Health Tips: ಅನ್ನ ಅಥವಾ ಚಪಾತಿ! ದೇಹದ ಬೊಜ್ಜು ಕರಗಲು ರಾತ್ರಿಯ ಊಟಕ್ಕೆ ಯಾವುದು ಬೆಸ್ಟ್!
Rice or Roti for Weight Loss: ಅಕ್ಕಿಯಲ್ಲಿ ಅತ್ಯಲ್ಪ ಸೋಡಿಯಂ ಅಂಶವಿದ್ದರೆ 120 ಗ್ರಾಂ ಗೋಧಿಯಲ್ಲಿ 190 ಮಿಗ್ರಾಂ ಸೋಡಿಯಂ ಇರುತ್ತದೆ. ಬಿಳಿ ಅಕ್ಕಿ ಹೆಚ್ಚು ಕ್ಯಾಲೊರಿಗಳನ್ನು ಮತ್ತು ಕಡಿಮೆ ಪೋಷಕಾಂಶಗಳನ್ನು ಹೊಂದಿರುತ್ತದೆ. 60 ಗ್ರಾಂ ಅಕ್ಕಿಯಲ್ಲಿ 80 ಕ್ಯಾಲೋರಿಗಳು, 1 ಗ್ರಾಂ ಪ್ರೋಟೀನ್, 0.1 ಗ್ರಾಂ ಕೊಬ್ಬು ಮತ್ತು 18 ಗ್ರಾಂ ಕಾರ್ಬೋಹೈಡ್ರೇಟ್‌ಗಳಿವೆ.
Rice or Roti for Weight Loss: ತೂಕ ಇಳಿಕೆ ಪ್ಲಾನ್’ಗಳು ಯಶಸ್ವಿಯಾಗಲು, ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ಕಡಿಮೆ ಮಾಡಬೇಕು. ಜೊತೆಗೆ ಪ್ರೋಟೀನ್ ಬಳಕೆಯನ್ನು ಹೆಚ್ಚು ಮಾಡಬೇಕು ಎಂದು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. ಆದರೆ ಭಾರತದಂತಹ ದೇಶದಲ್ಲಿ, ಹೆಚ್ಚಿನ ಭಾಗಗಳಲ್ಲು ಮೂರು ಹೊತ್ತು ಕೂಡ ಅಕ್ಕಿ ಮತ್ತು ಚಪಾತಿಯ ರೂಪದಲ್ಲಿ ಕಾರ್ಬೋಹೈಡ್ರೇಟ್’ಗಳಿಂದ ತುಂಬಿರುವ ಆಹಾರ ಸೇವನೆ ಮಾಡಲಾಗುತ್ತದೆ. ಇಂದು ನಾವು ಅಕ್ಕಿ ಅಥವಾ ಚಪಾತಿ ಸೇವನೆ ಉತ್ತಮವೇ ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಅನೇಕರು ದೇಹದ ಬೊಜ್ಜು ಕರಗಿಸುವಿಕೆಯ ಪ್ಲಾನ್’ನಲ್ಲಿರುತ್ತಾರೆ. ಇಂತಹ ಸಂದರ್ಭದಲ್ಲಿ ಅನ್ನ ಸೇವಿಸಬೇಕೇ? ಅಥವಾ ಚಪಾತಿ ಬೆಸ್ಟಾ? ಎಂಬೆಲ್ಲಾ ಗೊಂದಲದಲ್ಲಿರುತ್ತಾರೆ. ಅಂತವರಿಗೆ ಇಂದು ನಾವು ಕೆಲ ಮಾಹಿತಿಗಳನ್ನು ನೀಡಲಿದ್ದೇವೆ.
ಇದನ್ನೂ ಓದಿ: Pre Wedding Photoshoot: ಕೆಸರಿನಲ್ಲೊಂದು ಪ್ರಿ ವೆಡ್ಡಿಂಗ್ ಫೋಟೋಶೂಟ್.. ಇಲ್ಲಿವೆ ನೋಡಿ ಫೋಟೋಸ್
ನಿಮಗೆಲ್ಲರಿಗೂ ತಿಳಿದಿರುವಂತೆ, ಒಬ್ಬರು ಯಾವಾಗಲೂ ಲಘು ಭೋಜನವನ್ನು ಮಾಡಬೇಕು. ತೂಕವನ್ನು ಕಳೆದುಕೊಳ್ಳುವುದು ನಿಮ್ಮ ಗುರಿಯಾಗಿದ್ದರೆ ಭೋಜನದಲ್ಲಿ ಅನ್ನ ಅಥವಾ ಚಪಾತಿ ಎರಡು ಕೂಡ ಉತ್ತಮ ಆಯ್ಕೆಯಾಗಿದೆ.
ಅಕ್ಕಿಯಲ್ಲಿ ಅತ್ಯಲ್ಪ ಸೋಡಿಯಂ ಅಂಶವಿದ್ದರೆ 120 ಗ್ರಾಂ ಗೋಧಿಯಲ್ಲಿ 190 ಮಿಗ್ರಾಂ ಸೋಡಿಯಂ ಇರುತ್ತದೆ. ಬಿಳಿ ಅಕ್ಕಿ ಹೆಚ್ಚು ಕ್ಯಾಲೊರಿಗಳನ್ನು ಮತ್ತು ಕಡಿಮೆ ಪೋಷಕಾಂಶಗಳನ್ನು ಹೊಂದಿರುತ್ತದೆ. 60 ಗ್ರಾಂ ಅಕ್ಕಿಯಲ್ಲಿ 80 ಕ್ಯಾಲೋರಿಗಳು, 1 ಗ್ರಾಂ ಪ್ರೋಟೀನ್, 0.1 ಗ್ರಾಂ ಕೊಬ್ಬು ಮತ್ತು 18 ಗ್ರಾಂ ಕಾರ್ಬೋಹೈಡ್ರೇಟ್‌ಗಳಿವೆ.
ಚಪಾತಿಯನ್ನು ಗೋಧಿಯಿಂದ ತಯಾರಿಸಲಾಗುತ್ತದೆ. ಆದ್ದರಿಂದ ಅಕ್ಕಿಗೆ ಹೋಲಿಸಿದರೆ ಇದು ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತದೆ. 6-ಇಂಚಿನ ಸಣ್ಣ ರೊಟ್ಟಿಯು ಸುಮಾರು 71 ಕ್ಯಾಲೋರಿಗಳು, 3 ಗ್ರಾಂ ಪ್ರೋಟೀನ್, 0.4 ಗ್ರಾಂ ಕೊಬ್ಬು ಮತ್ತು 15 ಗ್ರಾಂ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ.
ಗೋಧಿಗೆ ಹೋಲಿಸಿದರೆ ಅಕ್ಕಿಯಲ್ಲಿ ರಂಜಕ ಮತ್ತು ಮೆಗ್ನೀಸಿಯಮ್ ಕಡಿಮೆ ಪ್ರಮಾಣದಲ್ಲಿರುತ್ತದೆ. ಇದಲ್ಲದೆ, ಅಕ್ಕಿ ಮತ್ತು ಗೋಧಿ ಎರಡೂ ಒಂದೇ ಪ್ರಮಾಣದಲ್ಲಿ ಫೋಲೇಟ್ ಮತ್ತು ಕಬ್ಬಿಣವನ್ನು ಹೊಂದಿರುತ್ತವೆ.
ಅಕ್ಕಿ ಮತ್ತು ಚಪಾತಿ, ಎರಡೂ ತಮ್ಮದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಒಂದೆಡೆ, ಅಕ್ಕಿ ಮತ್ತು ಬೇಳೆಯನ್ನು ತೆಗೆದುಕೊಂಡಾಗ ಅದರಲ್ಲಿ ಅಮೈನೋ ಆಮ್ಲಗಳಿರುತ್ತವೆ. ಜೊತೆಗೆ ಪ್ರೋಟೀನ್’ನ ಸಂಪೂರ್ಣ ಮೂಲವಿರುಯತ್ತದೆ.
ಇನ್ನೊಂದೆಡೆ ಬೇಳೆ, ಬಾರ್ಲಿ, ಬೆಂಡೆಕಾಯಿ ಅಥವಾ ರಾಗಿಯಿಂದ ಮಾಡಿದ ಚಪಾತಿ ಸೇವಿಸಿದರೆ, ಕ್ಯಾಲ್ಸಿಯಂ, ರಂಜಕ ಮತ್ತು ಸತುವುಗಳಂತಹ ಪೋಷಕಾಂಶಗಳಿ ನಿಮ್ಮ ಆರೋಗ್ಯಕ್ಕೆ ಸಿಗುತ್ತವೆ. ಎರಡೂ ಉತ್ತಮ ಆಯ್ಕೆಗಳು ಮತ್ತು ಪರ್ಯಾಯ ದಿನಗಳಲ್ಲಿ ತೆಗೆದುಕೊಳ್ಳಬಹುದು.
ಆದರೆ ರಾತ್ರಿ 8 ಗಂಟೆಗೆ ಮುನ್ನ ಊಟವನ್ನು ಮಾಡಲು ಪ್ರಯತ್ನಿಸಿ. ಅಲ್ಲದೆ, ತಡರಾತ್ರಿಯಲ್ಲಿ ಕಾರ್ಬೋಹೈಡ್ರೇಟ್-ಭರಿತ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ಉಬ್ಬುವಿಕೆಗೆ ಕಾರಣವಾಗಬಹುದು.
ಇದನ್ನೂ ಓದಿ: ರಾಮ ನವವಮಿಯ ದಿನ ಸರ್ವಾರ್ಥಸಿದ್ಧಿ, ಅಮೃತ ಸಿದ್ಧಿ ಹಾಗೂ ಗುರುಪುಷ್ಯ ನಕ್ಷತ್ರಗಳ ಮಹಾಸಂಯೋಗ!
ಅನ್ನಕ್ಕೆ ಹೋಲಿಸಿದರೆ, ಚಪಾತಿ ಬೇಗ ಹೊಟ್ಟೆ ತುಂಬುವಂತೆ ಮಾಡುತ್ತದೆ. ಎರಡು ರೊಟ್ಟಿ ಕೊಡುವಷ್ಟು ತೃಪ್ತಿಯನ್ನು ಅಕ್ಕಿ ಕೊಡುವುದಿಲ್ಲ. ಗೋಧಿಗೆ ಹೋಲಿಸಿದರೆ ಅಕ್ಕಿ ಕಡಿಮೆ ಆಹಾರದ ಫೈಬರ್, ಪ್ರೋಟೀನ್ ಮತ್ತು ಕೊಬ್ಬನ್ನು ಹೊಂದಿರುವುದು ಇದಕ್ಕೆ ಕಾರಣ. ಒಂದು ದೊಡ್ಡ ಬಟ್ಟಲು ಅನ್ನವು ಸುಮಾರು 440 ಕ್ಯಾಲೋರಿಗಳನ್ನು ಹೊಂದಿರುತ್ತದೆ, ಇದು ನಿಮ್ಮ ದೈನಂದಿನ ಕ್ಯಾಲೋರಿ ಸೇವನೆಯ ದೊಡ್ಡ ಪ್ರೋಟೀನ್ ಆಗಿರುತ್ತದೆ. ಸಮರ್ಥನೀಯ ತೂಕ ನಷ್ಟಕ್ಕೆ, ನೀವು ಅರ್ಧ ಬೌಲ್ ಅಕ್ಕಿ ಅಥವಾ 2 ರೊಟ್ಟಿಯನ್ನು ಸೇವಿಸಬೇಕು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.