ಈ ಐದು ವಸ್ತುಗಳನ್ನು ಫ್ರಿಜ್ ನಲ್ಲಿಟ್ಟು ನಂತರ ಬಿಸಿ ಮಾಡಿ ತಿನ್ನಲೇಬಾರದು.! ಯಾಕೆ ಗೊತ್ತಾ ?
ಆಹಾರವನ್ನು ಫ್ರಿಜ್ ನಲ್ಲಿಟ್ಟು ತಿನ್ನುವ ಅಭ್ಯಾಸವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಫ್ರಿಜ್ ನಲ್ಲಿಟ್ಟು ನಂತರ ಬಿಸಿಮಾಡಿ ತಿನ್ನಲು ಯೋಗ್ಯವಲ್ಲದ ಐದು ಆಹಾರ ಪದಾರ್ಥಗಳು ಯಾವುವು ಮತ್ತು ಅದರ ಹಿಂದಿರುವ ಕಾರಣ ಏನು ಎನ್ನುವುದನ್ನು ಇಲ್ಲಿ ಹೇಳುತ್ತೇವೆ.
ಬೆಂಗಳೂರು : ಅಡುಗೆ ಮನೆಯಲ್ಲಿ ಉಳಿದ ಯಾವ ವಸ್ತುವನ್ನು ಕೂಡಾ ನಾವು ವೇಸ್ಟ್ ಮಾಡುವುದಿಲ್ಲ. ಆಹಾರವನ್ನು ದೇವರು ಎಂದು ತಿಳಿದಿರುವ ಭಾರತೀಯ ಮನೆಯಲ್ಲಿ ಆಹಾರವನ್ನು ಎಸೆಯುವುದೆಂದರೆ ಹಿಂದೆ ಮುಂದೆ ನೋಡುತ್ತಾರೆ. ಇದಕ್ಕಾಗಿ ಆಹಾರವನ್ನು ಫ್ರಿಜ್ ನಲ್ಲಿಟ್ಟು ಮರುದಿನ ದಿನ ಮತ್ತೆ ಬಿಸಿ ಮಾಡಿ ತಿನ್ನುತ್ತಾರೆ. ಆಹಾರ ಫ್ರಿಜ್ ನಲ್ಲಿಟ್ಟರೆ ಕೆಡುವುದಿಲ್ಲ ನಿಜ. ಅಂದ ಮಾತ್ರಕ್ಕೆ ಅದು ತಿನ್ನಲು ಸುರಕ್ಷಿತ ಎಂದು ಹೇಳುವಂತಿಲ್ಲ. ಆಹಾರವನ್ನು ಫ್ರಿಜ್ ನಲ್ಲಿಟ್ಟು ತಿನ್ನುವ ಅಭ್ಯಾಸವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಫ್ರಿಜ್ ನಲ್ಲಿಟ್ಟು ನಂತರ ಬಿಸಿಮಾಡಿ ತಿನ್ನಲು ಯೋಗ್ಯವಲ್ಲದ ಐದು ಆಹಾರ ಪದಾರ್ಥಗಳು ಯಾವುವು ಮತ್ತು ಅದರ ಹಿಂದಿರುವ ಕಾರಣ ಏನು ಎನ್ನುವುದನ್ನು ಇಲ್ಲಿ ಹೇಳುತ್ತೇವೆ.
1.ಅನ್ನ :
ಅನ್ನ ಉಳಿದ ಮೇಲೆ ಫ್ರಿಜ್ ನಲ್ಲಿಟ್ಟು ಬಿಸಿ ಮಾಡಿ ತಿನ್ನುವ ಅಭ್ಯಾಸವಿದ್ದರೆ ಇಂದೇ ಬಿಟ್ಟು ಬಿಡಿ. ಅನ್ನದಲ್ಲಿ ಬ್ಯಾಸಿಲಸ್ ಸೆರಿಯಸ್ ಎಂಬ ಬ್ಯಾಕ್ಟಿರಿಯಾ ಸೃಷ್ಟಿಯಾಗುತ್ತದೆ. ಇದು ಒಂದು ನಿಶ್ಚಿತ ಅವಧಿಯ ಬಳಿಕ ಅನ್ನವನ್ನು ಕೆಡಿಸುವ ಪ್ರಕ್ರಿಯೆ ಶುರುಮಾಡುತ್ತದೆ. ನೀವು ಫ್ರಿಜ್ ನಲ್ಲಿಟ್ಟ ಅನ್ನ ಕೆಡುವುದಿಲ್ಲ ನಿಜ. ಆದರೆ, ಅದರಲ್ಲಿ ಬ್ಯಾಸಿಲಸ್ ಸೆರಿಯಸ್ ಸೃಷ್ಟಿಯಾಗಿರುತ್ತದೆ. ಫುಡ್ ಸ್ಟಾಂಡರ್ಡ್ ಏಜೆನ್ಸಿ ಪ್ರಕಾರ ಈ ರೀತಿಯ ಅನ್ನವನ್ನು ತಿಂದರೆ ಫುಡ್ ಪಾಯಿಸನ್ ಉಂಟಾಗುತ್ತದೆ.
ಇದನ್ನೂ ಓದಿ : Milk Benefits: ಅಸ್ತಮಾ, ಮೈಗ್ರೇನ್, ಕಿಡ್ನಿ ಸ್ಟೋನ್, ಡಿಪ್ರೆಶನ್ನಿಂದ ಮುಕ್ತಿ ಪಡೆಯಲು ಹಾಲಿನೊಂದಿಗೆ ಈ ಎಲೆ ಬೆರೆಸಿ ಕುಡಿದರೆ ಸಾಕು!
ಆಲೂ ಗಡ್ಡೆ :
ಆಲೂ ಗಡ್ಡೆ ಪಲ್ಯ ಆಗಲಿ ಅಥವಾ ಆಲೂನಿಂದ ಮಾಡಿದ ಬೇರೆ ಯಾವುದೇ ಆಹಾರ ವಸ್ತುಗಳಾಗಿರಲಿ ಅದನ್ನು ಫ್ರಿಜ್ ನಲ್ಲಿಟ್ಟು ಮತ್ತೊಮ್ಮೆ ಬಿಸಿ ಮಾಡಿ ತಿನ್ನಲೇ ಬಾರದು. ಮತ್ತೊಮ್ಮೆ ಬಿಸಿ ಮಾಡಿದಾಗ ಅಲೂಗಡ್ಡೆಯಲ್ಲಿರುವ ಪೋಷಾಕಾಂಶಗಳು ಮುಗಿದೇ ಹೋಗುತ್ತದೆ. ಇದರ ಪರಿಣಾಮ ನಮ್ಮ ಜೀರ್ಣಾಂಗವ್ಯೂಹದ ಮೇಲಾಗುತ್ತದೆ.
3. ಮೊಟ್ಟೆ :
ಅಮೆರಿಕದ ಆಹಾರ ಏಜೆನ್ಸಿ ಎಫ್ ಡಿಎ ಪ್ರಕಾರ ಯಾವುದೇ ಕಾರಣಕ್ಕೂ ಮೊಟ್ಟೆಯನ್ನು ಮತ್ತೊಮ್ಮೆ ಬಿಸಿ ಮಾಡಿ ತಿನ್ನಲೇ ಬಾರದು. ಮೊಟ್ಟೆಯಲ್ಲಿ ಸಲ್ಮೊನಿಲ ಎಂಬ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಇದು ದೇಹದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಹಾಗಾಗಿ, ಮೊಟ್ಟೆ ಅಥವಾ ಮೊಟ್ಟೆಯಿಂದ ಮಾಡಿರುವ ಯಾವುದೇ ಉತ್ಪನ್ನ ಫ್ರಿಜ್ ನಲ್ಲಿಟ್ಟು ಮತ್ತೆ ಬಿಸಿ ಮಾಡಿ ಮೇಲೆ ತಿನ್ನಲೇ ಬಾರದು.
ಇದನ್ನೂ ಓದಿ : ಕೊಲೆಸ್ಟ್ರಾಲ್ ಹೆಚ್ಚಾಗಿದ್ದರೆ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
4.ಪಾಲಕ್ ಸೊಪ್ಪು :
ಪಾಲಕ್ ಸೊಪ್ಪನ್ನು ಯಾವುದೇ ಕಾರಣಕ್ಕೂ ಮತ್ತೆ ಮತ್ತೆ ಬಿಸಿ ಮಾಡಿ ತಿನ್ನಲೇ ಬಾರದು. ಯಾವತ್ತಿಗೂ ತಾಜಾ ಪಾಲಕ್ ಬಿಸಿ ಬಿಸಿ ತಿನ್ನಿ. ಬಳಸದೇ ಉಳಿದ ಪಾಲಕ್ ಪಲ್ಯವನ್ನು ಬಿಸಿ ಮಾಡಿ ತಿನ್ನಬಾರದು. ಬಿಸಿ ಮಾಡುವಾಗ ಅದರಲ್ಲಿರುವ ನೈಟ್ರೇಟ್ ಅಂಶ ಕೊನೆಗೊಳ್ಳುತ್ತದೆ. ಇದು ಮುಂದೆ ಕ್ಯಾನ್ಸರ್ ನಂತಹ ರೋಗಕ್ಕೆ ಮೂಲವಾಗಬಹುದು.
5.ಬೀಟ್ ರೂಟ್ :
ಉಳಿದ ಬೀಟ್ ರೂಟನ್ನು ಫ್ರಿಜ್ ನಲ್ಲಿಟ್ಟು ಮತ್ತೆ ಬಿಸಿ ಮಾಡಿ ತಿನ್ನುವ ತಪ್ಪನ್ನು ಯಾವತ್ತೂ ಮಾಡಬೇಡಿ. ಪಾಲಕ್ ಸೊಪ್ಪಿನಂತೆಯೇ, ಬೀಟ್ ರೂಟ್ ಬಿಸಿ ಮಾಡುವುದರಿಂದ ಅದರಲ್ಲಿನ ನೈಟ್ರೇಟ್ ಖತಂ ಆಗುತ್ತದೆ. ಮುಂದೆ ಆರೋಗ್ಯದಲ್ಲಿ ಸಮಸ್ಯೆ ತಂದೊಡ್ಡುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.