Green Tea Side Effects: ಗ್ರೀನ್‌ ಟೀ ಆರೋಗ್ಯಕರ ಪಾನೀಯಗಳಲ್ಲಿ ಹೆಚ್ಚಾಗಿ ಸೇರಿಸಲಾಗುತ್ತದೆ. ಏಕೆಂದರೆ ಇದು ನಮ್ಮ ದೇಹಕ್ಕೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ನೀಡುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ಹಾನಿಕಾರಕವಾಗಬಹುದು. ಅತಿಯಾಗಿ ಗ್ರೀನ್ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಕೆಲವು ಸಮಸ್ಯೆಗಳಿರುವವರು ಗ್ರೀನ್‌ ಟೀ ಸೇವಿಸಲೇಬಾರದು. 


COMMERCIAL BREAK
SCROLL TO CONTINUE READING

ಗ್ರೀನ್‌ ಟೀ ಪ್ರಯೋಜನಗಳು 


ಗ್ರೀನ್‌ ಟೀ ತೂಕ ನಷ್ಟಕ್ಕೆ ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ಇದು ಪಾಲಿಫಿನಾಲ್‌ಗಳು, ಕ್ಯಾಟೆಚಿನ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ. ಇದು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಗ್ರೀನ್ ಟೀ ಸೇವನೆಯು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಸುಲಭವಾಗಿ ಕರಗಿಸುತ್ತದೆ.  


ಇದನ್ನೂ ಓದಿ: ಮಧುಮೇಹಿಗಳು ಈ ನೀರನ್ನು ಬೆಳಗೆದ್ದು ಒಮ್ಮೆ ಕುಡಿದರೆ ತಿಂಗಳವರೆಗೆ ನಾರ್ಮಲ್ ಆಗಿರುವುದು ಬ್ಲಡ್ ಶುಗರ್!


ಈ ಕಾಯಿಲೆ ಇರುವವರು ಗ್ರೀನ್ ಟೀ ಕುಡಿಯಬಾರದು


ಗ್ರೀನ್ ಟೀ ಅತಿಯಾಗಿ ಸೇವಿಸಿದರೆ ಕೆಲವರಿಗೆ ಯಕೃತ್ತಿನ ಸಮಸ್ಯೆಗಳು ಕಾಣಬಹುದು. ಗ್ರೀನ್ ಟೀಯಲ್ಲಿರುವ ಕ್ಯಾಟೆಚಿನ್‌ಗಳು, ವಿಶೇಷವಾಗಿ EGCG (ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್) ಯಕೃತ್ತಿನ ಮೇಲೆ ಪರಿಣಾಮ ಬೀರಬಹುದು. ಈಗಾಗಲೇ ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳನ್ನು ಹೊಂದಿರುವ ಜನರಿಗೆ ಇದು ಹಾನಿಕಾರಕವಾಗಿದೆ.


ದಿನಕ್ಕೆ ಎಷ್ಟು ಗ್ರೀನ್ ಟೀ ಕುಡಿಯಬೇಕು?


ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಿಕೊಳ್ಳಲು ಗ್ರೀನ್ ಟೀ ಕುಡಿಯುತ್ತಿದ್ದರೆ ದಿನಕ್ಕೆ 2 ಕಪ್ ಸಾಕು. ಇದಕ್ಕಿಂತ ಹೆಚ್ಚು ಅಗತ್ಯವಿಲ್ಲ. ದೇಹದಲ್ಲಿ ಯಾವುದೇ ಸಮಸ್ಯೆಯಿದ್ದರೂ ವೈದ್ಯರ ಸಲಹೆ ಪಡೆದ ನಂತರವೇ ಗ್ರೀನ್‌ ಟೀ ಕುಡಿಯಿರಿ. ಇಲ್ಲದಿದ್ದರೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸ್ವಲ್ಪ ಎಚ್ಚರಿಕೆ ವಹಿಸಿದರೆ ದೊಡ್ಡ ರೋಗಗಳಿಂದ ಪಾರಾಗಬಹುದು.


ಇದನ್ನೂ ಓದಿ: ಈ ಎಲೆ ತಿಂದರೆ ಸಾಕು ನೋವಿಲ್ಲದೇ ಹೊರ ಹೋಗುತ್ತದೆ ಕಿಡ್ನಿ ಸ್ಟೋನ್ !


ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.