Side Effects Of Bed Tea - ಬೆಳಗಿನ ಒಂದು ಕಪ್ ಚಹಾ (Bed Tea) ನಿಮ್ಮ ಪಾಲಿಗೂ ಕೂಡ ಒಂದು ಎನರ್ಜಿ ಡ್ರಿಂಕ್ ಆಗಿ ಕಾರ್ಯನಿರ್ವಹಿಸುತ್ತದೆಯೇ? ಅಥವಾ ನಿಮ್ಮ ದಿನದ ಆರಂಭ ಕೂಡ ಒಂದು ಕಪ್ ಚಹಾ ಮೂಲಕವೇ ಆಗುತ್ತದೆಯೇ? ಹಾಗಾದರೆ, ಈ ಲೇಖನ ನೀವು ತಪ್ಪದೆ ಓದಲೇಬೇಕು. ಹೌದು, ಬೆಳಗ್ಗೆ ಖಾಲಿ ಹೊಟ್ಟೆ ಬಿಸಿಬಿಸಿಯಾಗಿ ಒಂದು ಕಪ್ ಚಹಾ (Tea) ಸೇವಿಸುವುದು ನಿಮ್ಮ ಆರೋಗ್ಯಕ್ಕೆ (Health Tips) ಹಾನಿಯುಂಟು ಮಾಡಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ


COMMERCIAL BREAK
SCROLL TO CONTINUE READING

ಬೆಳಗ್ಗೆ ಖಾಲಿ ಹೊಟ್ಟೆ ಚಹಾ ಕುಡಿಯುವುದರಿಂದ ಹೊಟ್ಟೆಯಲ್ಲಿ ಆಮ್ಲೀಯ ಮತ್ತು ಕ್ಷಾರೀಯ ಪದಾರ್ಥಗಳ ಅಸಮತೋಲನದಿಂದಾಗಿ ಚಯಾಪಚಯ (Indigestion) ವ್ಯವಸ್ಥೆಗೆ ಅಡ್ಡಿ ಉಂಟಾಗುವ ಸಾಧ್ಯತೆ ಇರುತ್ತದೆ. ಇದು ದೇಹದ ಸಾಮಾನ್ಯ ಚಯಾಪಚಯ ಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ವ್ಯಕ್ತಿಯನ್ನು ದಿನವಿಡೀ ಸತಾಯಿಸಬಹುದು.


ಟೀ ರಿಸರ್ಚ್ ಅಸೋಸಿಯೇಷನ್ ​​ಆಫ್ ಇಂಡಿಯಾ ನಡೆಸಿರುವ ಒಂದು ಅಧ್ಯಯನದ ಪ್ರಕಾರ, ಹಾಲನ್ನು ಚಹಾದೊಂದಿಗೆ ಬೆರೆಸಿದಾಗ, ಹಾಲಿನಲ್ಲಿ ತೂಕ ನಷ್ಟಕ್ಕೆ ಕಾರಣವಾಗಿರುವ ವಸ್ತುಗಳ ಪ್ರಭಾವ ಕಡಿಮೆಯಾಗುತ್ತವೆ. ಇದಲ್ಲದೇ, ಹಾಲಿನಿಂದ ಮಾಡಿದ ಚಹಾವು ಹೊಟ್ಟೆಯ ಆಮ್ಲವನ್ನು ಹೆಚ್ಚಿಸುವ ಮೂಲಕ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ತೂಕ ಹೆಚ್ಚಳ ಮಾಡುವ ಪ್ರಮುಖ ಕಾರಣಗಳಲ್ಲಿ ಇದೂ ಕೂಡ ಒಂದು.


ಅಲ್ಸರ್ ಸಮಸ್ಯೆ
ಬೆಳಗ್ಗೆ ಎದ್ದಾಕ್ಷಣ ತಮಗೆ ಬಿಸಿ ಬಿಸಿ ಚಹಾ ಬೇಕು ಎಂದು ಹಲವರು ಹೇಳುವುದನ್ನು ನೀವು ಕೇಳಿರಬಹುದು. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ಬಿಸಿ ಚಹಾ ಕುಡಿಯುವುದರಿಂದ ಹೊಟ್ಟೆಯ ಒಳ ಭಾಗಕ್ಕೆ ಹಾನಿಯಾಗಬಹುದು, ಇದು ಹೊಟ್ಟೆಯ ಹುಣ್ಣುಗಳಿಗೆ  ಅಥವಾ ಅಲ್ಸರ್ ಗೆ ಕಾರಣವಾಗಬಹುದು.


ಬೊಜ್ಜು ಸಮಸ್ಯೆ
ಖಾಲಿ ಹೊಟ್ಟೆ ಚಹಾ ಸೇವಿಸುವುದರಿಂದ ಅದರಲ್ಲಿ ಕರಗಿರುವ ಸಕ್ಕರೆ ಕೂಡ ಹೊಟ್ಟೆ ಸೇರುತ್ತದೆ. ಇದರಿಂದ ವ್ಯಕ್ತಿಯ ತೂಕದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತದೆ.


ಮೂಳೆಗಳ ಆರೋಗ್ಯಕ್ಕೆ ಚಹಾ ಒಳ್ಳೆಯದಲ್ಲ 
ಖಾಲಿ ಹೊಟ್ಟೆಯಲ್ಲಿ ದೀರ್ಘಕಾಲದವರೆಗೆ ಪ್ರತಿದಿನ ಹಲವಾರು ಕಪ್ ಚಹಾ ಕುಡಿಯುವುದರಿಂದ ಸ್ಕೆಲೆಟ್ಲ್  ಫ್ಲೋರೋಸಿಸ್ ನಂತಹ ಕಾಯಿಲೆಯು ಉಂಟಾಗಬಹುದು, ಈ ರೋಗವು ಮೂಳೆಗಳನ್ನು ಒಳಭಾಗದಿಂದ ಟೊಳ್ಳು ಮಾಡುತ್ತದೆ. ಈ ಕಾರಣದಿಂದಾಗಿ ಅನೇಕ ಗಂಭೀರ ರೋಗಗಳು ಸಹ ಸಂಭವಿಸಬಹುದು.


ಆಯಾಸ ಮತ್ತು ಕಿರಿಕಿರಿ
ಚಹಾ ಕುಡಿಯುವುದರಿಂದ ತಾಜಾತನ ಬರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಬೆಳಗ್ಗೆ  ಖಾಲಿ ಹೊಟ್ಟೆ ಹಾಲಿನೊಂದಿಗೆ ಚಹಾ ಕುಡಿಯುವುದರಿಂದ ಅದು ಕೆಲಸದಲ್ಲಿ ಆಯಾಸ ಮತ್ತು ಕಿರಿಕಿರಿ ಉಂಟುಮಾಡುತ್ತದೆ.


ಇದನ್ನೂ ಓದಿ-Weight Loss Tips: ಮೊಸರನ್ನು ಈ ರೀತಿ ಬಳಸಿದರೆ ಬೇಗನೆ ತೂಕ ಕಳೆದುಕೊಳ್ಳಬಹುದಂತೆ!


ಪಚನ ಕ್ರಿಯೆಯ ಮೇಲೆ ಕೆಟ್ಟ ಪರಿಣಾಮ
ಬೆಳಗ್ಗೆ ಏಳುತ್ತಲೇ ಹಲವು ಜನರು ಖಾಲಿ ಹೊಟ್ಟೆ ಚಹಾ ಸೇವಿಸಲು ಆರಂಭಿಸುತ್ತಾರೆ. ಇದರಿಂದ ಅವರ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಎದುರಾಗುತ್ತದೆ. ಜೊತೆಗೆ ಇದರಿಂದ ಪಚನ ಕ್ರಿಯೆ ಕೂಡ ಕುಂಠಿತಗೊಳ್ಳುತ್ತದೆ. ಇದು ಪಿತ್ತ ಪ್ರಕ್ರಿಯೆಯಲ್ಲಿ ಅಡಚಣೆ ಉಂಟು ಮಾಡುತ್ತದೆ ಮತ್ತು ಇದರಿಂದ ವಾಂತಿ ಮತ್ತು ಪ್ರಕ್ಷುಬ್ಧತೆಯ ಅನುಭವ ಉಂಟಾಗುತ್ತದೆ.


ಒತ್ತಡ ಹೆಚ್ಚಾಗುತ್ತದೆ
ಬೆಳಗ್ಗೆ ಎದ್ದಕ್ಷಣ ತಾಜಾತನ ಅಥವಾ ಫ್ರೆಶ್ ನೆಸ್ ಅನುಭವ ಪಡೆಯಲು ಹಲವರು ಖಾಲಿ ಹೊಟ್ಟೆ ಚಹಾ ಸೇವಿಸುತ್ತಾರೆ. ಇಂತಹ ವ್ಯಕ್ತಿಗಳ ಶರೀರದಲ್ಲಿ ಕ್ಯಾಫಿನ್ ಪ್ರಮಾಣ ಸಾಕಷ್ಟು ಹೆಚ್ಚಾಗುತ್ತದೆ ಹಾಗೂ ಅವರು ನಿದ್ರಾಹೀನತೆಯ ಜೊತೆಗೆ ಒತ್ತಡ ಹಾಗೂ ಖಿನ್ನತೆಯಂತಹ ಸಮಸ್ಯೆಗೆ ಒಳಗಾಗುತ್ತಾರೆ.


ಇದನ್ನೂ ಓದಿ-ಈ ಐದು ವಸ್ತುಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನಲೇ ಬಾರದು


ಹೃದ್ರೋಗದ ಅಪಾಯ
ಖಾಲಿ ಹೊಟ್ಟೆ ಚಹಾ ಸೇವಿಸುವುದರಿಂದ ಕ್ಯಾಫಿನ್ ದೇಹದಲ್ಲಿ ಬೇಗನೆ ಸೇರಿಕೊಳ್ಳುತ್ತದೆ. ಇದು ವ್ಯಕ್ತಿಗಳ ಬ್ಲಡ್ ಪ್ರೆಶರ್ ಹೆಚ್ಚಿಸುತ್ತದೆ ಮತ್ತು ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.


ಈ ರೀತಿ ಚಹಾ ಸೇವಿಸಿ
ಒಂದು ವೇಳೆ ನೀವೂ ಕೂಡ ಚಹಾ ಪ್ರಿಯರಾಗಿದ್ದಾರೆ. ಅತಿ ಹೆಚ್ಚು ಬಿಸಿಯಾದ ಅಥವಾ ಅತಿಯಾಗಿ ಆರಿದ ಚಹಾ ಸೇವಿಸಬೇಡಿ. ಬೆಳಗ್ಗೆ ಎದ್ದಾಕ್ಷಣ ಚಹಾ ಸೇವಿಸುವ ಅಭ್ಯಾಸವಿದ್ದರೆ, ಅದರೊಂದಿಗೆ ಬಿಸ್ಕಿಟ್ ಅಥವಾ ಸ್ಯಾಕ್ಸ್ ಸೇವಿಸಿ.


ಇದನ್ನೂ ಓದಿ-Skin Care Tips: ಮೊಡವೆಗಳಿಂದ ದೂರವಿರಬೇಕೇ? ಈ 5 ತಪ್ಪುಗಳನ್ನು ಎಂದಿಗೂ ಮಾಡಬೇಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ