Red Banana Health Benefits: ಕೆಂಪು ಬಾಳೆಹಣ್ಣಿನ ಆರೋಗ್ಯಕರ ಲಾಭಗಳ ಕುರಿತು ನಿಮಗೆ ತಿಳಿದಿದೆಯೇ?
Red Banana Health Benefits:ಕೆಂಪು ಬಾಳೆಹಣ್ಣುಗಳು ಆಕಾರದಲ್ಲಿ ಹಳದಿ ಬಾಳೆಹಣ್ಣುಗಳಿಗಿಂತ ಚಿಕ್ಕದಾಗಿರುತ್ತವೆ.
Red Banana Health Benefits: ಸಾಮಾನ್ಯವಾಗಿ ನೀವು ಹಳದಿ ಮತ್ತು ಹಸಿರು ಬಾಳೆಹಣ್ಣುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ನೋಡಿರಬಹುದು. ಆದರೆ ನೀವು ಎಂದಾದರೂ ಕೆಂಪು ಬಾಳೆಹಣ್ಣನ್ನು ಸೇವಿಸಿದ್ದೀರಾ? ಕೆಂಪು ಬಾಳೆಹಣ್ಣಿನ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಹಳದಿ ಬಾಳೆಹಣ್ಣು ನಮ್ಮ ಆರೋಗ್ಯಕ್ಕೆ ಒಳ್ಳೆಯದು (Benefits Of Banana) ಆದರೆ ಕೆಂಪು ಬಾಳೆಹಣ್ಣು (Red Banana) ತನ್ನದೇ ಆದ ವಿಭಿನ್ನ ಪ್ರಯೋಜನಗಳನ್ನು ಹೊಂದಿದೆ. ಕೆಂಪು ಬಾಳೆಹಣ್ಣುಗಳು ಹಳದಿ ಬಾಳೆಹಣ್ಣುಗಳಿಗಿಂತ ಚಿಕ್ಕದಾಗಿರುತ್ತವೆ. ಹಾಗಾದರೆ ಬನ್ನಿ ಕೆಂಪು ಬಾಳೆಹಣ್ಣಿನ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.
ಕಣ್ಣಿನ ಆರೋಗ್ಯಕ್ಕೆ ಉತ್ತಮ - ಇದು ನಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕಣ್ಣುಗಳು ದುರ್ಬಲವಾಗಿರುವ ಅಥವಾ ದೃಷ್ಟಿ ದುರ್ಬಲವಾಗಿರುವ ಜನರು ಇದರ ಸೇವನೆಯನ್ನು ಮಾಡಬಹುದು.
ಕ್ಯಾನ್ಸರ್ ಗೆ ಮಾರಕ ಮದ್ದು- ಕೆಂಪು ಬಾಳೆಹಣ್ಣಿನಲ್ಲಿ ಹೇರಳ ಪ್ರಮಾಣದಲ್ಲಿ ಪೊಟ್ಯಾಷಿಯಂ ಇರುತ್ತದೆ. ಇದರಿಂದ ಕ್ಯಾನ್ಸರ್ ಹಾಗೂ ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆಯಾಗುತ್ತದೆ.
ಇದನ್ನು ಓದಿ- ಅತಿಯಾದ Tomato ಸೇವನೆ ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು, ಎಚ್ಚರ!
ತೂಕ ಇಳಿಕೆಗೆ ಉತ್ತಮ - ಈ ಬಾಳೆಹಣ್ಣುಗಳಲ್ಲಿ ಕ್ಯಾಲರಿ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಹೀಗಾಗಿ ತೂಕ ಇಳಿಕೆಗೆ ಇದು ತುಂಬಾ ಉತ್ತಮ ಹಣ್ಣಾಗಿದೆ. ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಹೀಗಾಗಿ ನಿಮಗೆ ತುಂಬಾ ಕಡಿಮೆ ಹಸಿವೆಯಾಗುತ್ತದೆ.
ಇದನ್ನು ಓದಿ-Smartphone Side Effects ಎಚ್ಚರ..! ನಿಮ್ಮ ಮಗು ಸ್ಮಾರ್ಟ್ ಫೋನಿಗೆ ಅಡಿಕ್ಟ್ ಆಗಿದೆಯಾ.ಕಾದಿದೆ ಅಪಾಯ..!
ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ - ಕೆಂಪು ಬಾಳೆಹಣ್ಣು ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಹೈ ಬ್ಲಡ್ ಪ್ರೆಶರ್ (High BP) ಇರುವವರು ಕೆಂಪು ಬಾಳೆಹಣ್ಣು ಸೇವಿಸಬೇಕು.
ಇದನ್ನು ಓದಿ-ರಾತ್ರಿ ಪದೇ ಪದೇ ಎಚ್ಚರವಾಗುತ್ತಾ..? ನಿದ್ರೆ ಬರೋದೇ ಇಲ್ವಾ..? ಸುಖ ನಿದ್ರೆಗೆ ಸಿಂಪಲ್ ಟಿಪ್ಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.