Diabetes ನಿಯಂತ್ರಣಕ್ಕೆ ಯಾವುದೇ ಔಷಧಿಗಿಂತ ಕಮ್ಮಿ ಇಲ್ಲ ಈ ಐದು ಬೀಜ ರಹಿತ ಹಣ್ಣುಗಳು!
Seedless Fruits For Diabetes Control: ಮಧುಮೇಹದಂತಹ ಕಾಯಿಲೆಗಳನ್ನು ಎದುರಿಸಲು, ಔಷಧಗಳು ಮಾತ್ರವಲ್ಲದೆ ಸರಿಯಾದ ಆಹಾರವೂ ಕೂಡ ತುಂಬಾ ಮುಖವಾಗಿದೆ. ರಕ್ತದಲ್ಲಿನ ಅಧಿಕ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಅಂತಹ ಕೆಲ ಬೀಜ ರಹಿತ ಹಣ್ಣುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ (Health News In Kannada)
Diabetes Control Fruits: ಅಧಿಕ ರಕ್ತದ ಸಕ್ಕರೆ ಅಂದರೆ ಮಧುಮೇಹವು ದೀರ್ಘಕಾಲದ ಕಾಯಿಲೆಯಾಗಿದ್ದು, ಅದಕ್ಕೆ ಯಾವುದೇ ನಿರ್ಧಿಷ್ಟವಾದ ಚಿಕಿತ್ಸೆ ಇಲ್ಲ, ಆದರೆ ಔಷಧಿಗಳ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಆದಾಗ್ಯೂ, ಮಧುಮೇಹಿಗಳು ತಮ್ಮ ಆಹಾರದ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಧ್ಯವಾದಷ್ಟು ನಿಯಂತ್ರಿಸಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ. ನಿಮ್ಮ ಆಹಾರದ ಮೂಲಕ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೀವು ಎಷ್ಟು ಹೆಚ್ಚು ನಿಯಂತ್ರಿಸಲು ಪ್ರಯತ್ನಿಸುತ್ತೀರೋ, ನೀವು ಹೆಚ್ಚು ಆರೋಗ್ಯಕರವಾಗಿರುತ್ತೀರಿ. ಆದಾಗ್ಯೂ, ಇದಕ್ಕಾಗಿ ಆಹಾರದಲ್ಲಿ ಯಾವುದೇ ವಿಶೇಷ ಬದಲಾವಣೆಗಳನ್ನು ಮಾಡುವ ಅವಶ್ಯಕತೆ ಇಲ್ಲ, ತರಕಾರಿಗಳು ಮತ್ತು ಹಣ್ಣುಗಳನ್ನು ಗರಿಷ್ಠ ಪ್ರಮಾಣದಲ್ಲಿ ಆಹಾರದಲ್ಲಿ ಶಾಮೀಲುಗೊಳಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಆದರೆ ಇಲ್ಲಿ ಮುಖ್ಯವಾದ ವಿಷಯ ಏನೆಂದರೆ, ಮಧುಮೇಹದಲ್ಲಿ, ಕೆಲವು ಹಣ್ಣುಗಳು ರಕ್ತದಲ್ಲಿನ ಸಕ್ಕರೆಯನ್ನು ಹಲವು ಪಟ್ಟು ಹೆಚ್ಚಿಸಬಹುದು, ಆದ್ದರಿಂದ ಅವುಗಳನ್ನು ಯೋಚಿಸಿದ ನಂತರ ಮಾತ್ರ ಆಹಾರದಲ್ಲಿ ಶಾಮೀಲುಗೊಳಿಸಿ. ಈ ಲೇಖನದಲ್ಲಿ, ನಾವು ನಿಮಗೆ ಅಂತಹ ಕೆಲ ಬೀಜರಹಿತ ಹಣ್ಣುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಅವುಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಅವು ಸಹಾಯ ಮಾಡುತ್ತದೆ.(Health News In Kannada)
1. ಹಿಪ್ಪು ನೇರಳೆ
ನೀವು ಕೂಡ ಒಂದು ವೇಳೆ ಹಿಪ್ಪುನೇರಳೆ ಹಣ್ಣನ್ನು ತಿನ್ನುತ್ತಿಲ್ಲ ಎಂದಾದಲ್ಲಿ, ನೀವು ಖಂಡಿತವಾಗಿಯೂ ಅದರ ರುಚಿ ನೋಡಬೇಕು. ಇದು ತುಂಬಾ ಸಿಹಿ ಮತ್ತು ರಸಭರಿತವಾದ ಹಣ್ಣಾಗಿರುತ್ತದೆ. ವಿಶೇಷವೆಂದರೆ ಅದರೊಳಗಿನ ಬೀಜಗಳ ಪ್ರಮಾಣ ತುಂಬಾ ಕಡಿಮೆಯಾಗಿರುತ್ತದೆ, ಹಣ್ಣಿನ ಜೊತೆಗೆಯೇ ಬೀಜಗಳೂ ಕೂಡ ಹೊಟ್ಟೆಗೆ ಹೋಗುತ್ತವೆ. ಮಲ್ಬೆರಿ ಹಣ್ಣನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
2. ದ್ರಾಕ್ಷಿಗಳು
ದ್ರಾಕ್ಷಿಯೊಳಗಿನ ಬೀಜಗಳಿರುತ್ತವೆ ಆದರೂ ಅವು ತುಂಬಾ ಚಿಕ್ಕದಾಗಿರುತ್ತವೆ. ಇದೀಗ ಸೀಡ್ ಲೆಸ್ ದ್ರಾಕ್ಷಿಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ದ್ರಾಕ್ಷಿ ಹಣ್ಣು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ, ಇದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಮಧುಮೇಹಕ್ಕೆ ಸಂಬಂಧಿಸಿದ ಇತರ ತೊಡಕುಗಳನ್ನು ಕಡಿಮೆ ಮಾಡುತ್ತದೆ.
3. ಅನಾನಸ
ಅನೇಕ ಮಧುಮೇಹ ರೋಗಿಗಳು ಅನಾನಸ್ ತಿನ್ನಲು ಹೆದರುತ್ತಾರೆ, ಆದರೆ ಈ ಹಣ್ಣನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ಅದು ರಕ್ತದೊತ್ತಡವನ್ನು ಹೆಚ್ಚಿಸುವ ಬದಲು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಅನಾನಸ್‌ನಲ್ಲಿ ಅನೇಕ ವಿಶೇಷ ಪೋಷಕಾಂಶಗಳು ಕಂಡುಬರುತ್ತವೆ, ಇದು ಮಧುಮೇಹದ ತೊಡಕುಗಳನ್ನು ಕಡಿಮೆ ಮಾಡುತ್ತದೆ.
4. ಸ್ಟ್ರಾಬೆರಿ
ಸ್ಟ್ರಾಬೆರಿ ಹಣ್ಣು ಮಧುಮೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಮತ್ತು ಈ ಹಣ್ಣಿನ ಬೀಜಗಳು ಕೂಡ ತುಂಬಾ ಚಿಕ್ಕದಾಗಿರುತ್ತವೆ ಮತ್ತು ಅವು ಹಣ್ಣಿನ ಒಳಗೆ ಅಲ್ಲ ಆದರೆ ಹೊರಗೆ ಇರುತ್ತವೆ. ಆದ್ದರಿಂದ ಸ್ಟ್ರಾಬೆರಿಯನ್ನು ಬೀಜರಹಿತ ಹಣ್ಣು ಎಂದು ಕರೆಯಬಹುದು. ಅಲ್ಲದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸ್ಟ್ರಾಬೆರಿ ತುಂಬಾ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ-Diabetes ನಲ್ಲಿ ಇನ್ಸುಲಿನ್ ಸೆನ್ಸಿಟಿವಿಟಿ ಹೆಚ್ಚಿಸಲು ಇಲ್ಲಿವೆ 5 ಬೆಸ್ಟ್ ವಿಧಾನಗಳು!
5. ಬಾಳೆಹಣ್ಣು
ಬಾಳೆಹಣ್ಣನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಅದು ರಕ್ತದಲ್ಲಿನ ಸಕ್ಕರೆ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಪೊಟ್ಯಾಸಿಯಮ್ ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳಿಂದ ಈ ಹಣ್ಣು ಸಮೃದ್ಧವಾಗಿದೆ. ಈ ಹಣ್ಣು ಮಧುಮೇಹ ರೋಗಿಗಳಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ, ಇದನ್ನು ಕಡಿಮೆ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಪ್ರತಿದಿನ ಒಂದು ಬಾಳೆಹಣ್ಣು ಸೇವಿಸಬಹುದು.
ಇದನ್ನೂ ಓದಿ-High Cholesterol ನಿಮ್ಮ ಟೆನ್ಷನ್ ಹೆಚ್ಚಿಸಿದೆಯಾ? ಈ ಹಸಿರು ಬಣ್ಣದ ಹುಳಿಹಣ್ಣು ಅದಕ್ಕೆ ರಾಮಬಾಣ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ