Milk Benefits: ಅಸ್ತಮಾ, ಮೈಗ್ರೇನ್, ಕಿಡ್ನಿ ಸ್ಟೋನ್, ಡಿಪ್ರೆಶನ್ನಿಂದ ಮುಕ್ತಿ ಪಡೆಯಲು ಹಾಲಿನೊಂದಿಗೆ ಈ ಎಲೆ ಬೆರೆಸಿ ಕುಡಿದರೆ ಸಾಕು!

Basil Milk Benefits: ಸಾಮಾನ್ಯವಾಗಿ ಶೀತ, ಜ್ವರ ಎಂದಾರೆ ನೀವು ಅರಿಶಿನದ ಹಾಲನ್ನು ಸೇವಿಸಿರಬಹುದು. ಆದರೆ, ತುಳಸೆ ಮಿಶ್ರಿತ ಹಾಲನ್ನು ಎಂದಾದರೂ ಸೇವಿಸಿದ್ದೀರಾ? ತುಳಸಿ ಹಾಲನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತೆ ಗೊತ್ತಾ? 

Written by - Yashaswini V | Last Updated : Aug 29, 2022, 09:57 AM IST
  • ಹಾಲು ದೇಹಕ್ಕೆ ಹಲವು ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ.
  • ಹಾಲಿನ ಪ್ರಯೋಜನಗಳನ್ನು ಹೆಚ್ಚಿಸಲು, ನಾವು ಅದರಲ್ಲಿ ಅನೇಕ ವಸ್ತುಗಳನ್ನು ಮಿಶ್ರಣ ಮಾಡುತ್ತೇವೆ.
  • ಅವುಗಳಲ್ಲಿ ಒಂದು ತುಳಸಿ ಎಲೆ.
Milk Benefits: ಅಸ್ತಮಾ, ಮೈಗ್ರೇನ್, ಕಿಡ್ನಿ ಸ್ಟೋನ್, ಡಿಪ್ರೆಶನ್ನಿಂದ ಮುಕ್ತಿ ಪಡೆಯಲು ಹಾಲಿನೊಂದಿಗೆ ಈ ಎಲೆ ಬೆರೆಸಿ ಕುಡಿದರೆ ಸಾಕು! title=
Tulsi Milk Benefits

ತುಳಸಿ ಹಾಲಿನ ಪ್ರಯೋಜನಗಳು:  ಹಾಲನ್ನು ಸಂಪೂರ್ಣ ಆಹಾರ, ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಹಾಲಿನಿಂದ ಸಿಗುವ ಪ್ರಯೋಜನಗಳ ಬಗ್ಗೆ ನಮಗೆ ತಿಳಿದೇ ಇದೆ. ಆದರೆ, ಹಾಲಿನೊಂದಿಗೆ ಕೆಲವು ನೈಸರ್ಗಿಕವಾಗಿ ಸಿಗುವ ಪದಾರ್ಥಗಳನ್ನು ಬೆರೆಸಿ ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ ಶೀತ, ಜ್ವರ ಎಂದಾರೆ ನೀವು ಅರಿಶಿನದ ಹಾಲನ್ನು ಸೇವಿಸಿರಬಹುದು. ಆದರೆ, ತುಳಸೆ ಮಿಶ್ರಿತ ಹಾಲನ್ನು ಎಂದಾದರೂ ಸೇವಿಸಿದ್ದೀರಾ? ಆಯುರ್ವೇದದ ಪ್ರಕಾರ, ತುಳಸಿ ಎಲೆಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿದರೆ ಅದರಿಂದ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ

ಹಾಲಿನೊಂದಿಗೆ ತುಳಸಿ ಎಲೆಗಳನ್ನು ಬೆರೆಸಿ ಕುಡಿಯುವುದರಿಂದ ಈ ಸಮಸ್ಯೆಗಳಿಂದ ಸಿಗಲಿದೆ ಪರಿಹಾರ:
* ಅಸ್ತಮಾ: 

ನಿಮ್ಮ ಮನೆಯಲ್ಲಿ ಯಾರಿಗಾದರೂ ಅಸ್ತಮಾ ಸಮಸ್ಯೆ ಅಥವಾ ಉಸಿರಾಟದ ತೊಂದರೆ ಇದ್ದರೆ ಅಂತಹವರಿಗೆ ತುಳಸಿ ಮಿಶ್ರಿತ ಹಾಲು ರಾಮಬಾಣವಿದ್ದಂತೆ. ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ಅಸ್ತಮಾ ರೋಗಿಗಳಿಗೆ ಪರಿಹಾರ ಸಿಗಲಿದೆ ಎನ್ನಲಾಗುವುದು.

ಇದನ್ನೂ ಓದಿ- ತೂಕ ಕಳೆದುಕೊಳ್ಳುವಾಗ ಬೆಳಗಿನ ಉಪಹಾರದಲ್ಲಿ ಇವುಗಳನ್ನು ಸೇವಿಸುವ ತಪ್ಪನ್ನು ಎಂದಿಗೂ ಮಾಡಬೇಡಿ

* ಮೈಗ್ರೇನ್:
ಪ್ರಸ್ತುತ ಬದಲಾದ ಜೀವನಶೈಲಿಯಲ್ಲಿ ಬಹಳಷ್ಟು ಜನರನ್ನು ಕಾಡುವ ಸಮಸ್ಯೆ ಮೈಗ್ರೇನ್. ಇದರಿಂದಾಗಿ ಜನರು ಆಗಾಗ್ಗೆ ತಲೆನೋವಿನಿಂದ ತೊಂದರೆಗೊಳಗಾಗುತ್ತಾರೆ. ತುಳಸಿ ಮತ್ತು ಹಾಲನ್ನು ನಿಯಮಿತವಾಗಿ ಸೇವಿಸಿದರೆ, ಈ ಸಮಸ್ಯೆಯನ್ನು ಮೂಲದಿಂದ ನಿರ್ಮೂಲನೆ ಮಾಡಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

* ಖಿನ್ನತೆ:
ಬಿಡುವಿಲ್ಲದ ಜೀವನಶೈಲಿ, ಕಚೇರಿ ಕೆಲಸದ ಹೊರೆ, ಕೌಟುಂಬಿಕ ಸಮಸ್ಯೆಗಳು ಹೀಗೆ ಹಲವು ಕಾರಣಗಳಿಂದಾಗಿ ಖಿನ್ನತೆಗೆ ಒಳಗಾಗುವುದು ಸಹಜ. ಇಂತಹ ಪರಿಸ್ಥಿತಿಯಲ್ಲಿ ತುಳಸಿ ಹಾಲನ್ನು ಸೇವಿಸುವುದರಿಂದ ಎಲ್ಲಾ ರೀತಿಯ ಚಿಂತೆಗಳು ದೂರವಾಗಿ ಉದ್ವೇಗವೂ ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- ಕೊಲೆಸ್ಟ್ರಾಲ್ ಹೆಚ್ಚಾಗಿದ್ದರೆ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ

* ಕಿಡ್ನಿ ಸ್ಟೋನ್:
ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ತುಂಬಾ ಹೆಚ್ಚಾಗಿದೆ. ನಿಮ್ಮಲ್ಲೂ ಯಾರಾದರೂ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ಶೀಘ್ರದಲ್ಲೇ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News