ವೇಗವಾಗಿ ದೇಹ ತೂಕ ಕಳೆದುಕೊಳ್ಳಲು 20 ನಿಮಿಷಗಳ ಈ ಸೂಪರ್ ವರ್ಕೌಟ್ ಪ್ರಯತ್ನಿಸಿ

Easy Weight lose Tips : ದೇಹ ತೂಕ ಹೆಚ್ಚಾಗುವುದು ಒಂದು ರೋಗವಲ್ಲ, ಆದರೆ ಇದು ಅನೇಕ ರೋಗಗಳಿಗೆ ಮೂಲ. ಒಮ್ಮೆ ದೇಹ ತುಕ ಹೆಚ್ಚಾದರೆ ಅದನ್ನು ನಿಯಂತ್ರಿಸುವುದು ಬಹಳ ಕಷ್ಟ. ಇದರಿಂದ ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೃದಯಾಘಾತ, ಹೃದಯ ವೈಫಲ್ಯ, ಪರಿಧಮನಿಯ ಕಾಯಿಲೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Written by - Ranjitha R K | Last Updated : Mar 7, 2023, 12:45 PM IST
  • ಬೊಜ್ಜು ಇತ್ತೀಚಿನ ಯುವ ಜನತೆ ಎದುರಿಸುವ ಬಹು ದೊಡ್ಡ ಸಮಸ್ಯೆ.
  • ದೇಹ ತೂಕ ಹೆಚ್ಚಳ ಅನೇಕ ರೋಗಗಳ ಮೂಲ
  • ತೂಕವನ್ನು ಕಳೆದುಕೊಳ್ಳಲು ಈ ವ್ಯಾಯಾಮ ಮಾಡಿ
ವೇಗವಾಗಿ ದೇಹ ತೂಕ ಕಳೆದುಕೊಳ್ಳಲು 20 ನಿಮಿಷಗಳ ಈ  ಸೂಪರ್ ವರ್ಕೌಟ್ ಪ್ರಯತ್ನಿಸಿ  title=

ಬೆಂಗಳೂರು : ಬೊಜ್ಜು ಇತ್ತೀಚಿನ ಯುವ ಜನತೆ ಎದುರಿಸುವ ಬಹು ದೊಡ್ಡ ಸಮಸ್ಯೆ. ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಯುವಕ ಯುವತಿಯರು ಎದುರಿಸುವ ಸಮಸ್ಯೆ ಇದಾಗಿದೆ. ದೇಹ ತೂಕ ಹೆಚ್ಚಾಗುವುದು ಒಂದು ರೋಗವಲ್ಲ, ಆದರೆ ಇದು ಅನೇಕ ರೋಗಗಳಿಗೆ ಮೂಲ. ಒಮ್ಮೆ ದೇಹ ತೂಕ ಹೆಚ್ಚಾದರೆ ಅದನ್ನು ನಿಯಂತ್ರಿಸುವುದು ಬಹಳ ಕಷ್ಟ. ಆದರೆ ಸಮಯಕ್ಕೆ ಸರಿಯಾಗಿ ಇದನ್ನು ನಿಯಂತ್ರಿಸದೆ ಹೋದಲ್ಲಿ   ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೃದಯಾಘಾತ, ಹೃದಯ ವೈಫಲ್ಯ, ಪರಿಧಮನಿಯ ಕಾಯಿಲೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ, ದೇಹ ತೂಕ ಹೆಚ್ಚಾಗುವುದು ದೇಹದ ಆಕಾರವನ್ನು ಕೂಡಾ ಹಾಳುಮಾಡುತ್ತದೆ. 

ತೂಕವನ್ನು ಕಳೆದುಕೊಳ್ಳಲು ಈ ವ್ಯಾಯಾಮ ಮಾಡಿ :
ತೂಕವನ್ನು ಕಳೆದುಕೊಳ್ಳುವುದು ಎಂದರೆ ಮಕ್ಕಳಾಟವಲ್ಲ. ಕಟ್ಟುನಿಟ್ಟಾದ ಆಹಾರ ಕ್ರಮ ಮತ್ತು ಕಠಿಣ ವ್ಯಾಯಾಮವನ್ನು ಅನುಸರಿಸಬೇಕಾಗುತ್ತದೆ. ಇಂದಿನ ಬ್ಯುಸಿ ಲೈಫ್ ಸ್ಟೈಲ್ ನಲ್ಲಿ ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಹರಿಸಲು ಎಲ್ಲರಿಗೂ  ಸಮಯವಿರುವುದಿಲ್ಲ. ಅಲ್ಲದೆ ಜಿಮ್ ಬಹಳಷ್ಟು ದುಬಾರಿ ಕೂಡಾ. ಹೀಗಿರುವಾಗ ಕಡಿಮೆ ಹಣ ಖರ್ಚು ಮಾಡಿ, ತೂಕ ಇಳಿಸಿಕೊಳ್ಳಲು ಬಯಸುವುದಾದರೆ ಸ್ಕಿಪ್ಪಿಂಗ್ ಪ್ರಾರಂಭಿಸಿ. 

ಇದನ್ನೂ ಓದಿ : ಹುರುಳಿ ಹಿಟ್ಟಿನಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಸ್ಕಿಪ್ಪಿಂಗ್ ಮೂಲಕ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು : 
ನಮ್ಮಲ್ಲಿ ಹಲವರು ನಾವು ಚಿಕ್ಕವರಿದ್ದಾಗ ಸ್ಕಿಪ್ ಮಾಡುತ್ತಿದ್ದಿರಬಹುದು. ಆದರೆ ಕಾಲ ಕಳೆಯುತ್ತಿದ್ದಂತೆ ಆ ಅಭ್ಯಾಸವೇ ಬಿಟ್ಟು ಹೋಗಿರುತ್ತದೆ. ಆದರೆ, ಈಗ ಮತ್ತೆ ಆ ಬಾಲ್ಯದ ಆಟವನ್ನು ಮೈಗೂಡಿಸಿಕೊಳ್ಳಬಹುದು. ಪ್ರತಿದಿನ 20 ರಿಂದ 25 ನಿಮಿಷಗಳ ಕಾಲ ನಿಯಮಿತವಾಗಿ ಸ್ಕಿಪ್ಪಿಂಗ್ ಮಾಡಿದರೆ ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ವೇಗವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎನ್ನವುದು ಫಿಟ್‌ನೆಸ್ ತಜ್ಞರ ಅಭಿಪ್ರಾಯ. ಹೀಗೆ ಮಾಡುವುದರಿಂದ ಪ್ರತಿದಿನ 200 ರಿಂದ 300 ಕ್ಯಾಲೊರಿಗಳನ್ನು ಬರ್ನ್ ಮಾಡುವುದು ಸಾಧ್ಯವಾಗುತ್ತದೆ. 

ಸ್ಕಿಪ್ಪಿಂಗ್‌ನ ಇತರ ಪ್ರಯೋಜನಗಳು :
1. ಪ್ರತಿದಿನ ಸ್ಕಿಪ್ ಮಾಡುವ ಜನರು ಉತ್ತಮ ರಕ್ತ ಪರಿಚಲನೆಯನ್ನು ಹೊಂದಿರುತ್ತಾರೆ.
2. ಈ ವ್ಯಾಯಾಮದಿಂದ ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು.
3. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರಯೋಜನಕಾರಿ. 
4. ಸ್ಕಿಪ್ಪಿಂಗ್ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
5. ಸಣ್ಣ ವಯಸ್ಸಿನಲ್ಲಿಯೇ ಸ್ಕಿಪ್ ಮಾಡಿದರೆ ಎತ್ತರ ಹೆಚ್ಚುತ್ತದೆ ಎಂದು ಕೂಡಾ ಹೇಳಲಾಗುತ್ತದೆ. 

ಇದನ್ನೂ ಓದಿ :  Curry Leaves: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವು ಜಗಿದರೆ, ಈ 5 ರೋಗ ಹತ್ತಿರವೂ ಸುಳಿಯಲ್ಲ

(ಸೂಚಿಸಿ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News