ಬೆಂಗಳೂರು : ಸೌತೆಕಾಯಿಯನ್ನು ತಿನ್ನುವುದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಸೌತೆಕಾಯಿಯನ್ನು ಹಸಿಯಾಗಿಯೇ ತಿನ್ನಲಾಗುತ್ತದೆ. ಸಲಾಡ್ ಮೊಸರು ಬಜ್ಜಿ ರೂಪದಲ್ಲಿ ಸೌತೆಕಾಯಿ ಸೇವಿಸಲಾಗುತ್ತದೆ. ಇದರಲ್ಲಿ ವಿಟಾಮಿನ್ ಮತ್ತು ಮಿನರಲ್ ಗಳು ಹೇರಳವಾಗಿ ಕಂಡುಬರುತ್ತವೆ. ಜೊತೆಗೆ ಇದರಲ್ಲಿ ಹೆಚ್ಚಿನ ನೀರಿನ ಅಂಶವಿದ್ದು ಇದು ದೇಹವನ್ನು ಹೈಡ್ರೇಟ್ ಆಗಿ ಇಡಲು ಸಹಾಯ ಮಾಡುತ್ತದೆ. ಆದರೆ ಇದನ್ನು ಸೇವಿಸುವಾಗ ಅನೇಕರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಹೌದು, ಸೌತೆಕಾಯಿಯನ್ನು ಎಲ್ಲಾ ಕಾಲದಲ್ಲಿಯೂ ತಿನ್ನುವಂತಿಲ್ಲ. ಸೌತೆಕಾಯಿ ತಿನ್ನುವುದಕ್ಕೂ ಸರಿಯಾದ ಸಮಯ ಎನ್ನುವುದಿದೆ. 


COMMERCIAL BREAK
SCROLL TO CONTINUE READING

ಈ ಸಮಯದಲ್ಲಿ ಸೌತೆಕಾಯಿ ತಿನ್ನಬೇಡಿ :
ಡಾ. ಆಯುಷಿ ಪ್ರಕಾರ, ಸೌತೆಕಾಯಿ ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ. ಆದರೆ ಇದನ್ನು ಯಾವಾಗಲೂ ಹಗಲಿನಲ್ಲಿ ತಿನ್ನಬೇಕು. ಇದರಿಂದ ದೇಹವು ಅನೇಕ ರೀತಿಯ ಪೋಷಕಾಂಶಗಳನ್ನು ಪಡೆಯುತ್ತದೆ. ಆದರೆ ರಾತ್ರಿ ಹೊತ್ತು ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಪ್ರಯೋಜನವಾಗುವ ಬದಲು ಹಾನಿ ಉಂಟಾಗುವುದು. 


ಇದನ್ನೂ ಓದಿ : Donkey Milk Benefits: ನಿಮಗೆ ಗೊತ್ತಾ ʼಕತ್ತೆ ಹಾಲಿನʼ ಪ್ರಯೋಜನಗಳು : ಇಲ್ಲಿವೆ ನೋಡಿ.. 


ರಾತ್ರಿ ಹೊತ್ತು ಸೌತೆಕಾಯಿ ಏಕೆ ತಿನ್ನಬಾರದು?
1. ಜೀರ್ಣಕ್ರಿಯೆಯ ಮೇಲೆ ಪರಿಣಾಮ :
ಸೌತೆಕಾಯಿಯು ಕ್ಯುಕುರ್ಬಿಟಾಸಿನ್ ಅನ್ನು ಹೊಂದಿರುತ್ತದೆ. ಅದು ನಿಮ್ಮ ಜೀರ್ಣಕ್ರಿಯೆಯು ತುಂಬಾ ಪ್ರಬಲವಾಗಿದ್ದಾಗ ಮಾತ್ರ ಜೀರ್ಣವಾಗುತ್ತದೆ. ಇಲ್ಲದಿದ್ದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸುತ್ತವೆ. ವಾಸ್ತವವಾಗಿ, ರಾತ್ರಿಯಲ್ಲಿ ಸೌತೆಕಾಯಿಯನ್ನು ತಿನ್ನುವುದರಿಂದ ಹೊಟ್ಟೆಯು ಭಾರವಾಗಿರುತ್ತದೆ. ಮಲಬದ್ಧತೆ, ಅಜೀರ್ಣ ಅಥವಾ ಹೊಟ್ಟೆ ಉಬ್ಬುವಿಕೆಯ ಸಮಸ್ಯೆ ಎದುರಾಗುತ್ತದೆ. 


2. ನಿದ್ರೆಯ ಮೇಲೆ ಪರಿಣಾಮ : 
ರಾತ್ರಿ ಸೌತೆಕಾಯಿ ತಿಂದರೆ ನೆಮ್ಮದಿಯ ನಿದ್ದೆ ಬರುವುದು ಕಷ್ಟ.  ಏಕೆಂದರೆ ಹೊಟ್ಟೆ ಭಾರವಾಗಿ ಮಲಗಲು ತೊಂದರೆಯಾಗುತ್ತದೆ, ಇದರ ಜೊತೆಗೆ ಜೀರ್ಣಕ್ರಿಯೆ ಕೆಟ್ಟರೆ ಮತ್ತೊಂದು ಸಮಸ್ಯೆ ಕಾಡುತ್ತದೆ. ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವಿರುವುದರಿಂದ ರಾತ್ರಿಯಲ್ಲಿ ಮೂತ್ರ ವಿಸರ್ಜನೆಗೆ ಎದ್ದೇಳಬೇಕಾಗುತ್ತದೆ. ಇದರಿಂದಾಗಿ ನಿದ್ರೆಗೆ ತೊಂದರೆಯಾಗುತ್ತದೆ.


ಇದನ್ನೂ ಓದಿ : ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಕೊಂಡು ಕೆಲಸ ಮಾಡ್ತೀರಾ..! ಜೀವಕ್ಕೆ ಅಪಾಯ ಇದೆ..


ಹಗಲಿನಲ್ಲಿ ಸೌತೆಕಾಯಿಯನ್ನು ಸೇವಿಸಿ : 
ಹೆಚ್ಚಿನ ಆರೋಗ್ಯ ತಜ್ಞರು ಸೌತೆಕಾಯಿಯನ್ನು ಹಗಲಿನಲ್ಲಿ ಮಾತ್ರ ತಿನ್ನಲು ಶಿಫಾರಸು ಮಾಡುತ್ತಾರೆ. ಏಕೆಂದರೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸೌತೆಕಾಯಿಯ ಸೇವನೆಯು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದರಲ್ಲಿರುವ 95% ನೀರಿನ ಮೂಲಕ ದೇಹವನ್ನು ಹೈಡ್ರೇಟ್ ಆಗಿ ಇರಿಸಬಹುದು. ಇದಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಬಲವಾದ ಮೂಳೆಗಳಂತಹ ಪ್ರಯೋಜನಗಳು ಕೂಡಾ ಸೌತೆಕಾಯಿ ಸೇವನೆಯಿಂದ ಸಿಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ