Side Effects Of Pineapple - ಅನಾನಸ್ (Pineapple) ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಕಡಿಮೆ ಕ್ಯಾಲೋರಿ ಹೊಂದಿದ್ದು, ಉತ್ತಮ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳು ಇದರಲ್ಲಿವೆ. ಅನಾನಸ್ ವಿಟಮಿನ್ ಸಿ ಮತ್ತು ಫೈಬರ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಇದು ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಆದರೆ, ಅನಾನಸ್ ತಿನ್ನುವುದರಿಂದಾಗುವ ಪ್ರಯೋಜನಗಳ ಜೊತೆಗೆ, ಇದು ಕೆಲ ಅಡ್ಡಪರಿಣಾಮಗಳನ್ನು ಸಹ ಹೊಂದಿದೆ.

COMMERCIAL BREAK
SCROLL TO CONTINUE READING

ಈ ಕಾಯಿಲೆಗಳು ಇದ್ದರೆ, ಅನಸಸ್ ಸೇವಿಸಬೇಡಿ
1. ಅಲರ್ಜಿ (Allergy)

ಕೆಲವರಿಗೆ ಅನಾನಸ್ ತಿಂದ ನಂತರ ತುರಿಕೆ ಮತ್ತು ಊತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಲ್ಯಾಟೆಕ್ಸ್ ಅಲರ್ಜಿಯಿಂದ ಉಂಟಾಗುತ್ತದೆ. ಅನಾನಸ್ ನೈಸರ್ಗಿಕ ರಬ್ಬರ್ ಆಗಿರುವ ಲ್ಯಾಟೆಕ್ಸ್‌ನ ಅತ್ಯುತ್ತಮ ಮೂಲವಾಗಿದೆ. ನಿಮಗೆ ಲ್ಯಾಟೆಕ್ಸ್ ಅಲರ್ಜಿ ಇದೆ ಎಂದು ನಿಮಗೆ ಈಗಾಗಲೇ ತಿಳಿದಿದ್ದರೆ, ಅನಾನಸ್ ತಿನ್ನಬೇಡಿ.

2. ಡಯೋರಿಯಾ (Diarrhoea) ಅಥವಾ ವಾಂತಿ 
ಅನಾನಸ್ ನಲ್ಲಿರುವ Bromelain  ಡಯೋರಿಯಾ ಹಾಗೂ ವಾಂತಿಗೆ ಕಾರಣವಾಗಬಹುದು. Bromelain ಪ್ರತಿ ಸಂವೇದನೆ ಹೊಂದಿದವರು ಹೆಚ್ಚಿನ ಪ್ರಮಾಣದಲ್ಲಿ ಅನಾನಸ್ ಸೇವಿಸಬಾರದು. ಇಲ್ಲದೆ ಹೋದಲ್ಲೆ ಸಮಸ್ಯೆಗೆ ಕಾರಣವಾಗಬಹುದು.

3. ಬಾಯಿ ಹಾಗೂ ತುಟಿಗಳಲ್ಲಿ ನೋವು (Mouth Acne And Lips Acne)
ಹೆಚ್ಚಿನ ಪ್ರಮಾಣದಲ್ಲಿ ಅನಾನಸ್ ಸೇವಿಸಿದರೆ, ಬಾಯಿ, ನಾಲಗೆ ಹಾಗೂ ತುಟಿಗಳಲ್ಲಿ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬ್ರೋಮೆಲಿನ್ ಅಂತಹ ಗುಣಲಕ್ಷಣಗಳನ್ನು ಹೊಂದಿದೆ, ಅದರಿಂದಾಗಿ ಇದು ಸಂಭವಿಸುತ್ತದೆ. ತಜ್ಞರ ಪ್ರಕಾರ, ನೀವು ಅನಾನಸ್ ಅನ್ನು ಬೇಯಿಸಿ ತಿಂದರೆ, ಈ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅನಾನಸ್‌ನಲ್ಲಿ ಅತ್ಯಧಿಕ ಪ್ರಮಾಣದ ಬ್ರೊಮೆಲಿನ್ ಅಂಶವಿರುವುದರಿಂದ ಕಾಂಡ ಮತ್ತು ಮಧ್ಯಭಾಗದ ಬಳಿ ಇರುವ ಹಸಿ ಅನಾನಸ್ ತಿನ್ನುವುದನ್ನು ತಪ್ಪಿಸಿ.


ಇದನ್ನೂ ಓದಿ-White Hair Problem:ಈ ಎಣ್ಣೆ ಬಳಸಿ ಬಿಳಿ ಕೂದಲನ್ನು ಕಪ್ಪಾಗಿಸಿ

4. ಬ್ಲೀಡಿಂಗ್ (Bleeding)
Bromelain, Anti-coagulant ರೀತಿ ಕಾರ್ಯನಿರ್ವಹಿಸುತ್ತದೆ ಹಾಗೂ ಇದು ರಕ್ತವನ್ನು ತೆಳ್ಳಗಾಗಿಸಿ ಬೇಗನೆ ಹೆಪ್ಪುಗಟ್ಟಲು ಬಿಡುವುದಿಲ್ಲ. ಇದರಿಂದ ಬ್ಲೀಡಿಂಗ್ ಸಮಸ್ಯೆ ಹೆಚ್ಚಾಗಬಹುದು.


ಇದನ್ನೂ ಓದಿ-Water Unknown Facts : ಏಕೆ ಬಾಯಾರಿಕೆಯಾಗುತ್ತೆ? ಬೇಸಿಗೆಯಲ್ಲಿ ಎಷ್ಟು ನೀರು ಕುಡಿಯಬೇಕು?

5. ಡಯಾಬಿಟಿಸ್ (Diabetes)
ಸಕ್ಕರೆ ಕಾಯಿಲೆ ಇರುವವರಿಗೆ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಲಹೆ ನೀಡಲಾಗುತ್ತದೆ. ಹೀಗಿರುವಾಗ ಅವರು ಅನಾನಸ್ ಸೇವಿಸಿದರೆ, ತುಂಬಾ ಸಿಹಿಯಾಗಿರುವ ಹಣ್ಣಾದ ಕಾರಣ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಬಹುದು.


ಇದನ್ನೂ ಓದಿ-ಮಲಗುವ ಮುನ್ನ ಈ ಆಹಾರ ಸೇವಿಸಿದರೆ ಸುಖ ನಿದ್ದೆ ಪ್ರಾಪ್ತಿಯಾಗುತ್ತದೆ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ, ಮನಮದ್ದು ಸಲಹೆ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅನುಸರಿಸುವ ಮುನ್ನ ನುರಿತ ವೈದ್ಯರಿಂದ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.