ಬೆಂಗಳೂರು: ಏನಿದು ರೆಮ್ಡೆಸಿವಿರ್..? ಇದು ಒಂದು ರೆಮ್ಡೆಸಿವಿರ್ ಆಂಟಿವೈರಲ್ ಔಷಧಿಯಾಗಿದೆ. 2009ರಲ್ಲಿ ಹೆಪಟೈಸಿಟ್ ಸಿ ಗಾಗೀ ಈ ಔಷಧಿಯನ್ನು ಕಂಡು ಹಿಡಿಯಲಾಗಿತ್ತು. 2014ರಲ್ಲಿ ಇದನ್ನು ಎಬೋಲಾಗೆ ಪರಿಣಾಮಕಾರಿ ಔಷಧಿ ಎಂದು ಬಳಸಲಾಗಿದೆ. ಇದೀಗ ಈ ಔಷಧಿಯನ್ನು ತೀವ್ರ ಉಸಿರಾಟ ರೋಗಲಕ್ಷಣ (MERS) ಮತ್ತು ತೀವ್ರ ಉಸಿರಾಟದ ಸಿಂಡ್ರೋಮ್ (SARS)ಗೆ ಬಳಸಲಾಗುತ್ತಿದೆ. 


COMMERCIAL BREAK
SCROLL TO CONTINUE READING

ರೆಮ್ಡೆಸಿವಿರ್ ಔಷಧಿ ವಿಶೇಷವೇಕೆ?


ರೆಮ್ಡೆಸಿವಿರ್ ನ್ನು ಅಮೆರಿಕಾದ ಔಷಧೀಯ ಕಂಪನಿ ಗಿಲ್ಯಾಡ್ ಸೈನ್ಸಸ್(US National Institutes of Health) ತಯಾರಿಸಿದ್ದು, ಕೊರೋನಾಗೆ ಮೊದಲ ಔಷಧಿ ಇದಾಗಿದೆ. ಅಕ್ಟೋಬರ್ 2020 ರಲ್ಲಿ ಕೊರೋನವೈರಸ್ ಚಿಕಿತ್ಸೆಗೆ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ಸ್ ಅನುಮತಿ ನೀಡಿತ್ತು.


ಇದನ್ನೂ ಓದಿ : Water Side Effects: ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ!


ರೆಮ್ಡೆಸಿವಿರ್ ಔಷಧಿ ಎಷ್ಟು ಪರಿಣಾಮಕಾರಿ? 


ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ನಡೆಸಿದ ಅಧ್ಯಯನದ ಪ್ರಕಾರ, ರೆಮ್ಡೆಸಿವಿರ್(Remdesivir) ಕೊರೋನಾ ರೋಗಿಗಳ ಚೇತರಿಕೆಯ ಸಮಯವನ್ನು 15 ದಿನಗಳಿಂದ ಸರಾಸರಿ 10ಕ್ಕೆ ಕಡಿತಗೊಳಿಸಬಹುದು. ಭಾರತದಲ್ಲಿ ರೆಮ್ಡೆಸಿವಿರ್ ಔಷಧಿ ಬಳಕೆಗೆ ಅನುಮತಿ ನೀಡಿದವರು ಯಾರು? ಕೊರೊನಾವೈರಸ್ ರೋಗಿಗಳ ಚಿಕಿತ್ಸೆಗಾಗಿ ಭಾರತದ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ನ್ಯಾಷನಲ್ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೊಟೊಕಾಲ್ ಕೋವಿಡ್-19ಗೆ ರೆಮ್ಡೆಸಿವಿರ್ ಬಳಕೆಗೆ ಅನುಮೋದನೆ ನೀಡಿತ್ತು.


ಇದನ್ನೂ ಓದಿ : Health Tips: ನಿತ್ಯ ರಾತ್ರಿ ಹಾಲಿನೊಂದಿಗೆ ಈ ಹಣ್ಣನ್ನು ಸೇವಿಸಿ, ದೂರವಾಗುತ್ತೆ ಈ ಎಲ್ಲಾ ಸಮಸ್ಯೆ


ಭಾರತದಲ್ಲಿ ರೆಮ್ಡೆಸಿವಿರ್ ತಯಾರಿಸುತ್ತಿರುವವರು ಯಾರು? 


ಭಾರತದಲ್ಲಿ ಈ ಔಷಧಿಯನ್ನು ಸಿಪ್ಲಾ(Cipla), ಝೈಡಸ್ ಕ್ಯಾಡಿಲಾ, ಹೆಟೆರೊ, ಮೈಲಾನ್, ಜುಬಿಲೆಂಟ್ ಲೈಫ್ ಸೈನ್ಸಸ್, ಡಾ. ರೆಡ್ಡಿಸ್, ಸನ್ ಫಾರ್ಮಾ ಮುಂತಾದ ಅನೇಕ ಕಂಪನಿಗಳು ಉತ್ಪಾದಿಸುತ್ತಿವೆ.


ಇದನ್ನೂ ಓದಿ : ಕರೋನಾ ಕಾಲದಲ್ಲಿ ಬಿಸಿನೀರಿನ ಸ್ಟೀಮ್ ಗಿಂತ ಮೊದಲು ಈ 5 ವಿಚಾರ ತಿಳಿದಿರಲಿ


ಕೊರೋನಾ ವಿರುದ್ಧ ರೆಮ್ಡೆಸಿವಿರ್ ಹೇಗೆ ಹೋರಾಟ ಮಾಡುತ್ತದೆ? 


ಕೊರೋನಾ ವೈರಸ್(Coronavirus) RNA ಪಾಲಿಮರೇಸ್ ಎಂಬ ಕಿಣ್ವದ ಸಹಾಯದಿಂದ ಮಾನವನ ದೇಹ ಸೇರುತ್ತದೆ. ಇಲ್ಲಿಂದ ಮಾನವನ ದೇಹದ ಮೇಲೆ ಪರಿಣಾಮ ಬೀರಲು ಆರಂಭಿಸುತ್ತದೆ. ಆದರೆ, ರೆಮ್ಡೆಸಿವಿರ್ ಈ ಕಿಣ್ವವನ್ನು ಪ್ರತಿಬಂಧಿಸುತ್ತದೆ ಮತ್ತು ವೈರಸ್ ಪುನರಾವರ್ತನೆಯಾಗುವುದನ್ನು ನಿರ್ಬಂಧಿಸುತ್ತದೆ.


ಇದನ್ನೂ ಓದಿ : ಟೆನ್ಶನ್ ಬೇಡ.! ಈ ಆಹಾರಗಳನ್ನು ತಿಂದು ದೇಹದಲ್ಲಿ ಆಕ್ಸಿಜನ್ ಹೆಚ್ಚಿಸಿಕೊಳ್ಳಿ.


ರೆಮ್ಡೆಸಿವಿರ್ ಔಷಧಿಯನ್ನು ಯಾರಿಗೆ ಬಳಸಬಹುದು? 


ರೆಮ್ಡೆಸಿವಿರ್ ಔಷಧಿಯನ್ನು ಕೊರೋನಾ ಸೋಂಕಿಗೊಳಗಾಗಿ ತೀವ್ರ ಸಮಸ್ಯೆಯನ್ನು ಎದುರಿಸುತ್ತಿರುವವರು, ಆ್ಯಕ್ಸಿಜನ್(Oxygen) ಬೆಂಬಲದಲ್ಲಿರುವ ರೋಗಿಗಳಿಗೆ ಬಳಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.


ಇದನ್ನೂ ಓದಿ : Health Insurance ಹೆಚ್ಚು ಕುಟುಂಬ ಸದಸ್ಯರು ಇರುವ ಕುಟುಂಬಕ್ಕೆ ಇದು ಉತ್ತಮ ಆರೋಗ್ಯ ವಿಮಾ ಪಾಲಸಿ


ಭಾರತ ರೆಮ್ಡೆಸಿವಿರ್ ಅನ್ನು ರಫ್ತು ಮಾಡುತ್ತಿದೆಯೇ? 


ಕೊರೋನಾ(Corona) ವಿರುದ್ಧ ಹೋರಾಡಲು ರೆಮ್ಡೆಸಿವಿರ್ ಪ್ರಮುಖ ಔಷಧಿಯಾಗಿದ್ದು, ದೇಶದಲ್ಲಿ ಈಗಾಗಲೇ ಈ ಔಷಧಿಯ ಕೊರತೆ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಏಪ್ರಿಲ್ 11 ರಂದು ರೆಮ್ಡೆಸಿವಿರ್ ಔಷಧಿ ರಫ್ತು'ನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.