಯನ್ನು ತಯಾರಿಸಬಹುದು. ಇದು ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.