Best time to do meditation: ಧ್ಯಾನದಿಂದ ಅನೇಕ ಪ್ರಯೋಜನಗಳಿವೆ. ಇದು ನಿಮ್ಮ ಮನಸ್ಸನ್ನು ಶಾಂತವಾಗಿಸುತ್ತದೆ, ಇದು ಆಲೋಚನೆಗಳ ವೇಗವನ್ನು ಸುಧಾರಿಸುತ್ತದೆ. ಇದರೊಂದಿಗೆ ನಿಮ್ಮ ಮಾನಸಿಕ ಸ್ಥಿತಿಯೂ ಸುಧಾರಿಸುತ್ತದೆ, ನಿಮ್ಮ ಆಲೋಚನೆಗಳನ್ನು ನೀವು ನಿಯಂತ್ರಿಸಲು ಸಾಧ್ಯವಾಗುತ್ತದೆ ಮತ್ತು ಇದು ನಿದ್ರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಧ್ಯಾನಕ್ಕೂ ತನ್ನದೇ ಆದ ಹಾದಿ ಮತ್ತು ಸಮಯವಿದೆ. ವಾಸ್ತವವಾಗಿ ನೀವು ನಿಯಮಗಳನ್ನು ಅನುಸರಿಸದೆ ಧ್ಯಾನ ಮಾಡಿದ್ರೆ ಅದರ ಪ್ರಯೋಜನ ಪಡೆಯುವುದಿಲ್ಲ. ಹಾಗಾದರೆ ಧ್ಯಾನವನ್ನು ಯಾವ ಸಮಯದಲ್ಲಿ ಮಾಡಬೇಕು ಮತ್ತು ಅದನ್ನು ಮಾಡುವ ಸರಿಯಾದ ಮಾರ್ಗ ಯಾವುದು ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ಯಾವ ಸಮಯದಲ್ಲಿ ಧ್ಯಾನ ಮಾಡಬೇಕು?


ನೀವು ಯಾವುದೇ ಸಮಯದಲ್ಲಿ ಧ್ಯಾನ ಮಾಡಬಹುದು, ಆದರೆ ನೀವು ಅದನ್ನು ಬೆಳಗ್ಗೆ ಮಾಡುವುದು ಸೂಕ್ತ. ಮೊದಲನೆಯದಾಗಿ ನೀವು ಬೆಳಗ್ಗೆ ತಾಜಾವಾಗಿದ್ದಾಗ, ನಿಮ್ಮ ಸುತ್ತಲಿನ ವಾತಾವರಣವು ತಾಜಾವಾಗಿರುತ್ತದೆ ಮತ್ತು ಕಡಿಮೆ ಶಬ್ದ ಇರುತ್ತದೆ. ಇದಲ್ಲದೆ ಈ ಸಮಯದಲ್ಲಿ ನಿಮಗೆ ಕಡಿಮೆ ಕೆಲಸವಿರುತ್ತದೆ. ಇದು ನಿಮ್ಮ ಮನಸ್ಸಿನ ಗೊಂದಲವನ್ನು ಕಡಿಮೆ ಮಾಡುತ್ತದೆ ಮತ್ತು ನೀವು ಶಾಂತಿಯುತವಾಗಿ ಧ್ಯಾನ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ ಈ ಸಮಯದಲ್ಲಿ ಅದರ ಪರಿಣಾಮವು ನಿಮ್ಮ ದೇಹದ ಮೇಲೆ ಹೆಚ್ಚು.


ಇದನ್ನೂ ಓದಿ: ಹರಳುಗಟ್ಟಿರುವ ಯೂರಿಕ್ ಆಸಿಡ್‌ನ್ನು ನಿಮಿಷದಲ್ಲಿ ಕರಗಿಸುತ್ತೆ ಈ ಹಣ್ಣು: ಒಂದು ತುಂಡು ತಿಂದರೆ ಸಾಕು ಕಿಡ್ನಿಸ್ಟೋನ್ ಕೂಡಾ ಪುಡಿಯಾಗಿ ಹೊರಬರುತ್ತದೆ!


ಎಷ್ಟು ಹೊತ್ತು ಧ್ಯಾನ ಮಾಡಬೇಕು?


ಪ್ರತಿದಿನ ನೀವು ಸುಮಾರು 20 ರಿಂದ 30 ನಿಮಿಷಗಳ ಕಾಲ ಧ್ಯಾನ ಮಾಡಬೇಕು. ಇದನ್ನು ಮಾಡುವುದರಿಂದ ನಿಮ್ಮ ಏಕಾಗ್ರತೆ ಹೆಚ್ಚುತ್ತದೆ ಮತ್ತು ನೀವು ಶಾಂತವಾಗಲು ಸಹಾಯ ಮಾಡುತ್ತದೆ. ಆದಾಗ್ಯೂ ನೀವು ದಿನಕ್ಕೆ ಮೂರು ಬಾರಿ 10-10 ನಿಮಿಷಗಳ ಪ್ರತ್ಯೇಕ ಅವಧಿಗಳಲ್ಲಿ ಧ್ಯಾನವನ್ನು ಮಾಡಬಹುದು.


ಧ್ಯಾನ ಮಾಡುವಾಗ ಏನು ಹೇಳಬೇಕು?


ಧ್ಯಾನ ಮಾಡುವಾಗ ನೀವು ಒಂದು ರೀತಿಯ ಕಂಪನವನ್ನು ಉಂಟುಮಾಡುವ ಸಣ್ಣ ಪದವನ್ನು ನೀವು ಆರಿಸಬೇಕು. ಉದಾ: ʼಓಂʼ ಮಂತ್ರ... ನೀವು ಧ್ಯಾನ ಮಾಡದಿದ್ದರೆ ಈಗಲೇ ಅದನ್ನು ಪ್ರಾರಂಭಿಸಿರಿ. ಈ ಒತ್ತಡದ ಜೀವನದಲ್ಲಿ ನೀವು ಉತ್ತಮವಾಗುತ್ತೀರಿ.


ಇದನ್ನೂ ಓದಿ: ಈ ಪದಾರ್ಥ ಬೆರೆಸಿದ ನೀರು ಕುಡಿದ್ರೆ ಸಾಕು.. ಹೊಟ್ಟೆ ಫುಲ್ ಕ್ಲೀನ್‌ ಆಗುತ್ತೆ!! ಯಾವ ಸಮಸ್ಯೆನೂ ಬರಲ್ಲ..


(ಈ ಲೇಖನವು ಸಾಮಾನ್ಯ ಮಾಹಿತಿಗಾಗಿ, ದಯವಿಟ್ಟು ಇಲ್ಲಿನ ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.