ಟೆನ್ಶನ್ ಬೇಡ.! ಈ ಆಹಾರಗಳನ್ನು ತಿಂದು ದೇಹದಲ್ಲಿ ಆಕ್ಸಿಜನ್ ಹೆಚ್ಚಿಸಿಕೊಳ್ಳಿ.

ಮುಖ್ಯವಾಗಿ ದೇಹದ ಎನರ್ಜಿ ಕಾಪಾಡುವ ಕಾರ್ಯ ಮಾಡುವುದು ಆಮ್ಲಜನಕ.  ನಮ್ಮ ಶರೀರದಲ್ಲಿರುವ ಹೀಮೋಗ್ಲೋಬಿನ್ ಕೆಂಪು ರಕ್ತಕಣಗಳು ಆಮ್ಲಜನಕವನ್ನು  ಶ್ವಾಸಕೋಶದಿಂದ ದೇಹದಅಂಗಾಂಗಳಿಗೆ ರವಾನೆ ಮಾಡುತ್ತದೆ. ಮತ್ತೆ ಅಲ್ಲಿಂದ ಇಂಗಾಲದ ಡೈ ಆಕ್ಸೈಡನ್ನು ವಿಸರ್ಜಿಸುತ್ತದೆ. ಈ ಆಕ್ಸಿಜನ್ ದೇಹದಲ್ಲಿ ಎನರ್ಜಿಯಾಗಿ ಬದಲಾಗುತ್ತದೆ.

Written by - Ranjitha R K | Last Updated : Apr 22, 2021, 12:52 PM IST
  • ಆಹಾರದಲ್ಲಿ ಸುಧಾರಣೆ ತಂದರೆ, ದೇಹದಲ್ಲಿ ಆಕ್ಸಿಜನ್ ಮಟ್ಟವನ್ನು ಕಾಪಾಡಲು ಸಾಧ್ಯವಿದೆ
  • ಮುಖ್ಯವಾಗಿ ದೇಹದ ಎನರ್ಜಿ ಕಾಪಾಡುವ ಕಾರ್ಯ ಮಾಡುವುದು ಆಮ್ಲಜನಕ.
  • ಯಾವ ವಸ್ತು ತಿಂದರೆ ದೇಹದಲ್ಲಿ ಆಮ್ಲಜನಕ ಹೆಚ್ಚುತ್ತೆ ಅನ್ನೋದು ಗೊತ್ತಿರಲಿ
ಟೆನ್ಶನ್ ಬೇಡ.! ಈ ಆಹಾರಗಳನ್ನು ತಿಂದು ದೇಹದಲ್ಲಿ ಆಕ್ಸಿಜನ್ ಹೆಚ್ಚಿಸಿಕೊಳ್ಳಿ. title=
ಯಾವ ವಸ್ತು ತಿಂದರೆ ದೇಹದಲ್ಲಿ ಆಮ್ಲಜನಕ ಹೆಚ್ಚುತ್ತೆ ಅನ್ನೋದು ಗೊತ್ತಿರಲಿ (file photo)

ನವದೆಹಲಿ : ಇದು ಕರೋನಾ (Coronavirus) ಕಾಲ. ದೇಹಾರೋಗ್ಯವನ್ನು ಸಾಕಷ್ಟು ಚೆನ್ನಾಗಿಟ್ಟುಕೊಳ್ಳಲೇ ಬೇಕಾದ ಅತ್ಯಂತ ಕಠಿಣ ಕಾಲ. ಇಮ್ಯೂನಿಟಿ (Immunity) ಸೇರಿದಂತೆ ದೇಹದಲ್ಲಿ ಸಾಕಷ್ಟು ಮಟ್ಟದಲ್ಲಿ ಆಮ್ಲಜನಕ ಇರುವಂತೆ ನೋಡಿಕೊಳ್ಳಲೇ ಬೇಕಾಗಿದ್ದು ಈ ಹೊತ್ತಿನ ಅನಿವಾರ್ಯ.  ಈಗ ಭಾರತದಲ್ಲಿ ಆಮ್ಲಜನಕಕ್ಕಾಗಿ ನಡುಬೀದಿಯಲ್ಲಿ ಮಹಾಭಾರತ ನಡೆಯುತ್ತಿದೆ. ಈ ಆಕ್ಸಿಜನ್ (Oxygen) ಯುದ್ಧವನ್ನು ಬೇರೆ ಇನ್ನೊಂದು ವಿಧದಲ್ಲಿ ಕೊನೆಗೊಳಿಸಲು ಸಾಧ್ಯವೆ..? ಈ ಪ್ರಶ್ನೆಗೆ ಉತ್ತರ ಹೌದು. ಈ ಯುದ್ಧವನ್ನು ಬೇರೊಂದು ರೀತಿಯಲ್ಲಿ ಕೊನೆಗೊಳಿಸಲು ಸಾಧ್ಯವಿದೆ. ಆಹಾರ, ಡಯಟ್ ಗಳಲ್ಲಿ ಕೆಲವೊಂದು ಸುಧಾರಣೆ ತಂದರೆ, ದೇಹದಲ್ಲಿ ಆಕ್ಸಿಜನ್ ಮಟ್ಟವನ್ನು ಕಾಪಾಡಿಕೊಂಡು ಬರಲು ಸಾಧ್ಯವಿದೆ. 

ಮುಖ್ಯವಾಗಿ ದೇಹದ ಎನರ್ಜಿ ಕಾಪಾಡುವ ಕಾರ್ಯ ಮಾಡುವುದು ಆಮ್ಲಜನಕ.  ನಮ್ಮ ಶರೀರದಲ್ಲಿರುವ ಹೀಮೋಗ್ಲೋಬಿನ್ ಕೆಂಪು ರಕ್ತಕಣಗಳು ಆಮ್ಲಜನಕವನ್ನು (Oxygen) ಶ್ವಾಸಕೋಶದಿಂದ ದೇಹದಅಂಗಾಂಗಳಿಗೆ ರವಾನೆ ಮಾಡುತ್ತದೆ. ಮತ್ತೆ ಅಲ್ಲಿಂದ ಇಂಗಾಲದ ಡೈ ಆಕ್ಸೈಡನ್ನು ವಿಸರ್ಜಿಸುತ್ತದೆ. ಈ ಆಕ್ಸಿಜನ್ ದೇಹದಲ್ಲಿ ಎನರ್ಜಿಯಾಗಿ ಬದಲಾಗುತ್ತದೆ.  ದೇಹದಲ್ಲಿ ಆಕ್ಸಿಜನ್ ಮಟ್ಟವನ್ನು ಕಾಯ್ದುಕೊಳ್ಳಲು ನೀವು ವಿಶೇಷವಾಗಿ ಏನೂ ಮಾಡಬೇಕಿಲ್ಲ. ನಿಮ್ಮ ಆಹಾರ ಪದ್ದತಿ ಮೇಲೆ ಗಮನ  ಇಟ್ಟರೆ ಸಾಕು. ಇದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚುತ್ತವೆ ಜೊತೆಗೆ ಆಕ್ಸಿಜನ್ ಲೆವೆಲ್ ಕೂಡಾ ಏರುತ್ತದೆ.  ವೈದ್ಯರ ಮಾತನ್ನು ಪುನರಾವರ್ತಿಸುವುದಾದರೆ, ಪುರುಷರಲ್ಲಿ 13.5 ಗ್ರಾಮ್ / ಡೆಸಿ ಲೀಟರ್ ಮತ್ತು ಮಹಿಳೆಯರಲ್ಲಿ 12 ಗ್ರಾಮ್ / ಡೆಸಿ ಲೀಟರ್ ಹಿಮೋಗ್ಲೋಬಿನ್ ಇರುವುದು ಅಗತ್ಯವಿದೆ. 

ಇದನ್ನೂ ಓದಿ Health Insurance ಹೆಚ್ಚು ಕುಟುಂಬ ಸದಸ್ಯರು ಇರುವ ಕುಟುಂಬಕ್ಕೆ ಇದು ಉತ್ತಮ ಆರೋಗ್ಯ ವಿಮಾ ಪಾಲಸಿ

ಇನ್ನು ಯಾವ ವಸ್ತುಗಳಲ್ಲಿ ಆಮ್ಲಜನಕ ಸಿಗುತ್ತದೆ ನೋಡೋಣ.!
ದೇಹದಲ್ಲಿ ಆಮ್ಲಜನಕದ ಮಟ್ಟ  ಉತ್ತಮ ಲೆವೆಲ್ ನಲ್ಲಿರಲು ದೇಹದಲ್ಲಿ ಕಬ್ಬಿಣದಾಂಶ, ಕಾಪರ್, ವಿಟಮಿನ್ ಎ, ವಿಟಮಿನ್ ಬಿ2, ವಿಟಮಿನ್ ಬಿ3, ವಿಟಮಿನ್ ಬಿ5, ವಿಟಮಿನ್ ಬಿ6,  ವಿಟಮಿನ್ ಬಿ9 ಮತ್ತು ವಿಟಮಿನ್ 12 ಸತ್ವಗಳ ಅಗತ್ಯವಿದೆ. ಈ ಸತ್ವಗಳು ಯಾವ ಆಹಾರಗಳಲ್ಲಿ (food) ದಂಡಿಯಾಗಿ ಸಿಗುತ್ತದೆ ನೋಡೋಣ.

1. ವಿಟಮಿನ್ ಬಿ6, ಬಿ9 ಮತ್ತು ಬಿ12 :
ಈ ಜೀವಸತ್ವಕ್ಕಾಗಿ ಮಾಂಸ, ಚಿಕನ್ (Chicken) , ಟ್ಯೂನಾ ಫಿಶ್ ತಿನ್ನಬಹುದು. ಶಾಖಾಹಾರಿಗಳು ಬಾಳೆಹಣ್ಣು (Banana) , ಪಾಲಕ್, ಅವಕಾಡೋ ಇತ್ಯಾದಿಗಳನ್ನು ತಿನ್ನಬಹುದು. 

2. ವಿಟಮಿನ್ ಬಿ 12 ಮೂಲ :  ಮಾಂಸಾಹಾರಿಗಳಿಗೆ ಲಿವರ್, ಚಿಕನ್ ಮತ್ತು ಟ್ಯೂನಾ ಫಿಶ್ ನಲ್ಲಿ ಈ ವಿಟಮಿನ್ ಸಿಗುತ್ತದೆ. ಸಸ್ಯಾಹಾರಿಗಳಿಗೆ ಅಲೂಗಡ್ಡೆ, ಅಣಬೆ, ಅವಕಾಡೋ, ನೆಲಗಡಲೆ, ಪನೀರ್ (paneer) ಇತ್ಯಾದಿಗಳನ್ನು ತಿನ್ನಬಹುದು.

ಇದನ್ನೂ ಓದಿ : ಜಸ್ಟ್ ಒಂದ ಗ್ಲಾಸ್ ನಿಂಬೆ ಶರಬತ್ತು ನೀಡುತ್ತೆ ಈ ಆರು ಆರೋಗ್ಯ ಲಾಭ

3. ವಿಟಮಿನ್ ಬಿ2 ಮೂಲ : ಮೊಟ್ಟೆ (Egg) , ಕಿಡ್ನಿ ಅಥವಾ ಲಿವರ್ ಮಾಂಸಗಳಲ್ಲಿ ಸಿಗುತ್ತದೆ. ಶಾಖಾಹಾರಿಗಳು ಹಾಲು, ಮೊಸರು (Curd) , ಸೂರ್ಯಕಾಂತಿ ಬೀಜ, ಬಾದಾಮಿ ಮತ್ತು ಟೊಮ್ಯಾಟೋ ತಿನ್ನಬಹುದು. 

4. ವಿಟಮಿನ್ ಎ ಮೂಲ : ಮಾಂಸ, ಚಿಕನ್, ಟ್ಯೂನಾ ಪಿಶ್, ಮೊಟ್ಟೆಯಲ್ಲಿ ಸಿಗುತ್ತದೆ. ಶಾಖಾಹಾರಿಗಳಿಗೆ ಕ್ಯಾರೆಟ್, ಗೆಣಸು, ಸೋರೆಕಾಯಿ, ಮಾವು, ವನಿಲಾ ಮತ್ತು ಪಾಲಕ್ ಸೊಪ್ಪಿನಲ್ಲಿ ಲಭ್ಯವಿದೆ.

5. ತಾಮ್ರದಅಂಶ :  ಏಡಿ ಮತ್ತು ಟರ್ಕಿ ಕೋಳಿ. ಸಸ್ಯಾಹಾರಿಗಳಿಗೆ ಚಾಕಲೆಟ್, ಎಳ್ಳು, ಕಾಜು, ಅಲೂ ಮತ್ತು ಅಣಬೆಯಲ್ಲಿ  ಸಿಗುತ್ತದೆ. 

6. ಕಬ್ಬಿಣದಾಂಶ. ಮಾಂಸಾಹಾರಿಗಳಿಗೆ ಏಟಿ, ಚಿಕನ್, ಬಾತುಕೋಳಿ ಮಾಂಸ ಹಾಗೂ ಮಟನ್ ನಲ್ಲಿ  ಲಭ್ಯವಾಗುತ್ತದೆ. ವೆಜಿಟೇರಿಯನ್ಸ್ ಗೆ ಬೀನ್ಸ್, ಹಸಿರು ತರಕಾರಿ, ದಾಲ್ ಮತ್ತು ಮಟರ್ ಗಳಲ್ಲಿ ದೊರೆಯುತ್ತದೆ.

ಇದನ್ನೂ ಓದಿ : Best Ayurvedic Kadha Recipe :ಕರೋನಾ ಕಾಲದಲ್ಲಿ ಜಬರ್ ದಸ್ತ್ ಕಷಾಯ ಮಾಡಿ ಕುಡಿಯಿರಿ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News