Main Causes Of Late Period : ಹೆಣ್ಣು ಮಕ್ಕಳಲ್ಲಿ ಪ್ರತಿ ತಿಂಗಳು ಮುಟ್ಟು ಕಾಣಿಸಿಕೊಳ್ಳುತ್ತದೆ. ಈ ಅವಧಿಯಲ್ಲಿ ಹೆಣ್ಣು ಮಗಳಲು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ. ಹೊಟ್ಟೆ ನೋವು, ಮೂಡ್ ಸಿಂಗ್, ಭಯ, ಆತಂಕ ಹೀಗೆ ಅದು ಒಂದು ರೀತಿ  ಯಾರಿಗೂ ವಿವರಿಸಿ ಹೇಳಲು ಸಾಧ್ಯವಾಗದ ಬೇನೆ. ಆದರೂ ಮಹಿಳೆಯರ ಉತ್ತಮ ಆರೋಗ್ಯಕ್ಕಾಗಿ, ಪೀರಿಯೇಡ್ಸ್   ನಿಯಮಿತವಾಗಿ ಬರುವುದು ಮುಖ್ಯ. ಆದರೆ ಕೆಲವೊಮ್ಮೆ ಪೀರಿಯೇಡ್ಸ್  ತಡವಾಗಿ ಕಾಣಿಸಿಕೊಳ್ಳುತ್ತದೆ. ಮುಟ್ಟಿನ ಸಂದರ್ಭ ಹೆಣ್ಣು ಮಕ್ಕಳ ಯಾತನೆ ಒಂದು ರೀತಿಯಾದರೆ,  ಮುಟ್ಟು ತಡವಾದರೂ ಕಾಡುವ ಆತಂಕ ಇನ್ನೊಂದು ರೀತಿ. 


COMMERCIAL BREAK
SCROLL TO CONTINUE READING

ಮುಟ್ಟಿನ ಅವಧಿಯು ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದನ್ನು ಲೇಟ್ ಪೀರಿಯೇಡ್ಸ್  ಎಂದು ಕರೆಯುತ್ತಾರೆ. ಸಾಮಾನ್ಯವಾಗಿ, 5 ಅಥವಾ ಅದಕ್ಕಿಂತ ಹೆಚ್ಚಿನ ದಿನಗಳ ನಂತರ  ಮುಟ್ಟು ಬಂದಾಗ, ಆತಂಕ ಕಾಣಿಸಿಕೊಳ್ಳುತ್ತದೆ. ಆದರೆ ಹೀಗೆ ಕೆಲವೊಮ್ಮೆ ಹೆಣ್ಣುಮಕ್ಕಳಿಗೆ ಮುಟ್ಟು ಯಾಕೆ ತಡವಾಗಿ ಕಾಣಿಸಿಕೊಳ್ಳುತ್ತದೆ ಎನ್ನುವ ಕಾರಣ  ತಿಳಿದುಕೊಂಡರೆ ಆತಂಕ ಪಡುವ ಅಗತ್ಯ ಇರುವುದಿಲ್ಲ. 


ಇದನ್ನೂ ಓದಿ : Taming Diabetes: ಅಡುಗೆ ಮನೆಯಲ್ಲಿರುವ ಮೆಂತ್ಯ ಮತ್ತು ಜೇನುತುಪ್ಪ ಮಧುಮೇಹ ನಿಯಂತ್ರಣಕ್ಕೆ ರಾಮಬಾಣ ಉಪಾಯ, ಈ ರೀತಿ ಸೇವಿಸಿ!


ತಡವಾದ ಪೀರಿಯೇಡ್ಸ್ ಗೆ ಕಾರಣ :
1. ಒತ್ತಡ:

ನಿಮ್ಮ ಜೀವನದಲ್ಲಿ ಹೆಚ್ಚು ಒತ್ತಡವಿದ್ದರೆ ಅದು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತದೆ. ದೇಹದಲ್ಲಿ ಹಾರ್ಮೋನ್ ಅಸಮತೋಲನ ಪೀರಿಯೇಡ್ಸ್  ತಡವಾಗುವುದಕ್ಕೆ ಪ್ರಮುಖ ಕಾರಣವಾಗಬಹುದು. 


2. ಅಸ್ವಸ್ಥರಾಗಿರುವುದು:
ಸಾಮಾನ್ಯವಾಗಿ, ಅನಾರೋಗ್ಯವು ಲೇಟ್ ಪೀರಿಯೇಡ್ಸ್ ಸಮಸ್ಯೆಯನ್ನು ಉಂಟುಮಾಡಬಹುದು. ವಿಶೇಷವಾಗಿ ನೀವು ಶೀತ ಅಥವಾ ಕೆಲವು ರೀತಿಯ ಸೋಂಕನ್ನು ಹೊಂದಿರುವಾಗ ಪೀರಿಯೇಡ್ಸ್ ತಡವಾಗುವುದು ಸಾಮಾನ್ಯ. 


3. ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ:
ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾದಾಗ, ಮುಟ್ಟಿನ ವಿಳಂಬವಾಗಬಹುದು. ಇದನ್ನು ತಪ್ಪಿಸಲು, ದೈನಂದಿನ ಆಹಾರದಲ್ಲಿ ಪಾಲಕ್ ಸೊಪ್ಪು, ಬಟಾಣಿ, ಕೋಸುಗಡ್ಡೆ, ಬಸಳೆ,  ಮಾಂಸ, ಮೊಟ್ಟೆ ಮತ್ತು ಕೊಬ್ಬಿನ ಅಂಶ ಇರುವ ಮೀನುಗಳನ್ನು ಸೇವಿಸಬೇಕು. 


ಇದನ್ನೂ ಓದಿ Cholesterol Control: ಚಳಿಗಾಲದಲ್ಲಿಯೂ ಬೆಣ್ಣೆಯಂತೆ ಕರಗುತ್ತೆ ಕೆಟ್ಟ ಕೊಲೆಸ್ಟ್ರಾಲ್, ಈ 5 ಸಂಗತಿಗಳು ನಿಮ್ಮ ಆಹಾರದಲ್ಲಿರಲಿ!


4. ನಿರ್ಜಲೀಕರಣ:
ನಿಮ್ಮ ದೇಹದಲ್ಲಿ ನೀರಿನ ಕೊರತೆ ಉಂಟಾಗಿದ್ದರೆ ಅದು ಲೇಟ್  ಪೀರಿಯೇಡ್ಸ್ ಗೆ ಕಾರಣವಾಗುತ್ತದೆ. ಆದ್ದರಿಂದ ದಿನವಿಡೀ ಕನಿಷ್ಠ 7 ರಿಂದ 8 ಗ್ಲಾಸ್ ನೀರನ್ನು ಕುಡಿಯಿರಿ . ಅಥವಾ ಅದೇ ಪ್ರಮಾಣದಲ್ಲಿ ಆರೋಗ್ಯಕರ ದ್ರವಗಳನ್ನು ತೆಗೆದುಕೊಳ್ಳಿ.


5. ವ್ಯಾಯಾಮ:
ನಿಮ್ಮ ದೈನಂದಿನ ವ್ಯಾಯಾಮದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡುತ್ತಿದ್ದರೆ, ಅದು ನಿಮ್ಮ  ಪೀರಿಯೇಡ್ಸ್ ಅನ್ನು ವಿಳಂಬಗೊಳಿಸುತ್ತದೆ. ತರಬೇತುದಾರರ ಸಲಹೆಯನ್ನು ಪಡೆದ ನಂತರವೇ ನಿಮ್ಮ ವ್ಯಾಯಾಮದಲ್ಲಿ ಬದಲಾವಣೆಗಳನ್ನು ತರುವುದು ಉತ್ತಮ.


6. ಸ್ಲೀಪಿಂಗ್ ಪ್ಯಾಟರ್ನ್‌ನಲ್ಲಿನ ಬದಲಾವಣೆಗಳು:
ನಿದ್ರೆಯನ್ನು ನಿಯಂತ್ರಿಸುವ ಮೆಲಟೋನಿನ್ ಎಂಬ ಹಾರ್ಮೋನ್ ನಿಮ್ಮ ಪೀರಿಯೇಡ್ಸ್ ಚಕ್ರದ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ ಮಲಗಲು ಸಮಯವನ್ನು ನಿಗದಿಪಡಿಸಿ ಮತ್ತು ಅದನ್ನು ಅನುಸರಿಸಿ.


ಇದನ್ನೂ ಓದಿ : Kidney Health : ಪಾದದಲ್ಲಿ ಕಾಣುವ ಈ ಲಕ್ಷಣಗಳು ಕಿಡ್ನಿ ವೈಫಲ್ಯವನ್ನು ಸೂಚಿಸುತ್ತದೆ


8. ಥೈರಾಯ್ಡ್ ಸಮಸ್ಯೆ:
ನೀವು Underactive Thyroid ಹೊಂದಿದ್ದರೆ, ಅದು  ಮುಟ್ಟು ತಡವಾಗಲು  ಕಾರಣವಾಗಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ