ಬೆಂಗಳೂರು : ಪಪ್ಪಾಯಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.   ಇದರಲ್ಲಿ ಮೆಗ್ನೀಸಿಯಮ್, ಫೈಬರ್, ವಿಟಮಿನ್ಸ್ ನಂತಹ ಹಲವಾರು ಪೋಷಕಾಂಶಗಳು ತುಂಬಿರುತ್ತವೆ. ಪಪ್ಪಾಯಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಅನೇಕ ರೋಗಗಳ ವಿರುದ್ಧ ಹೋರಾಡುತ್ತದೆ. ಇದನ್ನು ಸೇವಿಸುವುದರಿಂದ ದೇಹದ ತೂಕ ನಿಯಂತ್ರಣದಲ್ಲಿರುತ್ತದೆ ಮತ್ತು ಹೃದಯವು ಸರಿಯಾಗಿ ಕೆಲಸ ಮಾಡುತ್ತದೆ. ಪಪ್ಪಾಯಿಯು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.  ಈ ಹಣ್ಣು ಇಷ್ಟು ಅದ್ಭುತ ಗುಣಗಳನ್ನು ಹೊಂದಿದ್ದರೂ ಕೆಲವೊಂದು ಸಂದರ್ಭಗಳಲ್ಲಿ ಪಪ್ಪಾಯ ಹಣ್ಣನ್ನು ಸೇವಿಸಬಾರದು. 


COMMERCIAL BREAK
SCROLL TO CONTINUE READING

ಪಪ್ಪಾಯಿ ತಿಂದ ನಂತರ ಯಾವತ್ತೂ ಔಷಧಿಯನ್ನು ತೆಗೆದುಕೊಳ್ಳಬೇಡಿ :
ಪಪ್ಪಾಯಿಯನ್ನು ತಿಂದ ತಕ್ಷಣ ಯಾವುದೇ ರೀತಿಯ ಔಷಧಿಯನ್ನು ತೆಗೆದುಕೊಳ್ಳಬಾರದು. ಹೀಗೆ ಮಾಡುವುದರಿಂದ ಕೆಲವು ಔಷಧಿಗಳಲ್ಲಿರುವ ರಾಸಾಯನಿಕ ಪಪ್ಪಾಯಿಯೊಂದಿಗೆ ಬೆರೆತು ಬಹಳ ಬೇಗನೆ ರಿಯಾಕ್ಟ್ ಮಾಡುತ್ತದೆ. ಮಾತ್ರವಲ್ಲ ಇದರಿಂದಾಗಿ ದೇಹದಿಂದ ರಕ್ತಸ್ರಾವವಾಗುವ ಅಪಾಯವಿರುತ್ತದೆ. 


ಇದನ್ನೂ ಓದಿ : Pumpkin Seeds : ಕುಂಬಳಕಾಯಿ ಬೀಜದಲ್ಲಿದೆ ಈ ಕಾಯಿಲೆ ಗುಣಪಡಿಸುವ ಶಕ್ತಿ


ಕಾಮಾಲೆ ಮತ್ತು ಆಸ್ತಮಾ : 
ಕಾಮಾಲೆ ಮತ್ತು ಅಸ್ತಮಾ ರೋಗಿಗಳು ಪಪ್ಪಾಯ ತಿನ್ನಬಾರದು.  ತಜ್ಞರ ಪ್ರಕಾರ, ಪಪ್ಪಾಯ ಹಣ್ಣಿನಲ್ಲಿರುವ ಪಪೈನ್ ಮತ್ತು ಬೀಟಾ ಕ್ಯಾರೋಟಿನ್ ಈ ಎರಡೂ ಕಾಯಿಲೆಗಳಿಗೆ ಹಾನಿಕಾರಕವಾಗಿದೆ. 


ಗರ್ಭಾವಸ್ಥೆಯಲ್ಲಿ :
ಗರ್ಭಾವಸ್ಥೆಯಲ್ಲಿ ಪಪ್ಪಾಯಿಯನ್ನು ತಿನ್ನುವುದು ಹಾನಿಕಾರಕವಾಗಿದೆ.  ಏಕೆಂದರೆ ಅದರಲ್ಲಿರುವ ಪಾಪೈನ್ ದೇಹದ ಜೀವಕೋಶ ಪೊರೆಯನ್ನು ಹಾನಿಗೊಳಿಸುತ್ತದೆ. ಹುಟ್ಟಲಿರುವ ಮಗುವಿನ ಬೆಳವಣಿಗೆಗೆ ಇದು ಬಹಳ ಮುಖ್ಯ. ಅದಕ್ಕಾಗಿಯೇ ಗರ್ಭಿಣಿಯರು ಪಪ್ಪಾಯಿ ತಿನ್ನದಂತೆ ಸಲಹೆ ನೀಡಲಾಗುತ್ತದೆ. 


ಲೋ ಬ್ಲಡ್ ಶುಗರ್ :
ಲೋ ಬ್ಲಡ್ ಶುಗರ್ ಇರುವವರು ಪಪ್ಪಾಯಿಯನ್ನು ತಿನ್ನಲೇಬಾರದು. ಒಂದು ವೇಳೆ ಇವರು ಪಪ್ಪಾಯವನ್ನು ತಿಂದರೆ ಸಮಸ್ಯೆಗಳು ಹೆಚ್ಚಾಗಬಹುದು. ಮಧುಮೇಹ ರೋಗಿಗಳೂ ವೈದ್ಯರ ಸಲಹೆಯಿಲ್ಲದೆ ಪಪ್ಪಾಯಿಯನ್ನು ಸೇವಿಸಬಾರದು. ಪಪ್ಪಾಯಿಯಲ್ಲಿ ನಾರಿನಂಶ ಹೆಚ್ಚಿರುತ್ತದೆ ಮತ್ತು ಕಡಿಮೆ ಸಕ್ಕರೆ ಅಂಶವಿರುತ್ತದೆ. ಆದ್ದರಿಂದ ಲೋ ಬ್ಲಡ್ ಶುಗರ್ ಇರುವವರಿಗೆ  ಈ ಹಣ್ಣು ಸೂಕ್ತವಾದುದಲ್ಲ. 


ಇದನ್ನೂ ಓದಿ : Butter Milk : 3 ವಾರಗಳಲ್ಲಿ ತೂಕವನ್ನು ಕಡಿಮೆಗೊಳಿಸುತ್ತೆ ಈ ಪಾನೀಯ


ಸ್ಕಿನ್ ಅಲರ್ಜಿ :
ಯಾವುದೇ ರೀತಿಯ ಚರ್ಮದ ಅಲರ್ಜಿ ಇರುವವರು ಪಪ್ಪಾಯಿ ತಿನ್ನಬಾರದು.  ಇದರ ಬಳಕೆಯಿಂದ  ತಲೆನೋವು, ತಲೆಸುತ್ತು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.