ರಾತ್ರಿ ಪದೇ ಪದೇ ಎಚ್ಚರವಾಗುತ್ತಾ..? ನಿದ್ರೆ ಬರೋದೇ ಇಲ್ವಾ..? ಸುಖ ನಿದ್ರೆಗೆ ಸಿಂಪಲ್ ಟಿಪ್ಸ್

ಸುಖ ನಿದ್ರೆ ಸಿಕ್ಕಿದರೆ ಅದೇ ಸ್ವರ್ಗ. ಆದರೆ ಕೆಲವರಿಗೆ ರಾತ್ರಿ ಪದೇ ಪದೇ ಎಚ್ಚರವಾಗುತ್ತದೆ. ನಿದ್ರೆ ಭಂಗವಾಗುತ್ತದೆ. ಕೆಲವರಿಗಂತೂ ನಿದ್ರೆ ಬರೋದೇ ಇಲ್ಲ.

Written by - Ranjitha R K | Last Updated : Jan 25, 2021, 11:00 AM IST
  • ಸುಖ ನಿದ್ರೆ ಸಿಕ್ಕಿದರೆ ಅದೇ ಸ್ವರ್ಗ. ಆದರೆ ಕೆಲವರಿಗೆ ರಾತ್ರಿ ಪದೇ ಪದೇ ಎಚ್ಚರವಾಗುತ್ತದೆ.
  • ನಿಮಗೆ ಪದೇ ಪದೇ ನಿದ್ರಾಭಂಗವಾಗುತ್ತಿದೆಯೆಂದರೆ ನಿಮ್ಮ ಲೈಫ್ ಸ್ಟೈಲ್ ಬದಲಾಗಿದೆ ಎಂದೇ ಅರ್ಥ.
  • ಇಲ್ಲಿ ಸುಖನಿದ್ರೆಗಿದೆ ಸಿಂಪಲ್ ಟಿಪ್ಸ್ ಹೇಳಿದ್ದೇವೆ, ಒಮ್ಮೆ ಅನುಸರಿಸಿನೋಡಿ
ರಾತ್ರಿ ಪದೇ ಪದೇ ಎಚ್ಚರವಾಗುತ್ತಾ..? ನಿದ್ರೆ ಬರೋದೇ ಇಲ್ವಾ..? ಸುಖ ನಿದ್ರೆಗೆ ಸಿಂಪಲ್ ಟಿಪ್ಸ್ title=
ಸುಖನಿದ್ರೆಗಿದೆ ಸಿಂಪಲ್ ಟಿಪ್ಸ್ (file photo)

ಬೆಂಗಳೂರು : ಸುಖ ನಿದ್ರೆ (Proper Sleep) ಸಿಕ್ಕಿದರೆ ಅದೇ ಸ್ವರ್ಗ. ಆದರೆ ಕೆಲವರಿಗೆ ರಾತ್ರಿ ಪದೇ ಪದೇ ಎಚ್ಚರವಾಗುತ್ತದೆ. ನಿದ್ರೆ ಭಂಗವಾಗುತ್ತದೆ. ಕೆಲವರಿಗಂತೂ ನಿದ್ರೆ ಬರೋದೇ ಇಲ್ಲ. ಸಣ್ಣ ಸದ್ದಾದರೂ ಪಟಕನೆ ಎಚ್ಚರ  ಆಗಿ ಬಿಡುತ್ತದೆ. ಎಲ್ಲೊ ಒಮ್ಮೆ ಟಾಯ್ಲೆಟಿಗೆ ಹೋಗಲು ಎಚ್ಚರ ಆದರೆ ಸಮಸ್ಯೆ ಏನಲ್ಲ. ಆದರೆ, ಪದೇ ಪದೇ ನಿದ್ರೆ ಭಂಗ ಆದರೆ, ಎಲ್ಲೋ ಏನೋ ಯಡವಟ್ಟಾಗಿದೆ ಅಂತಲೇ ಅರ್ಥ. 

ನಿಮಗೆ ಪದೇ ಪದೇ ನಿದ್ರಾಭಂಗವಾಗುತ್ತಿದೆಯೆಂದರೆ ನಿಮ್ಮ ಲೈಫ್ ಸ್ಟೈಲ್ (Life style) ಬದಲಾಗಿದೆ ಎಂದೇ ಅರ್ಥ.  ಸ್ಟ್ರೆಸ್ (Stress) ಇದ್ದಾಗ, ಮೆನೋಪಾಸ್ ಆಗುವಾಗ, ಸ್ಲೀಪ್ ಅಪ್ನಿಯಾ ಕಾಯಿಲೆ ಇದ್ದಾಗ ರಾತ್ರಿ ನಿದ್ರೆ ಬರೋದೆ ಇಲ್ಲ.

ಇದನ್ನೂ ಓದಿಮಹಿಳೆಯರ ಆರೋಗ್ಯ, ಸೌಂದರ್ಯಕ್ಕೆ ರಾಮಬಾಣ Soybean

ಸ್ಲೀಪ್ ಆಪ್ನಿಯಾ ಕಾಯಿಲೆ..!
ಸ್ಲೀಪ್ ಆಪ್ನಿಯಾ  (Sleep Apnea) ನಿದ್ರೆಗೆ ಸಂಬಂಧಿಸಿದ ಒಂದು ಗಂಭೀರ ಕಾಯಿಲೆ. ನಿದ್ರೆಗೆ ಜಾರಿದಾಗ ಶ್ವಾಸನಾಳ ಏಕಾಏಕಿ ಬಂದ್ ಆಗುತ್ತದೆ. ಕೂಡಲೇ ಆಗ ಎಚ್ಚರ ಆಗುತ್ತದೆ. ಇದನ್ನು  ಸ್ಲೀಪ್ ಅಪ್ನಿಯಾ ಕಾಯಿಲೆ ಎನ್ನುತ್ತಾರೆ. ಬ್ರೀದಿಂಗ್ ಮೆಶಿನ್ (Breathing Machine) ಇದಕ್ಕೊಂದು ಪರಿಹಾರ

ಮೊನೊಪಾಸ್ ಕೂಡಾ ಕಾರಣವಾಗಿರಬಹುದು.
40ಕ್ಕಿಂತ ಹೆಚ್ಚಿನ ವಯೋಮಾನದವರಾಗಿದ್ದರೆ, ನಿಮ್ಮ ನಿದ್ರೆಗೆ ಭಂಗ ಉಂಟು ಮಾಡುವುದು  ಮೊನೋಪಾಸ್(Menopause).  ಇದರಿಂದ ನಡುರಾತ್ರಿ ಸಿಕ್ಕಾ ಪಟ್ಟೆ ಬೆವರು ಸುರಿಯಲಾರಂಭವಾಗುತ್ತದೆ. ನಿದ್ರೆಗೆ ಭಂಗ ಉಂಟಾಗುತ್ತದೆ.

ಇದನ್ನೂ ಓದಿFruits for Good Health : ಖಂಡಿತ ಓದಿ, ನಿತ್ಯ ಸಂಜೀವಿನಿ ಈ ಹಣ್ಣು..! ಚೆನ್ನಾಗಿ ತಿನ್ನಿ

ಸುಖ ನಿದ್ರೆಗೆ  ಇಲ್ಲಿದೆ ಸಿಂಪಲ್ ಟಿಪ್ಸ್ (Sleeping Tips) : 
1. ಮಲಗುವ ಮುನ್ನ ಭರ್ಜರಿ ಭೋಜನ ಬೇಡ.  ಊಟಕ್ಕೂ ನಿದ್ರೆಗೂ ಕನಿಷ್ಠ 2 ಗಂಟೆ ಗ್ಯಾಪ್ ಬೇಕು
2. ನಿದ್ರೆಗೆ  ಮುನ್ನ ಬಿಸಿನೀರಿನ (Hot water) ಸ್ನಾನ ಮಾಡಿ ನೋಡಿ. ಶರೀರ ರಿಲ್ಯಾಕ್ಸ್ ಆಗುತ್ತದೆ. ರಾತ್ರಿ ಗಟ್ಟಿ ನಿದ್ರೆ ಬರುತ್ತದೆ. 
3.  ಮನಸ್ಸಿಗೆ ಮುದ ನೀಡುವ ಸಂಗೀತ (Music) ಕೇಳಿ ನೋಡಿ. ಮನಸ್ಸು ಸ್ಟ್ರೆಸ್ ನಿಂದ ಹೊರಬರುತ್ತದೆ. ಸುಖ ನಿದ್ರೆ ಪಕ್ಕಾ .
4. ಮೊಬೈಲ್ (Mobile) ಅಥವಾ ಬೇರೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು ಬೆಡ್ ರೂಮಿಗೆ (bed room) ಬರಬಾರದು. ಮಲಗುವ ಅರ್ಧ ಗಂಟೆ ಮೊದಲು  ಮೊಬೈಲ್ ಬಂದ್ ಮಾಡಿ. 
5. ಬೆಡ್ ರೂಮ್ ಸ್ವಚ್ಛ ಹಾಗೂ ಶಿಸ್ತಿನಲ್ಲಿರಲಿ. ಕಿಟಕಿಗೆ ದಪ್ಪ ಪರದೆ ಹಾಕಿ. ನೈಟ್ ಲ್ಯಾಂಪ್ ಇದ್ದರೆ ಅದರ ಪ್ರಕಾಶ ಕಡಿಮೆ ಮಾಡಿ
6. ಆಲ್ಕೋಹಾಲ್ (Alcohal) ಏರಿಸಿದರೆ ನಿದ್ರೆ ಬರುತ್ತದೆ ಅನ್ನೋದು ತಪ್ಪು ಗ್ರಹಿಕೆ. ಒಂದು ಪೆಗ್ ಆಲ್ಕೋಹಾಲ್ ಹಾಕಿದರೆ ನಿದ್ರೆ ಏನೋ ಬರುತ್ತೆ. ಯಾಕಂದರೆ, ಅಲ್ಕೋಹಾಲಿನಲ್ಲಿ ನಿದ್ರೆಗೆ ಉತ್ತೇಜನ ನೀಡುವ ಅಂಶಗಳಿವೆ. ಆದರೆ, ಪೆಗ್ ಹಾಕೋದು ಅಭ್ಯಾಸವಾಗಿ ಬಿಟ್ಟರೆ ಬೇರೆ ಆರೋಗ್ಯದ ಸಮಸ್ಯೆಗಳು (Health problem) ಸೃಷ್ಟಿಯಾಗುತ್ತದೆ. ಹಾಗಾಗಿ ಮಲಗುವ ಮುನ್ನ ಪೆಗ್ ಬೇಡ.
7.  ಎಲ್ಲಾದಕ್ಕೂ ಮುಖ್ಯವಾಗಿ ನಿದ್ರೆಗೆ ಒಂದು ಟೈಂ ಟೇಬಲ್ ಇರಲಿ. ರೂಟಿನ್ ಪ್ರಕಾರವೇ ನಿದ್ರೆ ಮಾಡಬೇಕು. ಯಾವುದೇ ಸಮಯಕ್ಕೆ ಮಲಗುವುದು. ಏಳುವುದು ಸರಿಯಲ್ಲ.

ಇದನ್ನೂ ಓದಿ :ಈ ನೀರು..ನಿಜಕ್ಕೂ ಅಮೃತ ಸಮಾನ..! ಜಪಾನಿ ಜಲ ಥೆರಪಿ ಟ್ರೈ ಮಾಡಿ. ತುಂಬಾ ಸಿಂಪಲ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News