Side Effects of Rusk With Tea : ಚಹಾ, ಕಾಫಿ ಹೀರುವಾಗ ರಸ್ಕ್‌ ತಿನ್ನುವ ಹವ್ಯಾಸ ಅನೇಕರಿಗೆ ಇರುತ್ತದೆ.ಪ್ರತಿದಿನ ಬೆಳಿಗ್ಗೆ ಹೆಚ್ಚಿನವರು ಚಹಾದೊಂದಿಗೆ ರಸ್ಕ್, ಬಿಸ್ಕತ್ತುಗಳನ್ನು ತಿನ್ನಲು ಇಷ್ಟಪಡುತ್ತಾರೆ.ರಸ್ಕ್ ಆರೋಗ್ಯಕರ ತಿಂಡಿ ಎನ್ನುವ ಭಾವನೆಏ ನಮ್ಮಲ್ಲಿ ಅನೇಕರಿಗೆ ಇರುವುದು. ಎಷ್ಟೋ ಮನೆಯಲ್ಲಿ ಪುಟ್ಟ ಮಕ್ಕಳಿಗೂ ಹಾಲಿನಲ್ಲಿ ಅದ್ದಿ ರಸ್ಕ್ ತಿನ್ನಿಸುತ್ತಾರೆ.  


COMMERCIAL BREAK
SCROLL TO CONTINUE READING

ಇದೀಗ ರಸ್ಕ್ ಗೆ ಸಂಬಂಧಿಸಿದ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದೆ. ಅಸಲಿಗೆ ಈ ವಿಡಿಯೋವನ್ನು ಡಯಟಿಷಿಯನ್ ಒಬ್ಬರು ಪೋಸ್ಟ್ ಮಾಡಿದ್ದಾರೆ. ರಸ್ಕ್ ಮೂಲತಃ ಮೈದಾ, ಸಕ್ಕರೆ ಮತ್ತು ಅಗ್ಗದ ಎಣ್ಣೆಗಳ ಮಿಶ್ರಣವಾಗಿದೆ (ತಾಳೆ ಎಣ್ಣೆಯಂತಹವು).ಇದು ಬಹಳಷ್ಟು ಟ್ರಾನ್ಸ್ ಫ್ಯಾಟ್ ಮತ್ತು ಸಕ್ಕರೆಯನ್ನು ಹೊಂದಿರುತ್ತದೆ. ಇದು ಹೃದಯದ ಆರೋಗ್ಯ ಮತ್ತು ತೂಕದ ಮೇಲೆ ಕೆಟ್ಟ ಪರಿನಮಾ ಬೀರುತ್ತದೆ. ಇದಲ್ಲದೆ,ಗ್ಲುಟನ್ ಮತ್ತು ಇನ್ನಿತರ ಪದಾರ್ಥಗಳನ್ನು ಇದಕ್ಕೆ ಸೇರಿಸುವುದರಿಂದ ಇದು ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ.


ಇದನ್ನೂ ಓದಿ : ಮಜ್ಜಿಗೆಯಲ್ಲಿ ಈ ಒಂದು ಪದಾರ್ಥವನ್ನು ಬೆರೆಸಿ ಕುಡಿಯಿರಿ.. ಮಲಬದ್ಧತೆ ಕ್ಷಣಾರ್ಧದಲ್ಲೆ ದೂರವಾಗುತ್ತೆ! ನಿಮ್ಮ ಹೊಟ್ಟೆ ಕ್ಲೀನ್‌ ಆಗುತ್ತದೆ


ರಸ್ಕ್‌ಗಳು ಏಕೆ ಅನಾರೋಗ್ಯಕರ :
ರಸ್ಕ್‌ನಲ್ಲಿರುವ ಟ್ರಾನ್ಸ್ ಫ್ಯಾಟ್ ದೇಹದ ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.ಟ್ರಾನ್ಸ್ ಫ್ಯಾಟ್ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು.ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಮತ್ತು ಮೈದಾ ಸೇವಿಸುವುದರಿಂದ ತೂಕ ಹೆಚ್ಚಳ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟದ ಅಸಮತೋಲನಕ್ಕೆ ಕಾರಣವಾಗಬಹುದು.


ಒಮ್ಮೆ ಬೇಯಿಸಿದ ನಂತರ, ಗರಿಗರಿಯಾಗಿಸುವ ಉದ್ದೇಶದಿಂದ ರಸ್ಕ್‌ ಅನ್ನು ಮತ್ತೆ  ಮತ್ತೆ  ಬೇಯಿಸಲಾಗುತ್ತದೆ.ಇದು ಅವುಗಳ ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಅವುಗಳನ್ನು ಹೆಚ್ಚಿನ ಕ್ಯಾಲೋರಿ ತಿಂಡಿಯನ್ನಾಗಿ ಪರಿವರ್ತಿಸುತ್ತದೆ. 


 



ಇದನ್ನೂ ಓದಿ : ಮನೆಯಂಗಳದಲ್ಲಿ ಅರಳಿ ನಿಂತಿರುವ ಈ ಹೂವನ್ನು ಬಾಯಿಗೆ ಹಾಕಿಕೊಂಡರೆ ನಾರ್ಮಲ್ ಆಗಿ ಬಿಡುವುದು ಬ್ಲಡ್ ಶುಗರ್ !ಒಮ್ಮೆ ಟ್ರೈ ಮಾಡಿ ನೋಡಿ ಸಾಕು !


ಚಹಾದ ಜೊತೆ ಆರೋಗ್ಯಕರ ತಿಂಡಿಯ ಆಯ್ಕೆ : 
ಚಹಾದೊಂದಿಗೆ ರಸ್ಕ್ ಬದಲಿಗೆ, ಆರೋಗ್ಯಕರ ತಿನ್ದಿಗಳನು ಆಯ್ಕೆ ಮಾಡಿಕೊಳ್ಳಬಹುದು. ಹುರಿದ ಮಖಾನಾ, ಹುರಿದ ಕಡಲೆ, ಅಥವಾ ಬೀಜಗಳನ್ನು ಸೇವಿಸಬಹುದು.ಇದು ಪೌಷ್ಟಿಕಾಂಶ ಮಾತ್ರವಲ್ಲದೆ ತೂಕವನ್ನು ನಿಯಂತ್ರಿಸುವಲ್ಲಿಯೂ ಸಹಕಾರಿಯಾಗಿದೆ. ಈ ತಿಂಡಿಗಳು ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಮತ್ತು ಶಕ್ತಿಯನ್ನು ಒದಗಿಸುತ್ತವೆ.


ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.