Symptoms of Protein Deficiency: ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದ ಪ್ರೋಟೀನ್‌ಗಳು ಬೇಕಾಗುತ್ತವೆ. ಕೂದಲಿನ ಆರೋಗ್ಯಕ್ಕೆ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರೋಟೀನ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ಅನಾರೋಗ್ಯಕರ ಆಹಾರ ಸೇವನೆಯಿಂದ ಕೆಲವರಲ್ಲಿ ಪ್ರೊಟೀನ್ ಕೊರತೆ ಉಂಟಾಗುತ್ತದೆ. ಕೆಲವರಿಗೆ ಕೂದಲಿನ ಸಮಸ್ಯೆಯ ಜೊತೆಗೆ ಚರ್ಮದ ಸಮಸ್ಯೆಯೂ ಇರುತ್ತದೆ. 


COMMERCIAL BREAK
SCROLL TO CONTINUE READING

ದೇಹದಲ್ಲಿ ಪ್ರೊಟೀನ್ ಕೊರತೆಯಾದರೆ ಕೆಲವೊಂದು ಸಮಸ್ಯೆಗಳು ಕಾಣುತ್ತವೆ. ಅನೇಕ ಜನರಲ್ಲಿ ಸ್ನಾಯು ದೌರ್ಬಲ್ಯದಂತಹ ಸಮಸ್ಯೆಗಳಿಗೆ ಮುಖ್ಯ ಕಾರಣ ಪ್ರೋಟೀನ್ ಕೊರತೆ. ಪ್ರೋಟೀನ್ ಕೊರತೆಯು ಕೂದಲು ತೆಳುವಾಗಲು ಕಾರಣವಾಗುತ್ತದೆ. ಕೆಲವರಲ್ಲಿ ಕೂದಲು ಕೂಡ ನಿರ್ಜೀವವಾಗುತ್ತದೆ. ಹಾಗಾಗಿ ಇಂತಹ ಸಮಸ್ಯೆ ಇರುವವರು ಪ್ರೊಟೀನ್ ಯುಕ್ತ ಆಹಾರ ಸೇವಿಸಬೇಕು.


ಇದನ್ನೂ ಓದಿ: ಭೋಜನದ ನಂತರ ಈ ಪಾನೀಯ ಕುಡಿದರೆ ಗ್ಯಾಸ್ ಸಮಸ್ಯೆ ಕಾಡುವುದೇ ಇಲ್ಲ !


ಕೆಲವು ಜನರಲ್ಲಿ ಪ್ರೋಟೀನ್ ಕೊರತೆಯು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದ ಆಗಾಗ್ಗೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ಇನ್ನು ಕೆಲವರಲ್ಲಿ ಆಲಸ್ಯ, ಹೊಟ್ಟೆ ಉಬ್ಬರ, ದೇಹದ ಶಕ್ತಿಯ ನಷ್ಟ ಮತ್ತು ಆಗಾಗ್ಗೆ ಸುಸ್ತು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತಹ ರೋಗಲಕ್ಷಣಗಳನ್ನು ಹೊಂದಿರುವ ಜನರು ಪ್ರತಿದಿನ ಆರೋಗ್ಯಕರ ಆಹಾರವನ್ನು ಸೇವಿಸಬೇಕು ಎಂದು ತಜ್ಞರು ಸೂಚಿಸುತ್ತಾರೆ.


ಈ ಕೊರತೆಯಿಂದ ಕೆಲವರು ತೂಕ ಕಳೆದುಕೊಳ್ಳುವ ಸಾಧ್ಯತೆಗಳೂ ಇವೆ. ಆದ್ದರಿಂದ ನೀವು ತೂಕವನ್ನು ಕಳೆದುಕೊಳ್ಳುತ್ತಿದ್ದರೆ ಪ್ರೋಟೀನ್ ಪರೀಕ್ಷೆಗಳನ್ನು ಮಾಡುವುದು ಒಳ್ಳೆಯದು. ಕೆಲವರಲ್ಲಿ ದೇಹದ ಮೇಲೆ ಅಲ್ಲೊಂದು ಇಲ್ಲೊಂದು ಊತವಿರುತ್ತದೆ. ಅಲ್ಲದೆ ಉಗುರುಗಳು ಹೆಚ್ಚಾಗಿ ಒಡೆಯುತ್ತವೆ. ಈ ಸಮಸ್ಯೆ ಕಂಡುಬಂದರೆ ನಿಮಗೆ ಪ್ರೋಟೀನ್ ಕೊರತೆ ಇದೆ ಎಂದು ಯೋಚಿಸಬಹುದು. ಹಾಗಾಗಿ ಇಂತಹ ಸಮಸ್ಯೆ ಇರುವವರು ಖಂಡಿತವಾಗಿ ಪ್ರತಿದಿನ ಆರೋಗ್ಯಕರ ಆಹಾರ ಸೇವಿಸಬೇಕು.


ಇದನ್ನೂ ಓದಿ: ದಿನನಿತ್ಯ ಕಿವಿ ಶುಚಿಗೊಳಿಸುವುದು ಅಗತ್ಯವೇ ? ಈ ಬಗ್ಗೆ ತಜ್ಞರ ಸಲಹೆಯೇನು? 


ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.