ಬೆಂಗಳೂರು : ಆರೋಗ್ಯವಾಗಿರಲು ಆರೋಗ್ಯಕರ ಆಹಾರ ಎಷ್ಟು ಮುಖ್ಯ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.ಆರೋಗ್ಯಕರ ಆಹಾರ ಸೇವನೆ ಮಾತ್ರವಲ್ಲ ಅದನ್ನು ಸರಿಯಾದ ಸಮಯಕ್ಕೆ ತಿನ್ನುವುದು ಕೂಡಾ ಅಷ್ಟೇ ಮುಖ್ಯ. ಆರೋಗ್ಯಕರವಾಗಿರಲು ಮತ್ತು ದೇಹದ ಫಿಟ್ ನೆಸ್ ಕಾಪಾಡಿಕೊಳ್ಳಲು ದಿನದ ಮೂರು ಹೊತ್ತು ಆಹಾರ ಸೇವನೆ ಬಹಳ ಮುಖ್ಯ.ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಭೋಜನ. ಆದರೆ ಇಂದಿನ ಬಿಡುವಿಲ್ಲದ ಜೀವನದಲ್ಲಿ ಹೆಚ್ಚಿನವರು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದಿಲ್ಲ.ಈ ಕಾರಣದಿಂದಾಗಿ, ಅನೇಕ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ.ಆರೋಗ್ಯ ತಜ್ಞರ ಪ್ರಕಾರ,ಸರಿಯಾದ ಸಮಯದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸದಿದ್ದರೆ,ದೇಹವು ಅದರ ಸಂಪೂರ್ಣ ಪ್ರಯೋಜನವನ್ನು ಪಡೆಯುವುದಿಲ್ಲ.


COMMERCIAL BREAK
SCROLL TO CONTINUE READING

ಯಾವಾಗ ಉಪಹಾರ ಸೇವಿಸಬೇಕು? :
ಬೆಳಗಿನ ಉಪಾಹಾರವು ದಿನದ ಪ್ರಮುಖ ಆಹಾರವಾಗಿದೆ.ಬೆಳಗಿನ ಉಪಾಹಾರವನ್ನು ಎದ್ದ 3 ಗಂಟೆಗಳ ಒಳಗೆ ತೆಗೆದುಕೊಳ್ಳಬೇಕು.ಅಂದರೆ ಬೆಳಿಗ್ಗೆ 7 ರಿಂದ 9ಗಂಟೆಯ ಒಳಗೆ ಬೆಳಗ್ಗಿನ ಉಪಹಾರವನ್ನು ಸೇವಿಸಬೇಕು. ಬೆಳಿಗ್ಗೆ ಎದ್ದ 3 ಗಂಟೆಯೊಳಗೆ ಏನನ್ನಾದರೂ ತಿನ್ನಲೇ ಬೇಕು.ಅಲ್ಲದೆ 10 ಗಂಟೆಯ ನಂತರ ಉಪಾಹಾರವನ್ನು ಸೇವಿಸಬಾರದು ಎಂಬುದನ್ನು ನೆನಪಿಡಿ.  


ಇದನ್ನೂ ಓದಿ  : ಪ್ರತಿದಿನ ಒಂದೆರಡು ಖರ್ಜೂರ ತಿಂದರೆ ಆರೋಗ್ಯಕ್ಕಿದೆ ಇಷ್ಟೆಲ್ಲಾ ಲಾಭಗಳು


ಸರಿಯಾದ ಸಮಯಕ್ಕೆ ಉಪಹಾರ ಸೇವಿಸುವುದರಿಂದ ದಿನವಿಡೀ ಚೈತನ್ಯ : 
ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿಯಲು ಪ್ರಯತ್ನಿಸಿ.ನಂತರ, ಫ್ರೆಶ್ ಅಪ್ ಆಗಿ ಉಪಹಾರವನ್ನು ಸೇವಿಸಿ.ಬೆಳಗಿನ ಉಪಾಹಾರದಲ್ಲಿ ಪೋಹಾ,ಗಂಜಿ,ಓಟ್ಸ್,ರೊಟ್ಟಿ-ತರಕಾರಿಗಳು, ಹಣ್ಣುಗಳು,ಜ್ಯೂಸ್ ಮತ್ತು ಶೇಕ್ ಇತ್ಯಾದಿಗಳನ್ನು ಸೇವಿಸಬಹುದು.ಬೆಳಗಿನ ಉಪಾಹಾರದಲ್ಲಿ ಫೈಬರ್ ಮತ್ತು ಪ್ರೋಟೀನ್ ಭರಿತ ಆಹಾರವನ್ನು ಸೇವಿಸಬೇಕು.ಇದು ದಿನವಿಡೀ ನಿಮ್ಮನ್ನು ಶಕ್ತಿಯುತವಾಗಿಡಲು ಸಹಾಯ ಮಾಡುತ್ತದೆ.


ಊಟಕ್ಕೆ ಸರಿಯಾದ ಸಮಯ ಯಾವುದು? : 
ಉಪಹಾರ ಮತ್ತು ಊಟದ ನಡುವೆ ಸುಮಾರು 4 ಗಂಟೆಗಳ ಅಂತರವಿರಬೇಕು.ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಊಟಕ್ಕೆ ಉತ್ತಮ ಸಮಯ. 4 ಗಂಟೆಯ ನಂತರ ಊಟ ಮಾಡಬಾರದು.  


ಇದನ್ನೂ ಓದಿ  : ಮನೆಯ ಹಿತ್ತಲಲ್ಲೇ ಸಿಗುವ ಈ ಎಲೆಗಳನ್ನು ಬಳಸಿದರೆ 7 ದಿನಗಳಲ್ಲಿ ಯೂರಿಕ್ ಆಸಿಡ್ ಹರಳುಗಳೆಲ್ಲಾ ಪುಡಿಯಾಗುವುದು !ಕೀಲುಗಳಲ್ಲಿನ ಊತ ನೋವಿನಿಂದಲೂ ಮುಕ್ತಿ


ರಾತ್ರಿ ಭೋಜನಕ್ಕೆ ಸರಿಯಾದ ಸಮಯ : 
ಆರೋಗ್ಯವಾಗಿ ಮತ್ತು ಫಿಟ್ ಆಗಿ ಇರಬೇಕಾದರೆ ಸಂಜೆ 6 ರಿಂದ 8 ರ ನಡುವೆ ರಾತ್ರಿಯ ಊಟ ಮಾಡಿ ಮುಗಿಸಬೇಕು.ರಾತ್ರಿ 9 ಗಂಟೆಯ ನಂತರ ಆಹಾರವನ್ನು ಸೇವಿಸಬಾರದು.ರಾತ್ರಿಯ ಊಟವನ್ನು ಯಾವಾಗಲೂ ಮಲಗುವ ಸುಮಾರು 3 ಗಂಟೆಗಳ ಮೊದಲು ಮಾಡಬೇಕು. ರಾತ್ರಿಯಲ್ಲಿ ಆಹಾರವನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.ಹಾಗಾಗಿ ತಡವಾಗಿ ಭೋಜನ ಮಾಡಿದರೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ರಾತ್ರಿ ಲಘು ಭೋಜನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.


ಸಮಯಕ್ಕೆ ಸರಿಯಾಗಿ ತಿನ್ನುವುದರಿಂದ ಆಗುವ ಪ್ರಯೋಜನಗಳು : 
ಪ್ರತಿದಿನ ನಿಗದಿತ ಸಮಯಕ್ಕೆ ಆಹಾರವನ್ನು ಸೇವಿಸಿದರೆ,ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.ಅನೇಕ ರೀತಿಯ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.