ಬೆಂಗಳೂರು : ಮುಂಜಾನೆ ಬೇಗ ಎದ್ದು ವೇಗದ ನಡಿಗೆ ಅಥವಾ ಬ್ರಿಸ್ಕ್ ವಾಕ್ ಮಾಡಿದರೆ ಹಲವಾರು ಪ್ರಯೋಜನಗಳಿವೆ. ಸಾಮಾನ್ಯವಾಗಿ ಬಹುತೇಕ ಮಂದಿ ಮುಂಜಾನೆ ವಾಕ್ ಗೆ ತೆರಳುತ್ತಾರೆ. ಇದರಲ್ಲಿ ಕೆಲವರು ವೇಗವಾಗಿ ನಡೆಯುತ್ತಾರೆ. ಇನ್ನು ಕೆಲವರು ನಿಧಾನವಾಗಿ ನಡೆಯುತ್ತಾರೆ.  ಈ ಲೇಖನದಲ್ಲಿ ನಾವು ಬ್ರಿಸ್ಕ್ ವಾಕ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಅಂದರೆ, ಒಬ್ಬ ವ್ಯಕ್ತಿಯು ಒಂದು ಅಥವಾ ಅರ್ಧ ಗಂಟೆ ಬ್ರಿಸ್ಕ್ ವಾಕ್ ಮಾಡುವುದರಿಂದ ಯಾವ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ. ವೇಗವಾದ ನಡಿಗೆಯು ಕೆಲವು ಗಂಭೀರ ದೈಹಿಕ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. 


COMMERCIAL BREAK
SCROLL TO CONTINUE READING

ಅದಕ್ಕಾಗಿಯೇ ನಿತ್ಯ ವಾಕ್ ಮಾಡುವುದು ಬಹಳ ಅಗತ್ಯ. ಇವುಗಳ ಹೊರತಾಗಿ, ಬ್ರಿಸ್ಕ್ ವಾಕ್ ಇನ್ನೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ಬೆಳಗಿನ ಜಾವ ಅರ್ಧ ಗಂಟೆ ಬ್ರಿಸ್ಕ್ ವಾಕ್ ಮಾಡುವುದರಿಂದ ಏನು ಪ್ರಯೋಜನ? ಯಾವ ರೋಗಗಳನ್ನು ತಪ್ಪಿಸಬಹುದು? ಈ ಎಲ್ಲಾ ವಿವರಗಳನ್ನು ಈ ಲೇಖನದಲ್ಲಿ ಕಾಣಬಹುದು. 


ಇದನ್ನೂ ಓದಿ : National Dengue Day 2023: ಡೆಂಗ್ಯೂ ರೋಗದ ಲಕ್ಷಣ, ಕಾರಣ ಮತ್ತು ನಿಯಂತ್ರಣ ಕ್ರಮಗಳ ಮಾಹಿತಿ ಇಲ್ಲಿದೆ ನೋಡಿ


1. ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡದ ನಿಯಂತ್ರಣ:
ಅಧಿಕ ರಕ್ತದೊತ್ತಡ ಅಥವಾ ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿದ್ದರೆ , ವೇಗವಾದ ನಡಿಗೆಯು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ವಾಕಿಂಗ್ ಸಮಯದಲ್ಲಿ ರಕ್ತನಾಳಗಳು ತೆರೆಯಲು ಪ್ರಾರಂಭಿಸುತ್ತವೆ. ಇದರೊಂದಿಗೆ, ಈ ರಕ್ತನಾಳಗಳಲ್ಲಿ ಅಂಟಿಕೊಂಡಿರುವ ಕೊಲೆಸ್ಟ್ರಾಲ್ ಕಣಗಳು ಕರಗಲು ಪ್ರಾರಂಭಿಸುತ್ತವೆ. ಈ ಕಾರಣದಿಂದಾಗಿ, ರಕ್ತ ಪರಿಚಲನೆಯು ಸಾಮಾನ್ಯವಾಗುತ್ತದೆ. ರಕ್ತದೊತ್ತಡವು ನಿಯಂತ್ರಣದಲ್ಲಿರುತ್ತದೆ. ಅದಕ್ಕಾಗಿಯೇ ಬೆಳಿಗ್ಗೆ 30 ನಿಮಿಷಗಳ ಕಾಲ ಬ್ರಿಸ್ಕ್ ವಾಕಿಂಗ್ ಮಾಡಲು ಪ್ರಯತ್ನಿಸುವುದು ಮುಖ್ಯ ಎನ್ನುತ್ತಾರೆ ಆರೋಗ್ಯ ತಜ್ಞರು. 


2. ಶ್ವಾಸಕೋಶದ ಆರೋಗ್ಯಕ್ಕೆ :
ಶ್ವಾಸಕೋಶದ ಸಮಸ್ಯೆ ಇರುವವರಿಗೆ ವೇಗದ ನಡಿಗೆ ವರದಾನವಾಗಿದೆ. ವೇಗದ ನಡಿಗೆಯಿಂದ, ತಾಜಾ ಗಾಳಿಯು ಶ್ವಾಸಕೋಶವನ್ನು ಪ್ರವೇಶಿಸುತ್ತದೆ. ಅದರ ನಂತರ ಆಮ್ಲಜನಕದ ಪೂರೈಕೆಯು ಸುಧಾರಿಸುತ್ತದೆ. ಈ ಕಾರಣದಿಂದಾಗಿ ಶ್ವಾಸಕೋಶಗಳು ಆರೋಗ್ಯಕರವಾಗುತ್ತವೆ.


ಇದನ್ನೂ ಓದಿ : ಈ ಆಹಾರ ಸೇವನೆ ಮೂಲಕ ದೂರ ಮಾಡಬಹುದು ವಿಟಮಿನ್ ಬಿ 12 ಕೊರತೆ


3. ಮಧುಮೇಹಿಗಳಿಗೆ ಬ್ರಿಸ್ಕ್ ವಾಕಿಂಗ್:
ವೇಗದ ನಡಿಗೆ ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ. ನೀವು ಮಧುಮೇಹಿಗಳಾಗಿದ್ದರೆ, ಒಂದು ತಿಂಗಳ ಕಾಲ ಪ್ರತಿದಿನ ಅರ್ಧ ಗಂಟೆ ಬ್ರಿಸ್ಕ್ ವಾಕ್ ಮಾಡುವುದರಿಂದ ಮೇದೋಜ್ಜೀರಕ ಗ್ರಂಥಿಯ ಕಾರ್ಯ ಸುಧಾರಿಸುತ್ತದೆ. ಅಲ್ಲದೆ, ಇದು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ನಡಿಗೆಯು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. 


4. ಕೀಲು ನೋವಿನಲ್ಲಿ ಪ್ರಯೋಜನಕಾರಿ:
ಕೀಲುಗಳಿಗೆ ಸಂಬಂಧಿಸಿದ ಯಾವುದೇ ಕಾಯಿಲೆಯಲ್ಲಿ ಬ್ರಿಸ್ಕ್ ವಾಕಿಂಗ್ ತುಂಬಾ ಪ್ರಯೋಜನಕಾರಿಯಾಗಿದೆ. ಅರ್ಧ ಗಂಟೆ ನಿಯಮಿತವಾದ ಬ್ರಿಸ್ಕ್ ವಾಕ್ ನಿಂದ ಕೀಲುಗಳಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ.  ಇದರಿಂದಾಗಿ ಅದರ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಇದಲ್ಲದೇ ದೇಹದ ಮೂಳೆಗಳೂ ಬಲಿಷ್ಠವಾಗಿರುತ್ತವೆ.


ನೀವು ದಿನಕ್ಕೆ ಎಷ್ಟು ನಡೆಯಬೇಕು?
ದೈಹಿಕ ಆರೋಗ್ಯಕ್ಕೆ ಉತ್ತಮ ವ್ಯಾಯಾಮಗಳಲ್ಲಿ ವಾಕಿಂಗ್ ಒಂದಾಗಿದೆ. ಬೊಜ್ಜು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಪ್ಪಿಸಲು ಬಯಸಿದರೆ, ಕನಿಷ್ಟ 10,000 ಹೆಜ್ಜೆಗಳಷ್ಟು ನಡೆಯಬೇಕು. ಪ್ರತಿದಿನ ಹೀಗೆ ಮಾಡಿದರೆ ನಿಮ್ಮ ಆರೋಗ್ಯಕ್ಕೆ ಹಲವಾರು ಅದ್ಭುತ ಲಾಭಗಳು ಸಿಗುತ್ತವೆ. ಇದರ ಫಲಿತಾಂಶಗಳು ಕೆಲವೇ ವಾರಗಳಲ್ಲಿ ಗೋಚರಿಸುತ್ತವೆ.


ಇದನ್ನೂ ಓದಿ ದೇಹದಲ್ಲಿ ಈ ವಿಟಮಿನ್ ಕಡಿಮೆಯಾದರೆ ಆಗುವುದು ಕೂದಲು ದೃಷ್ಟಿಗೆ ನಷ್ಟ! ಈ ಆಹಾರ ಸೇವಿಸಿ ಸಮಸ್ಯೆ ಪರಿಹರಿಸಿಕೊಳ್ಳಿ


ವಾಕಿಂಗ್‌ನ ಇತರ ಪ್ರಯೋಜನಗಳು
ವಾಕಿಂಗ್ ನಿಮ್ಮ ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಉತ್ತಮ ಸ್ಥಿತಿಯಲ್ಲಿರಿಸುತ್ತದೆ. ಇದು ನಿಮ್ಮ ದೇಹವನ್ನು ಸಕ್ರಿಯವಾಗಿಡಲು ಸಹ ಸಹಾಯ ಮಾಡುತ್ತದೆ.  ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗಾಗಿ ಪ್ರತಿನಿತ್ಯ ವಾಕಿಂಗ್ ಅಭ್ಯಾಸ ಮಾಡಿಕೊಂಡರೆ ಆರೋಗ್ಯ ಚೆನ್ನಾಗಿರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.