ಮಲಗುವ ಮುನ್ನ ಈ ಆಹಾರ ಸೇವಿಸಿದರೆ ಸುಖ ನಿದ್ದೆ ಪ್ರಾಪ್ತಿಯಾಗುತ್ತದೆ

ರಾತ್ರಿ ಹೊತ್ತು ನಾವು ಏನೇ ತಿಂದರೂ  ಅದು ನಮ್ಮ ಜೀರ್ಣ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಲಗುವ 2-3 ಗಂಟೆಗಳ ಮೊದಲು ಆಹಾರವನ್ನು ಯಾವಾಗಲೂ ತಿನ್ನಬೇಕು .

Written by - Ranjitha R K | Last Updated : Mar 22, 2022, 03:03 PM IST
  • ಮಲಗುವ ಮುನ್ನ ಈ ಆಹಾರ ಸೇವಿಸಿ
  • ಉತ್ತಮ ನಿದ್ದೆ ಪ್ರಾಪ್ತಿಯಾಗುತ್ತದೆ
  • ಇಂದಿನಿಂದಲೇ ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಿ
ಮಲಗುವ ಮುನ್ನ ಈ ಆಹಾರ ಸೇವಿಸಿದರೆ ಸುಖ ನಿದ್ದೆ ಪ್ರಾಪ್ತಿಯಾಗುತ್ತದೆ  title=
ಮಲಗುವ ಮುನ್ನ ಈ ಆಹಾರ ಸೇವಿಸಿ (file photo)

ಬೆಂಗಳೂರು : ನಿಮ್ಮ ಆಹಾರ ಪದ್ಧತಿ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ.  ಕೆಲವೊಂದು ಆಹಾರವನ್ನು ಸೇವಿಸಿದರೆ ನಿದ್ದೆ ಚೆನ್ನಾಗಿ ಬರುತ್ತದೆ (Food for good sleep). ಉತ್ತಮ ಆಹಾರಕ್ರಮವನ್ನು ಅನುಸರಿಸಿದರೆ, ಉತ್ತಮ ನಿದ್ದೆಯನ್ನು ಪಡೆಯುವುದು ಸಾಧ್ಯವಾಗುತ್ತದೆ.  ನಾವು ಸೇವಿಸುವ ಆಹಾರ ನೇರವಾಗಿ ನಮ್ಮ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿರುತ್ತದೆ. ರಾತ್ರಿ ಹೊತ್ತು ನಾವು ಏನೇ ತಿಂದರೂ  ಅದು ನಮ್ಮ ಜೀರ್ಣ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಲಗುವ 2-3 ಗಂಟೆಗಳ ಮೊದಲು ಆಹಾರವನ್ನು ಯಾವಾಗಲೂ ತಿನ್ನಬೇಕು (what to eat before sleep).

ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಹಾಲನ್ನು ಕುಡಿಯಿರಿ:
ಮಲಗುವ ಮುನ್ನ ಒಂದು ಕಪ್ ಬೆಚ್ಚಗಿನ ಹಾಲನ್ನು (milk) ಕುಡಿಯಬೇಕು.  ಹಾಲಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ವಿಟಮಿನ್-ಡಿ ಮತ್ತು ಮೆಲಟೋನಿನ್ ಇದೆ.  ಇದು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : Diabetes: ಟೈಪ್ 2 ಡಯಾಬಿಟಿಸ್ ರೋಗಿಗಳು ಬ್ಲಡ್ ಶುಗರ್ ನಿಯಂತ್ರಿಸಲು ಈ 4 ಬಗೆಯ ಎಲೆಗಳನ್ನು ತಪ್ಪದೇ ಸೇವಿಸಿ

ಗೋಡಂಬಿ ಕೂಡ ಪ್ರಯೋಜನಕಾರಿ : 
ಇದಲ್ಲದೆ, ಮಲಗುವ ಮೊದಲು ಗೋಡಂಬಿಯನ್ನು (Cashew) ತಿನ್ನಬಹುದು. ಗೋಡಂಬಿ ಸೇವಿಸುವುದರಿಂದ ನರಗಳಿಗೆ ವಿಶ್ರಾಂತಿ ಸಿಗುತ್ತದೆ. ಗೋಡಂಬಿಯಲ್ಲಿ ಕೊಲೆಸ್ಟ್ರಾಲ್ ಹೆಚ್ಚಿಣ ಪ್ರಮಾಣದಲ್ಲಿ ಇರುವುದಿಲ್ಲ. ಆದ್ದರಿಂದ ಮಧುಮೇಹಿಗಳು ಕೂಡಾ ರಾತ್ರಿಯ ಊಟದಲ್ಲಿ ಗೋಡಂಬಿಯನ್ನೂ ಸೇರಿಸಿಕೊಳ್ಳಬಹುದು. 

ಜಾಯಿಕಾಯಿಯಿಂದ ಒಳ್ಳೆಯ ನಿದ್ದೆ ಬರುತ್ತದೆ :
ರಾತ್ರಿ ಊಟಕ್ಕೂ ಮುನ್ನ ಜಾಯಿಕಾಯಿಯನ್ನು ಸೇವಿಸಬಹುದು. ಇದು ನರಗಳನ್ನು ಶಾಂತಗೊಳಿಸಲು ಮತ್ತು ಸಿರೊಟೋನಿನ್ ಅನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ, ಇದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ. 

ರಾತ್ರಿ ಮಲಗುವ ಮುನ್ನ ಚಪಾತಿ ಅನ್ನ ತಿನ್ನಿ :
ರಾತ್ರಿ  ಚಪಾತಿ ಅನ್ನವನ್ನು (Rice) ತಿನ್ನಬಾರದು ಎಂದು ಅನೇಕರು ಹೇಳುತ್ತಾರೆ. ಏಕೆಂದರೆ ರಾತ್ರಿ ಹೊತ್ತು ಅನ್ನ ಚಪಾತಿ ತಿನ್ನುವುದರಿಂದ ತೂಕ ಹೆಚ್ಚಳವಾಗುತ್ತದೆ ಎನ್ನಲಾಗುತ್ತದೆ (weight gain). ಆದರೆ ರಾತ್ರಿ ಚಪಾತಿ ಅನ್ನ ತಿನ್ನುವುದರಿಂದ ದೇಹದಲ್ಲಿ ಟ್ರಿಪ್ಟೊಫಾನ್ ಅನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಉತ್ತಮ ನಿದ್ರೆ ಬರುತ್ತದೆ. 

ಇದನ್ನೂ ಓದಿ : White Hair Problem:ಈ ಎಣ್ಣೆ ಬಳಸಿ ಬಿಳಿ ಕೂದಲನ್ನು ಕಪ್ಪಾಗಿಸಿ

ಸಿಹಿ ಗೆಣಸು ಕೂಡ ಉತ್ತಮ ಆಯ್ಕೆ : 
ಕೊನೆಯ ಮತ್ತು ಐದನೇ ಆಹಾರವೆಂದರೆ ಸಿಹಿ ಗೆಣಸು (Sweet Potato).  ಸಿಹಿ ಗೆಣಸಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿ ಇರುತ್ತದೆ. ಇದು ನರಗಳನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಹೀಗಾದಾಗ ಉತ್ತಮ ನಿದ್ರೆ ಬರುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News