Taming Diabetes: ಅಡುಗೆ ಮನೆಯಲ್ಲಿರುವ ಮೆಂತ್ಯ ಮತ್ತು ಜೇನುತುಪ್ಪ ಮಧುಮೇಹ ನಿಯಂತ್ರಣಕ್ಕೆ ರಾಮಬಾಣ ಉಪಾಯ, ಈ ರೀತಿ ಸೇವಿಸಿ!

Diabetes Control Tips: ಮೆಂತ್ಯ ಬೀಜಗಳು ಮತ್ತು ಜೇನುತುಪ್ಪವು ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಾಕಷ್ಟು ಪ್ರಯೋಜನಕಾರಿ ಎಂದು ಸಾಬೀತಾಗುತ್ತವೆ. ಬನ್ನಿ, ಅದನ್ನು ಹೇಗೆ ಬಳಸಬೇಕೆಂಬುದನ್ನು ತಿಳಿದುಕೊಳ್ಳೋಣ, (Health News In Kannada)  

Written by - Nitin Tabib | Last Updated : Jan 30, 2024, 09:29 PM IST
  • ಮಧುಮೇಹವನ್ನು ನಿಯಂತ್ರಿಸಲು, ಒಂದು ಚಮಚ ಮೆಂತ್ಯ ಕಾಳುಗಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಹಾಕಿ.
  • ಇದನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಮತ್ತು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
  • ನಿಯಮಿತವಾಗಿ ಮೆಂತ್ಯ ಮತ್ತು ಜೇನುತುಪ್ಪವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  • ಇದಲ್ಲದೆ, ಇದು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಮತ್ತು ತೂಕವನ್ನು ಇಳಿಕೆ ಮಾಡಲು ಕೂಡ ಸಹಾಯ ಮಾಡುತ್ತದೆ.
Taming Diabetes: ಅಡುಗೆ ಮನೆಯಲ್ಲಿರುವ ಮೆಂತ್ಯ ಮತ್ತು ಜೇನುತುಪ್ಪ ಮಧುಮೇಹ ನಿಯಂತ್ರಣಕ್ಕೆ ರಾಮಬಾಣ ಉಪಾಯ, ಈ ರೀತಿ ಸೇವಿಸಿ! title=

Honey-Fenugreek For Diabetes: ಮಧುಮೇಹವು ಒಂದು ಗುಣಪಡಿಸಲಾಗದ ದೀರ್ಘಕಾಲದ  ಕಾಯಿಲೆಯಾಗಿದೆ. ಒಮ್ಮೆ ಈ ರೋಗ ಬಂದರೆ ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಸಾಧ್ಯವಿಲ್ಲ. ಆಹಾರ ಮತ್ತು ಜೀವನಶೈಲಿಯಲ್ಲಿ ಸುಧಾರಣೆ ಮತ್ತು ಔಷಧಿಗಳ ಮೂಲಕ ಮಾತ್ರ ಇದನ್ನು ನಿಯಂತ್ರಿಸಬಹುದು. ಒಬ್ಬ ವ್ಯಕ್ತಿಯು ಮಧುಮೇಹವನ್ನು ಹೊಂದಿರುವಾಗ, ವ್ಯಕ್ತಿಯ ರಕ್ತದಲ್ಲಿನ ಸಕ್ಕರೆಯ ಮಟ್ಟವು ಅನಿಯಂತ್ರಿತವಾಗಿ ಹೆಚ್ಚಾಗುತ್ತದೆ, ಇದು ದೇಹಕ್ಕೆ ಮಾರಕವಾಗಬಹುದು. ಆರೋಗ್ಯ ತಜ್ಞರ ಪ್ರಕಾರ, ಮಧುಮೇಹವನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಏಕೆಂದರೆ ಅದರ ಲಕ್ಷಣಗಳು ಆರಂಭದಲ್ಲಿ ಗೋಚರಿಸುವುದಿಲ್ಲ. ಈ ರೋಗವನ್ನು ಸಮಯಕ್ಕೆ ನಿಯಂತ್ರಿಸದಿದ್ದರೆ, ಇದು ದೇಹದ ಪ್ರಮುಖ ಅಂಗಗಳಿಗೆ ಹಾನಿ ಮಾಡುತ್ತದೆ. ಆದಾಗ್ಯೂ, ಕೆಲವು ಮನೆಮದ್ದುಗಳ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಮೆಂತ್ಯ ಮತ್ತು ಜೇನುತುಪ್ಪ ಕೂಡ ಈ ಪರಿಹಾರಗಳಲ್ಲಿ ಶಾಮೀಲಾಗಿವೆ. ಹಾಗಾದರೆ, ಮಧುಮೇಹದಲ್ಲಿ ಮೆಂತ್ಯ ಮತ್ತು ಜೇನುತುಪ್ಪವನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು ಮತ್ತು ಸೇವನೆಯ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ,(Health News In Kannada)

ಮಧುಮೇಹದಲ್ಲಿ ಮೆಂತ್ಯ ಮತ್ತು ಜೇನುತುಪ್ಪ ಹೇಗೆ ಪ್ರಯೋಜನಕಾರಿಯಾಗಿದೆ?
ಮೆಂತ್ಯವು ಪ್ರತಿಯೊಂದು ಭಾರತೀಯ ಮನೆಯ ಅಡುಗೆಮನೆಯಲ್ಲಿ ಇರುವ ಒಂದು ಸಾಂಭಾರ ಪದಾರ್ಥವಾಗಿದೆ. ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಮಧುಮೇಹದಲ್ಲಿ ಮೆಂತ್ಯ ಮತ್ತು ಜೇನುತುಪ್ಪವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಅವು ಸಹಾಯ ಮಾಡುತ್ತವೆ. ಮೆಂತ್ಯ ಬೀಜಗಳಲ್ಲಿ ಫೈಬರ್ ಸಮೃದ್ಧವಾಗಿದೆ, ಇದು ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಲು ಕೆಲಸ ಮಾಡುತ್ತದೆ. ಹೆಚ್ಚುವರಿಯಾಗಿ, ಇದು ಆಲ್ಕಲಾಯ್ಡ್‌ಗಳನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಇನ್ಸುಲಿನ್ ಪ್ರತಿರೋಧವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದೇ ವೇಳೆ ಉರಿಯೂತದ ಗುಣಲಕ್ಷಣಗಳು ಜೇನುತುಪ್ಪದಲ್ಲಿ ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ, ಇದು ದೇಹದಲ್ಲಿನ ಊತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಮೆಂತ್ಯ ಮತ್ತು ಜೇನುತುಪ್ಪದ ಮಿಶ್ರಣವನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಅಷ್ಟೇ ಅಲ್ಲ, ಜೀರ್ಣಕ್ರಿಯೆ, ರಕ್ತಹೀನತೆ, ಕೊಲೆಸ್ಟ್ರಾಲ್ ಮತ್ತು ಹೃದ್ರೋಗಗಳನ್ನು ಹೋಗಲಾಡಿಸಲು ಇದು ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ-Cholesterol Control: ಚಳಿಗಾಲದಲ್ಲಿಯೂ ಬೆಣ್ಣೆಯಂತೆ ಕರಗುತ್ತೆ ಕೆಟ್ಟ ಕೊಲೆಸ್ಟ್ರಾಲ್, ಈ 5 ಸಂಗತಿಗಳು ನಿಮ್ಮ ಆಹಾರದಲ್ಲಿರಲಿ!

ಮಧುಮೇಹದಲ್ಲಿ ಮೆಂತ್ಯ ಮತ್ತು ಜೇನುತುಪ್ಪವನ್ನು ಹೇಗೆ ಸೇವಿಸಬೇಕು
ಮಧುಮೇಹವನ್ನು ನಿಯಂತ್ರಿಸಲು, ಒಂದು ಚಮಚ ಮೆಂತ್ಯ ಕಾಳುಗಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಹಾಕಿ. ಇದನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಮತ್ತು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ನಿಯಮಿತವಾಗಿ ಮೆಂತ್ಯ ಮತ್ತು ಜೇನುತುಪ್ಪವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಮತ್ತು ತೂಕವನ್ನು ಇಳಿಕೆ ಮಾಡಲು ಕೂಡ  ಸಹಾಯ ಮಾಡುತ್ತದೆ.

ಇದನ್ನೂ ಓದಿ-Green Garlic Benefits: ಹಲವು ಕಾಯಿಲೆಗಳ ನಿವಾರಣೆಗೆ ರಾಮಬಾಣ ಹಸಿರು ಬೆಳ್ಳುಳ್ಳಿ ಮತ್ತು ಸೊಪ್ಪು, ಸಿಗುತ್ತವೆ ಹಲವು ಲಾಭಗಳು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News