ನಿಮ್ಮನ್ನು ಶೀತ-ಕೆಮ್ಮಿನಿಂದ ದೂರವಿರಿಸುತ್ತೆ ಈ 5 ಹಣ್ಣುಗಳು

ಋತು ಬದಲಾದಂತೆ ಸಾಮಾನ್ಯ ಶೀತ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಸಹಜ. ಆದರೆ, ಇದರ ವಿರುದ್ಧ ಹೋರಾಡಲು ನಮ್ಮ ರೋಗನಿರೋಧಕ ಶಕ್ತಿ ಉತ್ತಮವಾಗಿರಬೇಕು. ಇದಕ್ಕಾಗಿ ನಿಮ್ಮ ಆಹಾರದಲ್ಲಿ ಕೆಲವು ಹಣ್ಣುಗಳನ್ನು ಸೇರಿಸುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ. 

Written by - Yashaswini V | Last Updated : Feb 16, 2023, 07:44 AM IST
  • ನಮ್ಮ ದೇಹದ ಪ್ರತಿರಕ್ಷಣಾ ವ್ಯವಷ್ಟೇಯನ್ನು ಬಲಪಡಿಸಲು ಕಾಲೋಚಿತ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಅತ್ಯಗತ್ಯ.
  • ನೀವು ಋತು ಬದಲಾದಂತೆ ನಿಮ್ಮನ್ನು ಕಾಡುವ ಶೀತ, ಕೆಮ್ಮು, ನೆಗಡಿ, ಜ್ವರದಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು ಬಯಸಿದರೆ ಕೆಲವು ಹಣ್ಣುಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ.
  • ತೂಕ ನಿಯಂತ್ರಣಕ್ಕೂ ಕೂಡ ಬಹಳ ಪರಿಣಾಮಕಾರಿ ಆಗಿರುವ ಈ ಹಣ್ಣುಗಳು ಬೆಸ್ಟ್ ಇಮ್ಯುನಿಟಿ ಬೂಸ್ಟರ್ ಕೂಡ ಆಗಿದೆ.
ನಿಮ್ಮನ್ನು ಶೀತ-ಕೆಮ್ಮಿನಿಂದ ದೂರವಿರಿಸುತ್ತೆ ಈ 5 ಹಣ್ಣುಗಳು  title=
Fruits to boost immunity

ಬೆಂಗಳೂರು: ಬದಲಾಗುತ್ತಿರುವ ಋತುವಿನಲ್ಲಿ ಹಲವರು  ಕೆಮ್ಮು, ನೆಗಡಿ, ವೈರಲ್ ಜ್ವರ ಮತ್ತು ಅಲರ್ಜಿಯಂತಹ ಹಲವಾರು ರೋಗಗಳಿಗೆ ಬಲಿಯಾಗುತ್ತಿದ್ದಾರೆ. ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಇಂತಹ ಸಮಸ್ಯೆಗಳು ಉದ್ಬವಿಸುತ್ತವೆ. ಇದನ್ನು ತಪ್ಪಿಸಲು ನಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವುದು ಬಹಳ ಮುಖ್ಯ. ವೈದ್ಯರ ಪ್ರಕಾರ, ನಮ್ಮ ದೇಹದ ಪ್ರತಿರಕ್ಷಣಾ ವ್ಯವಷ್ಟೇಯನ್ನು ಬಲಪಡಿಸಲು ಕಾಲೋಚಿತ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಅತ್ಯಗತ್ಯ. ನೀವು ಋತು ಬದಲಾದಂತೆ ನಿಮ್ಮನ್ನು ಕಾಡುವ ಶೀತ, ಕೆಮ್ಮು, ನೆಗಡಿ, ಜ್ವರದಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು ಬಯಸಿದರೆ ಕೆಲವು ಹಣ್ಣುಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ.

ಹೌದು, ನಿಮ್ಮ ಡಯಟ್ನಲ್ಲಿ ಐದು ಹಣ್ಣುಗಳನ್ನು ಸೇರಿಸುವುದರಿಂದ ನೀವು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಮಾತ್ರವಲ್ಲ, ಇದು ತೂಕ ನಿಯಂತ್ರಣಕ್ಕೂ ಕೂಡ ತುಂಬಾ ಸಹಕಾರಿ ಆಗಿದೆ. ಆ ಹಣ್ಣುಗಳು ಯಾವುವು ಎಂದು ತಿಳಿಯೋಣ...

ಬೆಸ್ಟ್ ಇಮ್ಯುನಿಟಿ ಬೂಸ್ಟರ್ ಹಣ್ಣುಗಳಿವು: 
ಪರಂಗಿ ಹಣ್ಣು:

ಎಲ್ಲ ಋತುವಿನಲ್ಲೂ ಬಹಳ ಸುಲಭವಾಗಿ ಲಭ್ಯವಿರುವ ಹಣ್ಣುಗಳಲ್ಲಿ ಪರಂಗಿ ಹಣ್ಣು ಕೂಡ ಒಂದು. ಈ ಹಣ್ಣನ್ನು ನಿಮ್ಮ ಡಯಟ್ ಭಾಗವನ್ನಾಗಿಸಿದರೆ ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ತೂಕ ನಿಯಂತ್ರಣಕ್ಕೂ ಕೂಡ ಬಹಳ ಪರಿಣಾಮಕಾರಿ ಆಗಿರುವ ಈ ಹಣ್ಣು ಬೆಸ್ಟ್ ಇಮ್ಯುನಿಟಿ ಬೂಸ್ಟರ್ ಕೂಡ ಆಗಿದೆ. 

ಇದನ್ನೂ ಓದಿ- ಸ್ತ್ರೀಯರ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಚಿಟಿಕೆ ಅರಿಶಿನ

ಸ್ಟ್ರಾಬೆರಿ: 
ವಸಂತ ಋತುವಿಗೆ ಸ್ಟ್ರಾಬೆರಿ ಹಣ್ಣನ್ನು ಅತ್ಯುತ್ತಮ ಹಣ್ಣು ಪರಿಗಣಿಸಲಾಗುತ್ತದೆ. ಅವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ, ಸ್ಟ್ರಾಬೆರಿ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಕೂಡ ಬಹಳ ಪರಿಣಾಮಕಾರಿ ಆಗಿದೆ.

ಬ್ಲ್ಯಾಕ್ಬೆರಿ:
ಬ್ಲ್ಯಾಕ್ಬೆರಿ ಕಡಿಮೆ ಕ್ಯಾಲೋರಿ ಹೊಂದಿದ್ದು ಫೈಬರ್, ವಿಟಮಿನ್ಗಳಲ್ಲಿ ಸಮೃದ್ಧವಾಗಿದೆ. ಬ್ಲ್ಯಾಕ್ ಬೆರ್ರಿ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಜೊತೆಗೆ, ಬ್ಲ್ಯಾಕ್ ಬೆರ್ರಿ ದೇಹದ ಚಯಾಪಚಯವನ್ನು ವೇಗಗೊಳಿಸಲು ಮತ್ತು ಮಧುಮೇಹದ ಲಕ್ಷಣಗಳನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ- ಡಬಲ್ ಚಿನ್ ಸಮಸ್ಯೆಗೆ ಸುಲಭ ಪರಿಹಾರ ನೀಡುತ್ತೆ ಫೇಶಿಯಲ್ ಯೋಗ

ಚೆರ್ರಿಗಳು: 
ಚೆರ್ರಿ ಹಣ್ಣುಗಳು ಶಕ್ತಿಯನ್ನು ಹೆಚ್ಚಿಸಲು, ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಮತ್ತು ನಮ್ಮ ಮನಸ್ಸನ್ನು ವಿಶ್ರಾಂತಿಯಿಂದ ಇರಿಸಲು ಸಹಾಯಕವಾಗಿವೆ. ಇದಲ್ಲದೆ, ಚೆರ್ರಿ ಹಣ್ಣುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ರಕ್ತದಲ್ಲಿನ ಯೂರಿಕ್ ಆಮ್ಲವನ್ನು ಕಡಿಮೆ ಮಾಡುವಲ್ಲಿಯೂ ಪರಿಣಾಮಕಾರಿ ಆಗಿದ್ದು, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಕಿತ್ತಳೆ ಹಣ್ಣು:
ಸಾಮಾನ್ಯವಾಗಿ ನಮ್ಮಲ್ಲಿ ಹಲವರು ಚಳಿಗಾಲದಲ್ಲಿ, ವಸಂತ ಋತುವಿನಲ್ಲಿ ಶೀತ ಎಂಬ ಕಾರಣಕ್ಕೆ ಕಿತ್ತಳೆ ಹಣ್ಣನ್ನು ತಿನ್ನುವುದಿಲ್ಲ. ಆದರೆ, ಕಿತ್ತಳೆಯು ಚಳಿಗಾಲದ ಋತುಮಾನದ ಹಣ್ಣಾಗಿದೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ತಪ್ಪದೇ ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News