Pre Wedding Photoshoot: ಕೆಸರಿನಲ್ಲೊಂದು ಪ್ರಿ ವೆಡ್ಡಿಂಗ್‌ ಫೋಟೋಶೂಟ್.. ಇಲ್ಲಿವೆ ನೋಡಿ ಫೋಟೋಸ್‌

Pre Wedding Photoshoot in the mud : ಕೃಷಿಯನ್ನೇ ತಮ್ಮ ಮೂಲ ವೃತ್ತಿಯಾಗಿಸಿಕೊಂಡಿರುವ ಈ ಜೋಡಿ, ಹೊಸ ಜೀವನ ಆರಂಭಿಸಲು ಕೆಸರಿನಲ್ಲಿ ಈ ರೀತಿಯ ಫೋಟೋಶೂಟ್ ಮಾಡಲು ನಿರ್ಧರಿಸಿದ್ದಾರೆ. ಕೃಷಿಯನ್ನು ಉತ್ತೇಜಿಸಲು ಈ ನಿರ್ಧಾರವನ್ನು ತೆಗೆದುಕೊಂಡರು. ಇಬ್ಬರೂ ರೈತ ಕುಟುಂಬದಿಂದ ಬಂದವರು. 

Pre Wedding Photoshoot in the mud : ಪ್ರಿ ವೆಡ್ಡಿಂಗ್ ಫೋಟೋಶೂಟ್‌ನ ಕೆಲವು ಚಿತ್ರಗಳು ಇಂಟರ್ನೆಟ್ ಜಗತ್ತಿನಲ್ಲಿ ತೀವ್ರವಾಗಿ ವೈರಲ್ ಆಗುತ್ತಿವೆ. ಇಬ್ಬರೂ ವಿಭಿನ್ನ ಭಂಗಿಗಳ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಫೋಟೋಶೂಟ್ ನಿಂದ ಫೇಮಸ್ ಆದ ಈ ಜೋಡಿ ಫಿಲಿಪ್ಪೀನ್ಸ್ ನ ಓರ್ಮಾಕ್ ಸಿಟಿ ನಿವಾಸಿಗಳು. ವಾಸ್ತವವಾಗಿ ಜಾನ್ಸಿ ಗುಟೈರೆಜ್ ಮತ್ತು ಇಮೆ ಬೊರಿನಾಗಾ ಕೃಷಿಯನ್ನು ಉತ್ತೇಜಿಸಲು ಈ ನಿರ್ಧಾರವನ್ನು ತೆಗೆದುಕೊಂಡರು. ಇಬ್ಬರೂ ರೈತ ಕುಟುಂಬದಿಂದ ಬಂದವರು. ಬೇಸಾಯ ಅವರ ಹವ್ಯಾಸ. ಅದಕ್ಕಾಗಿಯೇ ಇಬ್ಬರೂ ತಮ್ಮ ಹೊಸ ಜೀವನವನ್ನು ಪ್ರಾರಂಭಿಸಲು ಈ ಥೀಮ್ ಅನ್ನು ಆರಿಸಿಕೊಂಡರು. ಈ ಮೂಲಕ ಇಬ್ಬರೂ ಪ್ರಕೃತಿಯೊಂದಿಗೆ ತಮ್ಮ ಸಂಪರ್ಕವನ್ನು ತೋರಿಸಲು ಪ್ರಯತ್ನಿಸಿದ್ದಾರೆ ಎಂದು ಈ ದಂಪತಿಗಳು ಹೇಳುತ್ತಾರೆ.

1 /8

24 ವರ್ಷದ ಜಾನ್ಸಿ ಮತ್ತು 21 ವರ್ಷದ ಇಮೆ ಅವರ ಚಿತ್ರಗಳು ಇತರ ಜೋಡಿಗಳ ಮದುವೆಯ ಪೂರ್ವ ಫೋಟೋಶೂಟ್‌ಗಳಿಗಿಂತ ವಿಭಿನ್ನ ಮತ್ತು ವಿಶೇಷವಾಗಿವೆ. ಏಕೆಂದರೆ ಈ ಥೀಮ್ ಮೂಲಕ ಅವರು ಪ್ರಕೃತಿಯ ಮೇಲಿನ ಪ್ರೀತಿ ಮತ್ತು ಉತ್ಸಾಹವನ್ನು ತೋರಿಸಲು ಪ್ರಯತ್ನಿಸಿದರು.

2 /8

ಈ ಪ್ರೀ ವೆಡ್ಡಿಂಗ್ ಫೋಟೋಶೂಟ್ ಅನ್ನು ಇಮೆ ಕುಟುಂಬದ ಭತ್ತದ ಗದ್ದೆಯಲ್ಲಿ ಮಾಡಲಾಗಿದೆ.

3 /8

ಪ್ರಿ ವೆಡ್ಡಿಂಗ್ ಶೂಟ್ ಬಗ್ಗೆ ಕೇಳಿದಾಗ, ದಂಪತಿಗಳು ತಾವು ರೈತರ ಕುಟುಂಬದಲ್ಲಿ ಬೆಳೆದಿದ್ದೇವೆ, ಅದಕ್ಕಾಗಿಯೇ ಕುಟುಂಬದ ವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಿ ವೆಡ್ಡಿಂಗ್ ಶೂಟ್‌ಗೆ ಥೀಮ್ ಅನ್ನು ಅಂತಿಮಗೊಳಿಸಿದ್ದೇವೆ ಎಂದು ಹೇಳಿದರು. 

4 /8

ಫಿಲಿಪೈನ್ಸ್‌ನ ಸರ್ಕಾರಿ ಶಾಲೆಯ ಶಿಕ್ಷಕಿ ಇಮೆ, ನಾನು ಕೃಷಿಯನ್ನು ಉದ್ಯೋಗ ಅಥವಾ ವೃತ್ತಿಯಾಗಿ ತೋರಿಸಲು ಪ್ರಯತ್ನಿಸುತ್ತಿದ್ದೇನೆ, ಅದಕ್ಕೆ ಅರ್ಹವಾದ ಕ್ರೆಡಿಟ್ ನೀಡಬೇಕು. ರೈತರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದಿದ್ದಾರೆ.

5 /8

ಕೆಸರಿನಲ್ಲಿ ನಡೆಯುವುದು ಮತ್ತು ಅಲ್ಲಿ ಕೆಲಸ ಮಾಡುವುದು ಎಷ್ಟು ಕಷ್ಟ ಎಂದು ಇಡೀ ಜಗತ್ತು ನೋಡಬೇಕು ಮತ್ತು ಅನುಭವಿಸಬೇಕು ಎಂದು ಇಮೆ ತನ್ನ ಸಂದರ್ಶನದಲ್ಲಿ ಹೇಳಿದ್ದಾರೆ.

6 /8

ಬೇಸಿಗೆಯ ಸುಡು ಬಿಸಿಲಲ್ಲಿ ಬೇಸಾಯ ಮಾಡುವುದು ಎಷ್ಟು ಕಷ್ಟ ಎಂಬುದನ್ನೂ ಜನರಿಗೆ ವಿವರಿಸಲು ಬಯಸಿರುವುದಾಗಿ ಈ ದಂಪತಿ ತಿಳಿಸಿದ್ದಾರೆ.

7 /8

ಇಷ್ಟೆಲ್ಲ ಇದ್ದರೂ ನಮ್ಮ ರೈತರು ಯಾವುದೇ ದೂರುಗಳಿಲ್ಲದೆ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಇದೇ ನಮ್ಮ ಫೋಟೋಶೂಟ್‌ಗೆ ಸ್ಪೂರ್ತಿಯಾಯಿತು ಎಂದಿದ್ದಾರೆ.

8 /8

ಈ ಜೋಡಿಯ ಚಿತ್ರಗಳನ್ನು ಜನರು ಇಷ್ಟಪಡುತ್ತಿದ್ದಾರೆ ಏಕೆಂದರೆ ಈ ಮೂಲಕ ಅವರು ಪ್ರಕೃತಿಯ ಮೇಲಿನ ಪ್ರೀತಿಯನ್ನು ತೋರಿಸಲು ಪ್ರಯತ್ನಿಸಿದ್ದಾರೆ.