ನವದೆಹಲಿ: ಅನ್ನವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅತಿಹೆಚ್ಚು ಸೇವಿಸುವ ಆಹಾರವಾಗಿದೆ. ಇದನ್ನು ವಿವಿಧ ರೀತಿಯಲ್ಲಿ ಬೇಯಿಸಬಹುದು. ಸಾಮಾನ್ಯವಾಗಿ ನಾವು ಅಕ್ಕಿಯನ್ನು ನೀರು ತುಂಬಿದ ಪಾತ್ರೆಯಲ್ಲಿ ಹಾಕಿ ತಯಾರಿಸುತ್ತೇವೆ. ಸಂಪೂರ್ಣ ಬೇಯಿಸಿದ ಬಳಿಕ ನಾವು ಅದರ ಗಂಜಿಯನ್ನು ಎಸೆಯುತ್ತೇವೆ. ಆದರೆ ಈ ರೀತಿ ಮಾಡುವುದರಿಂದ ನೀವು ತಪ್ಪು ಮಾಡುತ್ತಿದ್ದೀರಿ. ನೀವು ಬೇಯಿಸಿದ ಅನ್ನದ ಗಂಜಿಯನ್ನು ಎಸೆದರೆ, ಹೆಚ್ಚಿನ ಪೋಷಕಾಂಶ ವ್ಯರ್ಥವಾಗುತ್ತದೆ ಎಂದು ಪ್ರಸಿದ್ಧ ಆಹಾರ ತಜ್ಞ ಆಯುಷಿ ಯಾದವ್ ಹೇಳಿದ್ದಾರೆ. ಗಂಜಿ ಕುಡಿಯುವುದರಿಂದ ದೇಹಕ್ಕೆ ಆಗುವ ಲಾಭಗಳೇನು ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Weight Loss Exercise: ತೂಕ ಇಳಿಸಲು ಯಾವ ಸಮಯದಲ್ಲಿ ವ್ಯಾಯಾಮ ಮಾಡಬೇಕು?


ಗಂಜಿ ಕುಡಿಯುವುದರ ಪ್ರಯೋಜನಗಳು


1. ಗಂಜಿಯಲ್ಲಿ ಪೋಷಕಾಂಶಗಳ ಕೊರತೆ ಇಲ್ಲ, ವಿಟಮಿನ್ ಬಿ, ವಿಟಮಿನ್ ಸಿ ಮತ್ತು ವಿಟಮಿನ್ ಇ ಇದರಲ್ಲಿ ಸಾಕಷ್ಟು ಕಂಡುಬರುತ್ತದೆ.


2. ಗಂಜಿ ಕುಡಿಯುವುದರಿಂದ ದೇಹವು ತ್ವರಿತ ಶಕ್ತಿಯನ್ನು ಪಡೆಯುತ್ತದೆ, ಇದರಿಂದಾಗಿ ದೇಹದ ಆಯಾಸವು ಹೆಚ್ಚಿನ ಪ್ರಮಾಣದಲ್ಲಿ ಹೋಗುತ್ತದೆ.


3. ನಮ್ಮ ಚರ್ಮಕ್ಕೆ ಗಂಜಿ ತುಂಬಾ ಪ್ರಯೋಜನಕಾರಿ. ಇದು ನೇರಳಾತೀತ ಕಿರಣಗಳ ಪರಿಣಾಮ ಮತ್ತು ಸೋಂಕನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ. ಹೀಗಾಗಿಯೇ ಬೇಯಿಸಿದ ಅಕ್ಕಿ ನೀರನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು.


4. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಬಿಳಿ ಕೂದಲು ಅಥವಾ ಕೂದಲು ಉದುರುವಿಕೆ ಸಮಸ್ಯೆ ಎದುರಿಸುತ್ತಿದ್ದಾರೆ. ಗಂಜಿಯನ್ನು ಸುಮಾರು 15 ರಿಂದ 20 ನಿಮಿಷಗಳ ಕಾಲ ನೆತ್ತಿಯ ಮೇಲೆ ಬಿಟ್ಟು ನಂತರ ಸೌಮ್ಯವಾದ ಶಾಂಪೂ ಮತ್ತು ಕಂಡೀಷನರ್ನಿಂದ ಕೂದಲನ್ನು ಸ್ವಚ್ಛಗೊಳಿಸಿ.


5. ಬೇಯಿಸಿದ ಅಕ್ಕಿ ಗಂಜಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕಂಡುಬರುತ್ತವೆ. ಇದರಿಂದ ಮುಖದ ಮೇಲೆ ಹೊರಬರುವ ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಗಳು ಹೋಗುತ್ತವೆ.


6. ಗಂಜಿ ಸೇವನೆಯಿಂದ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ ಎಂದು ಹಲವು ಸಂಶೋಧನೆಗಳಲ್ಲಿ ಸಾಬೀತಾಗಿದೆ.


7. ಗಂಜಿಯಲ್ಲಿ ಸಮೃದ್ಧ ಪ್ರಮಾಣದ ಫೈಬರ್ ಕಂಡುಬರುತ್ತದೆ. ಇದು ಚಯಾಪಚಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಬಹುದು.


8. ನಿಯಮಿತವಾಗಿ ಅಕ್ಕಿ ಗಂಜಿ ಕುಡಿಯುವ ಜನರ ದೇಹದ ಉಷ್ಣತೆಯು ಸಮತೋಲನದಲ್ಲಿರುತ್ತದೆ.


9. ನೀವು ಹೈಪೊಟೆನ್ಷನ್ ಅಥವಾ ಕಡಿಮೆ ರಕ್ತದೊತ್ತಡದ ಸಮಸ್ಯೆಯಿಂದ ಹೋರಾಡುತ್ತಿದ್ದರೆ ಗಂಜಿಯಲ್ಲಿ ಉಪ್ಪನ್ನು ಬೆರೆಸಿ ಕುಡಿಯಬೇಕು.


10. ವೈರಾಣು ಜ್ವರದಲ್ಲಿ ಗಂಜಿ ಔಷಧಿಗಿಂತ ಕಡಿಮೆಯಿಲ್ಲ, ಇದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜ್ವರ ಬೇಗ ಮಾಯವಾಗುತ್ತದೆ.


11. ಗಂಜಿ ಕುಡಿಯುವುದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ, ಇದರಿಂದ ದೇಹದ ಅನೇಕ ಸಮಸ್ಯೆಗಳು ದೂರವಾಗುತ್ತವೆ.


ಇದನ್ನೂ ಓದಿ: ಮಾರುಕಟ್ಟೆಗೆ ಕಾಲಿಟ್ಟಿದೆ 'ನಕಲಿ ಆಲೂಗಡ್ಡೆ' ! ನೀವು ತರುತ್ತಿರುವ ಆಲೂಗಡ್ದೆಯನ್ನೊಮ್ಮೆ ಚೆಕ್ ಮಾಡಿಕೊಳ್ಳಿ


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.