Skin Care Tips: ಮೊಡವೆಗಳಿಂದ ದೂರವಿರಬೇಕೇ? ಈ 5 ತಪ್ಪುಗಳನ್ನು ಎಂದಿಗೂ ಮಾಡಬೇಡಿ

Skin Care Tips: ನಿಮ್ಮ ಮುಖದಲ್ಲಿರುವ ಮೊಡವೆಗಳಿಂದ ನೀವು ಕೂಡ ತೊಂದರೆಗೊಳಗಾಗಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಬಹುದು.

Written by - Yashaswini V | Last Updated : Aug 2, 2021, 10:10 AM IST
  • ಮೊಡವೆಗಳನ್ನು ತಪ್ಪಿಸಲು, ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ
  • ಮಾಹಿತಿಯ ಕೊರತೆಯಿಂದಾಗಿ, ಜನರು ಸಾಮಾನ್ಯವಾಗಿ ಇಂತಹ ತಪ್ಪುಗಳನ್ನು ಮಾಡುತ್ತಾರೆ
  • ಇದು ಮುಖದ ಮೇಲೆ ಮೊಡವೆಗಳ ಅಪಾಯವನ್ನು ಹೆಚ್ಚಿಸುತ್ತೆ
Skin Care Tips: ಮೊಡವೆಗಳಿಂದ ದೂರವಿರಬೇಕೇ? ಈ 5 ತಪ್ಪುಗಳನ್ನು ಎಂದಿಗೂ ಮಾಡಬೇಡಿ title=
How To Avoid Pimples

Skin Care Tips:  ಪ್ರತಿ ಋತುವಿನಲ್ಲಿ ಚರ್ಮವು ವಿವಿಧ ಕಾರಣಗಳಿಂದ ಪ್ರಭಾವಿತವಾಗುವುದನ್ನು ನಾವು ನೋಡುತ್ತೇವೆ. ಪ್ರತಿ ಋತುವಿನಲ್ಲೂ ಒಂದಲ್ಲಾ ಒಂದು ಕಾರಣಕ್ಕೆ ಚರ್ಮದ ಸಮಸ್ಯೆಗಳು ಉಂಟಾಗುತ್ತವೆ. ಧೂಳು, ಮಣ್ಣು, ಮಾಲಿನ್ಯ ಮತ್ತು ಕೊಳಕು ಕೂಡ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಚರ್ಮದ ಸಮಸ್ಯೆಗಳಲ್ಲಿ ಬಹುಮುಖ್ಯವಾಗಿ ಕಾಡುವ ಸಮಸ್ಯೆ ಎಂದರೆ ಮುಖದ ಮೇಲೆ ಮೂಡುವ ಮೊಡವೆ ಮತ್ತು ಡೆಡ್ ಸ್ಕಿನ್ ಸಮಸ್ಯೆ.  ನೀವು ಕೂಡ ಈ ರೀತಿಯ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಬಹುದು.

ಮೊಡವೆಗಳನ್ನು ತಪ್ಪಿಸಲು, ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ (Follow these tips to avoid pimples) :
ಮಳೆಗಾಲದಲ್ಲಿ ಮುಖವನ್ನು ಅಂದವಾಗಿ ಕಾಣುವಂತೆ ಮಾಡಲು ನೀವು ಕೆಲವು ವಿಷಯಗಳನ್ನು ನೋಡಿಕೊಳ್ಳಬೇಕು. ಮಾಹಿತಿಯ ಕೊರತೆಯಿಂದಾಗಿ, ಜನರು ಸಾಮಾನ್ಯವಾಗಿ ಇಂತಹ ತಪ್ಪುಗಳನ್ನು ಮಾಡುತ್ತಾರೆ, ಇದು ಮುಖದ ಮೇಲೆ ಮೊಡವೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಮೊಡವೆಗಳಿಂದ ದೂರವಿರಬೇಕಾದರೆ ಎಂದಿಗೂ ಕೂಡ ಈ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೆನಪಿನಲ್ಲಿಡಿ...

ಮೊಡವೆಗಳನ್ನು ತಪ್ಪಿಸಲು ಏನು ಮಾಡಬೇಕು? (what to do to get rid of pimples) :
1. ಸೋಪಿನಿಂದ ಮುಖ ತೊಳೆಯಬೇಡಿ:

ಸೋಪುಗಳು ಕಠಿಣ ರಾಸಾಯನಿಕಗಳನ್ನು ಹೊಂದಿರುತ್ತವೆ, ಆದ್ದರಿಂದ ಅವುಗಳನ್ನು ಮುಖ ತೊಳೆಯಲು ಬಳಸಬಾರದು. ಸಾಮಾನ್ಯ ಸಾಬೂನು 9 ರಿಂದ 11 ರ ನಡುವೆ ಪಿಹೆಚ್ ಮಟ್ಟವನ್ನು ಹೊಂದಿದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು, ಇದು ಚರ್ಮದ (Skin) ಪಿಹೆಚ್ ಮಟ್ಟವನ್ನು 5 ರಿಂದ 7 ರ ವರೆಗೆ ಹೆಚ್ಚಿಸುತ್ತದೆ. ಇದು ಅನೇಕ ಚರ್ಮದ ಸಮಸ್ಯೆಗಳ (Skin Problems) ಅಪಾಯವನ್ನು ಹೆಚ್ಚಿಸುತ್ತದೆ. ಸೋಪ್ ಮತ್ತು ಕ್ಲೆನ್ಸರ್ ಗಳು ಚರ್ಮದ ತುರಿಕೆಗೆ ಕಾರಣವಾಗುವುದರಿಂದ ಅವುಗಳನ್ನು ತಪ್ಪಿಸಬೇಕು ಎಂದು ಚರ್ಮ ತಜ್ಞರು ಸಲಹೆ ನೀಡಲಾಗಿದೆ.

ಇದನ್ನೂ ಓದಿ- Skin Care Tips: ಬೇಸಿಗೆಯಲ್ಲಿ ರವೆಯಿಂದ ಮಾಡಿದ ಈ ಫೇಸ್ ಸ್ಕ್ರಬ್ ಬಳಸಿ, ಉತ್ತಮ ತ್ವಚೆ ನಿಮ್ಮದಾಗಿಸಿ

2. ಒಂದೇ ರೀತಿಯ ಸ್ಕಿನ್ ಕೇರ್ ಉತ್ಪನ್ನವನ್ನು ಬಳಸಬೇಡಿ:
ಅನೇಕ ಬಾರಿ ಮಹಿಳೆಯರು ಮೊಡವೆಗಳ (Pimples) ವಿರುದ್ಧ ಹೋರಾಡಲು ಸಹಾಯಕವಾದ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ವಯಸ್ಸಾದಂತೆ, ಚರ್ಮದ ವಿನ್ಯಾಸವೂ ಬದಲಾಗುತ್ತದೆ, ಆದ್ದರಿಂದ ಚರ್ಮಕ್ಕೆ ಇನ್ನೂ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಅದಕ್ಕಾಗಿಯೇ ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾದ ಉತ್ಪನ್ನಗಳನ್ನು ಬಳಸುವುದು ಮುಖ್ಯವಾಗಿದೆ.

3. ಹೆಚ್ಚು ಹೆಚ್ಚು ನೀರು ಕುಡಿಯಿರಿ:
ಚರ್ಮ ಮತ್ತು ಆರೋಗ್ಯ ತಜ್ಞರ ಪ್ರಕಾರ, ಕಡಿಮೆ ನೀರು ಕುಡಿಯುವ ಜನರು ನಿರ್ಜೀವ ಮತ್ತು ಒಣ ಚರ್ಮದ (Dry Skin) ಸಮಸ್ಯೆಯನ್ನು ಎದುರಿಸಬಹುದು. ಆದ್ದರಿಂದ, ದಿನವಿಡೀ 3 ರಿಂದ 4 ಲೀಟರ್ ನೀರನ್ನು ಕುಡಿಯುವುದು ಒಳ್ಳೆಯದು. ಇದು ಮುಖದ ಬಣ್ಣವನ್ನು ಸುಧಾರಿಸುತ್ತದೆ. ಇದರ ಹೊರತಾಗಿ, ಹಸಿರು ಚಹಾಕ್ಕೆ ಕೆಲವು ಹನಿ ನಿಂಬೆಹಣ್ಣನ್ನು ಸೇರಿಸಿ ಸವಿಯುವುದು ಸಹ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ-  Rice Water And Aloevera: ಅಲೋವೆರಾ, ಅಕ್ಕಿ ನೀರನ್ನು ಈ ರೀತಿ ಬಳಸಿ ಸುಂದರ ತ್ವಚೆ ನಿಮ್ಮದಾಗಿಸಿ

4. ಮತ್ತೆ ಮತ್ತೆ ಮುಖವನ್ನು ಮುಟ್ಟಬಾರದು:
ಅನೇಕ ಜನರು ಮುಖವನ್ನು ಮತ್ತೆ ಮತ್ತೆ ಮುಟ್ಟುವ ಅಭ್ಯಾಸವನ್ನು ಹೊಂದಿರುವುದನ್ನು ನಾವು ನೋಡುತ್ತೇವೆ ಮತ್ತು ತಮಗೇ ಅರಿವಲ್ಲದೆ ಅವರು ತಮ್ಮ ಕೊಳಕು ಕೈಗಳಿಂದ ಮುಖವನ್ನು ಮತ್ತೆ ಮತ್ತೆ ಮುಟ್ಟುತ್ತಾರೆ ಅಥವಾ ಮೊಡವೆಗಳನ್ನು (Pimples) ಚಿವುಟುವುದರಿಂದ  ಪ್ರಯತ್ನಿಸುತ್ತೇವೆ. ಕೈಗಳಿಂದ ಮುಖವನ್ನು ಹೆಚ್ಚು ಸ್ಪರ್ಶಿಸುವುದರಿಂದ ಚರ್ಮದ ಮೇಲೆ ಹೆಚ್ಚು ಎಣ್ಣೆ, ರೋಗಾಣುಗಳು ಮತ್ತು ಕೊಳಕು ಹರಡುತ್ತದೆ. ಹಾಗಾಗಿ ಈ ಬಗ್ಗೆ ಗಮನಹರಿಸುವುದು ಅವಶ್ಯಕವಾಗಿದೆ. 

5. ಸ್ವಚ್ಛಗೊಳಿಸದೆ ಮೊಬೈಲ್ ಅನ್ನು ಎಂದಿಗೂ ಬಳಸಬೇಡಿ:
ನಿಮ್ಮ ಫೋನ್‌ನ ಪರದೆಯು ಬ್ಯಾಕ್ಟೀರಿಯಾದ ನೆಲೆಯಾಗಿದೆ, ಅದರ ನಿರಂತರ ಬಳಕೆಯಿಂದಾಗಿ, ಮುಖದ ಮೇಲೆ ನಸುಕಂದುಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಆರೋಗ್ಯ ತಜ್ಞರ ಪ್ರಕಾರ, ಮೊಬೈಲ್ ಪರದೆಯಲ್ಲಿರುವ ಕೊಳಕು ನಿಮ್ಮ ಚರ್ಮದ ಮೇಲೆ ತಾಕುವುದರಿಂದಲೂ ಮುಖದ ಮೇಲೆ ಪಿಂಪಲ್ಸ್ ಮೂಡಬಹುದು. ಹಾಗಾಗಿ ನಿಮ್ಮ ಮೊಬೈಲ್ ಬಳಸುವ ಮೊದಲು ಅದನ್ನು ಸ್ವಚ್ಛಗೊಳಿಸುವುದು ಉತ್ತಮ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News