ಮೊಳಕೆಯೊಡೆದ ಆಲೂಗಡ್ಡೆಯನ್ನು ನೀವೂ ಬಳಸುತ್ತೀರಾ ? ದೇಹ ರೋಗಗಳ ಗೂಡಾಗಬಹುದು ಎಚ್ಚರ !
Sprouted Potato Side Effects : ಮೊಳಕೆಯೊಡೆದ ಧಾನ್ಯಗಳನ್ನು ತಿಂದರೆ ಹೆಚ್ಚು ಪ್ರಯೋಜನಕಾರಿ.ಆದರೆ, ಮೊಳಕೆಯೊಡೆದ ಆಲೂಗಡ್ಡೆ ಬಲು ಅಪಾಯಕಾರಿ.
Side Effects of Sprouted Potato : ಬೇಸಿಗೆಯ ಆರಂಭದೊಂದಿಗೆ,ಕೆಲವು ಸಮಸ್ಯೆಗಳು ಸಹ ಪ್ರಾರಂಭವಾಗುತ್ತವೆ. ಮನೆಯಲ್ಲಿ ಇಟ್ಟ ಆಲೂಗಡ್ಡೆ ಮೊಳಕೆಯೊಡೆಯಲು ಪ್ರಾರಂಭಿಸುತ್ತದೆ.ಹೆಚ್ಚಿನ ಜನರು ಈ ರೀತಿ ಮೊಳಕೆಯೊಡೆದ ಆಲೂಗಡ್ಡೆಯನ್ನು ಕೂಡಾ ಬಳಸುತ್ತಾರೆ.ಆದರೆ ಇದು ಆರೋಗ್ಯಕ್ಕೆ ಖಂಡಿತವಾಗಿಯೂ ಹಾನಿಯುಂಟು ಮಾಡುತ್ತದೆ. ಮೊಳಕೆಯೊಡೆದ ಧಾನ್ಯಗಳನ್ನು ತಿಂದರೆ ಹೆಚ್ಚು ಪ್ರಯೋಜನಕಾರಿ.ಆದರೆ, ಮೊಳಕೆಯೊಡೆದ ಆಲೂಗಡ್ಡೆ ಬಲು ಅಪಾಯಕಾರಿ.
ಮೊಳಕೆಯೊಡೆದ ಆಲೂಗಡ್ಡೆ ತಿನ್ನುವುದರಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತವೆ.ಇಂಥಹ ಆಲೂಗೆಡ್ಡೆಯಲ್ಲಿ ಹಲವು ರೀತಿಯ ವಿಷಕಾರಿ ಅಂಶಗಳಿರುವುದರಿಂದ ದೇಹಕ್ಕೆ ಸಾಕಷ್ಟು ಹಾನಿಯಾಗುತ್ತದೆ.ಅದರಲ್ಲಿ ಆಸಿಡ್ ಪ್ರಮಾಣವೂ ಹೆಚ್ಚಾಗಿರುತ್ತದೆ.
ಇದನ್ನೂ ಓದಿ : ರಕ್ತನಾಳಗಳಲ್ಲಿ ಜಿಡ್ಡುಗಟ್ಟಿ ಕುಳಿತಿರುವ ಕೊಲೆಸ್ಟ್ರಾಲ್ ಅನ್ನು ಕರಗಿ ನೀರಾಗಿಸುತ್ತದೆ ಈ ಸೊಪ್ಪು! ದಿನಕ್ಕೊಮೆ ಸೇವಿಸಿದರೆ ಸಾಕು
ಮೊಳಕೆಯೊಡೆದ ಆಲೂಗಡ್ಡೆ ತಿನ್ನುವುದರಿಂದ ಉಂಟಾಗುವ ಹಾನಿ :
ಮೊಳಕೆಯೊಡೆದ ಆಲೂಗಡ್ಡೆ ಸೊನಾನಿನ್ ಮತ್ತು ಚಾಕೊನಿನ್ ಎಂಬ ಎರಡು ಅಪಾಯಕಾರಿ ಆಮ್ಲಗಳನ್ನು ಹೊಂದಿರುತ್ತದೆ.ಆಲೂಗಡ್ಡೆ ನೈಸರ್ಗಿಕವಾಗಿ ಈ ಆಮ್ಲವನ್ನು ಹೊಂದಿರುತ್ತದೆ. ಆದರೆ ಆಲೂಗಡ್ಡೆ ಮೊಳಕೆಯೊಡೆಯುತ್ತಿದ್ದಂತೆ ಅದರ ಪ್ರಮಾಣವು ಹೆಚ್ಚಾಗುತ್ತದೆ. ಇದನ್ನು ತಿನ್ನುವುದರಿಂದ ಹೊಟ್ಟೆ ನೋವು, ವಾಂತಿ, ತಲೆನೋವು, ತಲೆತಿರುಗುವಿಕೆ ಮತ್ತು ಜ್ವರದಂತಹ ಸಮಸ್ಯೆಗಳು
ಕಾಣಿಸಿಕೊಳ್ಳಬಹುದು.
ಮೊಳಕೆಯೊಡೆದ ಆಲೂಗಡ್ಡೆ ಪೌಷ್ಟಿಕವಲ್ಲ.ಆಲೂಗಡ್ಡೆ ಬಲಿತಂತೆ ಅದರ ಪೋಷಕಾಂಶಗಳು ಖಾಲಿಯಾಗಲು ಪ್ರಾರಂಭಿಸುತ್ತವೆ.ಆಲೂಗಡ್ಡೆ ಮಾಗಿದಂತೆ ಅದರ ರುಚಿಯೂ ಬದಲಾಗುತ್ತದೆ.
ಮೊಳಕೆಯೊಡೆದ ಆಲೂಗೆಡ್ಡೆಯ ರುಚಿ ಸಾಮಾನ್ಯ ಆಲೂಗಡ್ಡೆಗಿಂತ ಸ್ವಲ್ಪ ಕಹಿಯಾಗುತ್ತದೆ.ಅಂತಹ ಆಲೂಗಡ್ಡೆ ಬೇಗನೆ ಬೇಯುವುದೂ ಇಲ್ಲ. ಈ ಆಲೂಗಡ್ಡೆಯಲ್ಲಿ ಪಿಷ್ಟದ ಪ್ರಮಾಣವೂ ಹೆಚ್ಚಾಗುತ್ತದೆ. ಹಾಗಾಗಿ ಈ ಆಲೂಗೆಡ್ಡೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಬಲ್ಲದು.
ಮೊಳಕೆಯೊಡೆದ ಆಲೂಗೆಡ್ಡೆ ಮಧುಮೇಹ ರೋಗಿಗಳಿಗೆ ಹಾನಿಕಾರಕ.ಇದನ್ನು ಜೀರ್ಣಿಸಿಕೊಳ್ಳುವುದು ಕೂಡಾ ಸಾಧ್ಯವಿಲ್ಲ. ಇದನ್ನು ಆಹಾರದಲ್ಲಿ ಬಳಸಿದರೆ, ಹೊಟ್ಟೆ ಉಬ್ಬುವುದು,ಅಜೀರ್ಣ ಮತ್ತು ಅಸಿಡಿಟಿ ಉಂಟಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.