ಬೆಂಗಳೂರು : ತೂಕ ಇಳಿಸಿಕೊಳ್ಳಲು ನಾವು ಹಲವು ಮಾರ್ಗಗಳನ್ನು ಪ್ರಯತ್ನಿಸುತ್ತಿರುತ್ತೇವೆ. ಅದರಲ್ಲೂ ಮೈ ಕೈ ತೆಳ್ಳಗಿದ್ದು, ಹೊಟ್ಟೆಯ ಭಾಗದಲ್ಲೇ ಕೊಬ್ಬು ಸೇರಿಕೊಂಡಿದ್ದರೆ ಅದನ್ನು ಕರಗಿಸುವುದು ಬಹಳ ಕಷ್ಟ. ತೂಕ ಇಳಿಸಿಕೊಳ್ಳಲು ಮುಖ್ಯವಾಗಿ ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರಬೇಕಾಗುತ್ತದೆ. ನಾವು ಅನುಸರಿಸುವ ಆಹಾರ ಕ್ರಮವೇ  ನಮ್ಮ ದೇಹ ತೂಕ ಹೆಚ್ಚಾಗಲು ಮುಖ್ಯ ಕಾರಣ. ದೈನಂದಿನ ಜೀವನದಲ್ಲಿ ಅನಗತ್ಯ ಮತ್ತು ಅನಾರೋಗ್ಯಕರ ಆಹಾರವನ್ನು ಸೇವಿಸುವುದರಿಂದ  ಅದು ದೇಹದ ಮೇಲೆ ನೇರ ಪರಿಣಾಮ ಬೀರುತ್ತದೆ. 


COMMERCIAL BREAK
SCROLL TO CONTINUE READING

ಸ್ಥೂಲಕಾಯವನ್ನು ಕಡಿಮೆ ಮಾಡುವ ಸಲುವಾಗಿ ಕೆಲವರು ಜಿಮ್‌ಗೆ ಹೋಗುತ್ತಾರೆ. ಕೆಲವರು ಕಠಿಣ ಆಹಾರಕ್ರಮದ ಮೊರೆ ಹೋಗುತ್ತಾರೆ. ಇನ್ನು ಕೆಲವರು ಮಾತ್ರೆಗಳನ್ನು ಸಹ ತೆಗೆದುಕೊಳ್ಳುತ್ತಾರೆ. ಆದರೆ ಇದರಿಂದ ಯಾವ ಪ್ರಯೋಜನವೂ ಕಂಡು ಬರದೇ ಅಡ್ಡಪರಿಣಾಮಗಳಿಂದಲೇ ಬಳಲುತ್ತಿರುತ್ತಾರೆ. ಈ ಯಾವುದೇ ಸಮಸ್ಯೆಗಳಿಲ್ಲದೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಅನೇಕ ಮನೆಮದ್ದುಗಳಿವೆ. 


ಇದನ್ನೂ ಓದಿ : Weight loss tips: 1 ತಿಂಗಳಲ್ಲಿ 10 kg ತೂಕ ಇಳಿಸಲು ದಿನಕ್ಕೆ ಎಷ್ಟು ದೂರ ನಡೆಯಬೇಕು?


ಎಣ್ಣೆಯುಕ್ತ ಆಹಾರವನ್ನು ತಪ್ಪಿಸಿ :
ನಮ್ಮಲ್ಲಿ ಅನೇಕರಿಗೆ ಕರಿದ ಹುರಿದ ಆಹಾರ ತಿನ್ನುವುದೆಂದರೆ ಪಂಚ ಪ್ರಾಣ.  ದಿನದಲ್ಲಿ ಒಮ್ಮೆಯಾದರೂ ಇಂತಹ ಆಹಾರಗಳನ್ನು ಸೇವಿಸಬೇಕು. ಇದು ತಿನ್ನುವುದಕ್ಕೆ ತುಂಬಾ ರುಚಿಯಾಗಿದ್ದರೂ, ಆರೋಗ್ಯದ ದೃಷ್ಟಿಯಿಂದ ಮಾತ್ರ ಒಳ್ಳೆಯದಲ್ಲ. ಸಣ್ಣಗಾಗಬೇಕು ಹೊಟ್ಟೆಯ ಕೊಬ್ಬು ಕರಗಬೇಕು ಎಂದಿದ್ದರೆ ಮೊದಲು ಎಣ್ಣೆ ಪದಾರ್ಥಗಳಿಂದ ದೂರ ಇರಬೇಕು.  


ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ:
ಹಣ್ಣುಗಳು ಮತ್ತು ತರಕಾರಿಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಿಂದಾಗಿ ದೇಹವು ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಪಡೆಯುತ್ತದೆ. ಅದಕ್ಕಾಗಿಯೇ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಪ್ರತಿದಿನ ಸೇವಿಸಬೇಕು. ಸೇಬು, ಕಿತ್ತಳೆ, ದಾಳಿಂಬೆ, ಪಾಲಕ್,  ಬಾಳೆ ಕಾಯಿ, , ಎಲೆಕೋಸು ಇವುಗಳು ತೂಕ ಹೆಚ್ಚಾಗಲು  ಬಿಡುವುದಿಲ್ಲ. 


ಇದನ್ನೂ ಓದಿ ಈ ಆಹಾರಗಳು ಅಸಿಡಿಟಿಗೆ ಕಾರಣವಾಗುತ್ತವೆ..ಇವುಗಳಿಂದ ದೂರವಿರಿ..!


ಬೆಳಿಗ್ಗೆ ಈ ಪಾನೀಯವನ್ನು ಕುಡಿಯಿರಿ :
ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ನೀರನ್ನು ಬಿಸಿ ಮಾಡಿ ಅದಕ್ಕೆ  ಒಂದು ಚಮಚ ಜೇನುತುಪ್ಪ ಮತ್ತು ಅರ್ಧ ನಿಂಬೆರಸವನ್ನು ಸೇರಿಸಿ.   ಈ ಪಾನೀಯವನ್ನು ಪ್ರತಿ ನಿತ್ಯ ಕುಡಿಯುತ್ತಾ ಬಂದರೆ ಹೊಟ್ಟೆ ಮತ್ತು ಸೊಂಟದ ಭಾಗದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 


ಪ್ರತಿದಿನ 10,000 ಹೆಜ್ಜೆ ನಡೆಯಿರಿ : 
ತೂಕ ಇಳಿಸಿಕೊಳ್ಳಲು, ಉತ್ತಮ ಆಹಾರದೊಂದಿಗೆ ಸರಿಯಾದ ವ್ಯಾಯಾಮ ಕೂಡಾ ಅಗತ್ಯ. ದಿನಕ್ಕೆ ಕನಿಷ್ಠ 10,000 ಹೆಜ್ಜೆಗಳನ್ನು ನಡೆಯಬೇಕು.  ಇದನ್ನು ಟ್ರ್ಯಾಕ್ ಮಾಡಲು, ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸ್ಮಾರ್ಟ್ ವಾಚ್‌ಗಳು ಲಭ್ಯವಿದೆ. ಮೊಬೈಲ್ ಅಪ್ಲಿಕೇಶನ್‌ನ ಸಹಾಯದಿಂದ ಕೂಡಾ ನಿಮ್ಮ ಹೆಜ್ಜೆಯನ್ನು ಲೆಕ್ಕ ಹಾಕಬಹುದು.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.