Jatropha Health Benefits: ಹಾಳಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ರಕ್ತದೊತ್ತಡಕ್ಕೆ ಗುರಿಯಾಗುತ್ತಿದ್ದಾರೆ. ನೀವು ಸಹ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರೆ, ಪರಂಗಿ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ಪರಂಗಿ ಒಂದು ಆಯುರ್ವೇದ ಔಷಧೀಯ ಗಿಡಮೂಲಿಕೆಯಾಗಿದ್ದು, ಇದನ್ನು ಆಂಗ್ಲ ಭಾಷೆಯಲ್ಲಿ ಜತ್ರೋಫಾ ಎಂದು ಕರೆಯಲಾಗುತ್ತದೆ. ಪರಂಗಿ ಹಲವು ಗುಣಗಳನ್ನು ಹೊಂದಿದ್ದು, ಇದು ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಪರಂಗಿಯ ಲಾಭಗಳ ಕುರಿತ ತಿಳಿದುಕೊಳ್ಳೋಣ ಬನ್ನಿ,
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಪರಂಗಿಯಲ್ಲಿರುವ ಔಷಧೀಯ ಗುಣಗಳು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ರಕ್ತದೊತ್ತಡದಂತಹ ಸಮಸ್ಯೆಗಳನ್ನು ಪರಂಗಿಯಂತಹ ನೈಸರ್ಗಿಕ ಔಷಧಗಳನ್ನು ತೆಗೆದುಕೊಳ್ಳುವುದರಿಂದ ನಿಯಂತ್ರಿಸಬಹುದು.
ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ
ಪರಂಗಿ ಬೀಜಗಳಿಂದ ತೆಗೆದ ಎಣ್ಣೆಯನ್ನು ಬಳಸುವುದರಿಂದ, ದೃಷ್ಟಿ ಸುಧಾರಿಸುವುದರ ಜೊತೆಗೆ, ಚರ್ಮವು ಕಲೆಮುಕ್ತವಾಗುತ್ತದೆ ಮತ್ತು ಶುಷ್ಕತೆ ದೂರಾಗುತ್ತದೆ. ಇದಲ್ಲದೆ, ರಿಂಗ್ವರ್ಮ್ ಮತ್ತು ತುರಿಕೆ ತೊಡೆದುಹಾಕಲು, ಹೊಟ್ಟೆಯ ಹುಳುಗಳನ್ನು ತೆಗೆದುಹಾಕುವಲ್ಲಿ ಪರಂಗಿ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ರಕ್ತವನ್ನು ಸ್ವಚ್ಛಗೊಳಿಸಿ
ರಕ್ತವನ್ನು ಶುದ್ಧೀಕರಿಸಲು ಕೂಡ ನೀವು ಪರಂಗಿಯನ್ನು ಬಳಸಬಹುದು.
ಸಂಧಿವಾತ ನೋವು ನಿವಾರಣೆಗೆ ಪರಂಗಿ ಸಹಾಯಕಾರಿ
ಸಂಧಿವಾತದ ಜನರಿಗೆ ಅಸಹನೀಯ ನೋವನ್ನು ನೀಡುತ್ತದೆ. ಇಂತಹ ಸ್ಥಿತಿಯಲ್ಲಿ ದೇಹದ ಕೀಲುಗಳಲ್ಲಿ ಮಾತ್ರವಲ್ಲದೆ ಸ್ನಾಯುಗಳಲ್ಲಿಯೂ ತೀವ್ರತರವಾದ ನೋವು ಇರುತ್ತದೆ. ಪರಂಗಿ ಬೀಜಗಳಿಂದ ತೆಗೆದ ಎಣ್ಣೆಯಿಂದ ಕೀಲುಗಳು ಮತ್ತು ಸ್ನಾಯುಗಳನ್ನು ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ನೀವು ಸಂಧಿವಾತದ ನೋವಿನಿಂದ ಪರಿಹಾರವನ್ನು ಪಡೆಯಬಹುದು.
ಹೃದಯ ಸಂಬಂಧಿ ಕಾಯಿಲೆಗಳಿಂದ ಮುಕ್ತಿ
ಪರಂಗಿಯನ್ನು ಒಂದು ಆಯುರ್ವೇದ ಗಿಡಮೂಲಿಕೆ ಎಂದು ಗುರುತಿಸಲಾಗಿದೆ. ಇದರಲ್ಲಿ ಹಲವು ಔಷಧೀಯ ಗುಣಗಳು ಕಂಡುಬರುತ್ತವೆ, ಇದು ಹೃದಯದ ಸಮಸ್ಯೆಗಳಿಗೆ ಕಾರಣವಾಗುವ ದೇಹದಲ್ಲಿ ಇರುವ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಕೆಲಸ ಮಾಡುತ್ತದೆ.
ಮೈಗ್ರೇನ್ ನೋವನ್ನು ನಿವಾರಿಸುತ್ತೆ
ಮೈಗ್ರೇನ್ ಅಥವಾ ತಲೆನೋವಿನಂತಹ ಸಮಸ್ಯೆಗಳನ್ನು ಹೋಗಲಾಡಿಸಲು ನೀವು ಪರಂಗಿ ಗಿಡದ ಬೇರುಗಳನ್ನು ಬಳಸಬಹುದು. ಈ ಸಸ್ಯದ ಬೇರನ್ನು ಸೇವಿಸುವುದರಿಂದ ಮೈಗ್ರೇನ್ ನೋವು ನಿವಾರಣೆಯಾಗುತ್ತದೆ.
ಇದನ್ನೂ ಓದಿ-Heart Attack Risk: ಈ ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ ಹೃದಯಾಘಾತದ ಅಪಾಯದಿಂದ ಪಾರಾಗಿ
ತ್ವಚೆಯನ್ನು ಕಲೆರಹಿತ ಮಾಡುತ್ತದೆ
ನಿಮ್ಮ ಚರ್ಮದ ಮೇಲಿನ ಚಿಕನ್ಪಾಕ್ಸ್ ನಂತಹ ಹಟಮಾರಿ ಕಲೆಗಳಿಂದ ನೀವು ತೊಂದರೆಗೊಳಗಾಗಿದ್ದರೆ, ಪರಂಗಿ ನಿಮ್ಮ ಚರ್ಮದಿಂದ ಈ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಈ ಔಷಧೀಯ ಸಸ್ಯದ ಎಲೆಗಳನ್ನು ಪುಡಿಮಾಡಿ ಅದರ ರಸವನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ. ಈ ಮಿಶ್ರಣವನ್ನು ನಿತ್ಯ ಕೆಲವು ದಿನಗಳವರೆಗೆ ಆ ಕಲೆಗಳ ಮೇಲೆ ಅನ್ವಯಿಸಿ, ಇದರಿಂದ ಕಲೆಗಳು ಮಾಯವಾಗುತ್ತವೆ, ಜೊತೆಗೆ ಚರ್ಮದ ಆರೋಗ್ಯ ಸುಧಾರಿಸುತ್ತದೆ ಮತ್ತು ನಿಮ್ಮ ಮುಖವು ಸ್ವಚ್ಛವಾಗುತ್ತದೆ.
ಇದನ್ನೂ ಓದಿ-Liver Detoxification: ಹೊಟ್ಟೆಯಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಈ ಸುಲಭ ಮನೆ ಉಪಾಯಗಳನ್ನು ಅನುಸರಿಸಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ, ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.