ಬೆಂಗಳೂರು : ಚಳಿಗಾಲದಲ್ಲಿ(Winter) ಕಿವಿ ನೋವು  (Ear Pain) ಬರುವುದು ಸಹಜ ಸಂಗತಿ. ಚಳಿಗೆ ಹೊರಗೆ ಹೊರಟಾಗ ಚಳಿಗಾಳಿಯಿಂದಾಗಿ ಕಿವಿಯ ಕುಹರದಲ್ಲಿ ನೋವುಂಟಾಗುತ್ತದೆ. ಇದೊಂದು ಅಸಹನೀಯ ನೋವು. ಶೀತಗಾಳಿ ಕಿವಿಯ ಒಳಗೆ ಹೊಕ್ಕಾಗ ಕಿವಿಯೊಳಗೆ ರಕ್ತ ಸಂಚಾರ (Blood circulation) ಕಡಿಮೆಯಗುತ್ತದೆ. ರಕ್ತ ಸಂಚಾರ ಕಡಿಮೆಯಾಗುತ್ತಿದ್ದಂತೆಯೆ, ಕಿವಿ ನೋವು ಉಂಟಾಗುತ್ತದೆ. ಜೊತೆಗೆ ಶೀತ, ಥಂಡಿ ಕೂಡಾ ಅವರಿಸಿಕೊಳ್ಳುತ್ತದೆ. ಇಷ್ಠೇ ಅಲ್ಲ, ಕಿವಿಯ ಸೋಂಕು ಕೂಡಾ ಆವರಿಸುವ ಸಾಧ್ಯತೆ ಇರುತ್ತದೆ. ಇದು ಸಿಂಪಲ್ ಆರೋಗ್ಯ ಸಮಸ್ಯೆ ಅಲ್ಲ. ಹಾಗೇ ಬಿಟ್ಟರೆ, ಇದು ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇರುತ್ತದೆ. ಆದರೆ, ಹೆದರಬೇಕಾಗಿಲ್ಲ. ಸಿಂಪಲ್ ಮನೆ ಔಷಧಿಯಿಂದ ಇದಕ್ಕೆ ಪರಿಹಾರ ಇದೆ.


COMMERCIAL BREAK
SCROLL TO CONTINUE READING

ಕಿವಿ ನೋವಿಗೆ ಸಿಂಪಲ್ ಮನೆ ಮದ್ದು..!
ಸಾಮಾನ್ಯವಾಗಿ ಕಿವಿ ನೋವು (Ear pain) ಅಂದಾಕ್ಷಣ ಯಾವುದಾದರೂ ಆಂಟಿಬಯೋಟಿಕ್ (Antibiotic) ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ಖಂಡಿತವಾಗಿಯೂ ಅಂಟಿಬಯೋಟಿಕ್ ತಿನ್ನುವ ಅಗತ್ಯವಿಲ್ಲ. ಕಿವಿನೋವಿಗೆ ಪರಿಣಾಮಕಾರಿ ಮನೆಮದ್ದು ಹೇಳುತ್ತೇವೆ. ಇದು ಸಿಂಪಲ್ ಅಷ್ಟೇ ಅಲ್ಲ, ಪವರ್ಫುcಲ್ ಕೂಡಾ..


ಇದನ್ನೂ ಓದಿ : Good News! Hair Fall ಗೆ ಕಾರಣವಾಗುವ ಹಾರ್ಮೋನ್ ತಡೆಯಲು ಬಂತು ಔಷಧಿ


ಆಲಿವ್ ಎಣ್ಣೆ :
ಒಂದು ಅಥವಾ ಎರಡು ಹನಿ ಆಲಿವ್ ಆಯಿಲ್ (olive oil) ಅನ್ನು ಸ್ವಲ್ಪ ಒಂಚೂರು ಬೆಚ್ಚಗೆ ಮಾಡಿ ಕಿವಿಗೆ ಹಾಕಿದರೆ, ಕಿವಿ ನೋವು ಥಟ್ಟನೆ ಮಾಯವಾಗುತ್ತದೆ. ಮೆಡಿಕಲ್ ಪ್ರಾಕ್ಟಿಸ್ನ ಲ್ಲಿ ಇದಕ್ಕೆ ಆಧಾರ ಇಲ್ಲದಿದ್ದರೂ, ಪರಂಪರೆಯಿಂದ ಬಂದಿರುವ ವೈದ್ಯ ವಿಜ್ಞಾನ (Science) ಮಾಹಿತಿ ಇದನ್ನು ಹೇಳುತ್ತದೆ. ಆದರೆ, ಮಕ್ಕಳಿಗೆ ಇದನ್ನು ಪ್ರಯೋಗಿಸುವ ಮೊದಲು ವೈದ್ಯರ ಸಲಹೆ ಕೇಳಿ. 


ಬೆಳ್ಳುಳ್ಳಿ ರಸ :
ಬೆಳ್ಳುಳ್ಳಿಯಲ್ಲಿ (garlic) ಅಂಟಿ ಬಯೋಟಿಕ್ ಅಂಶ ಹೇರಳವಾಗಿರುತ್ತದೆ. ಎರಡು ಪಕಳೆ ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಅದರ ರಸ ತೆಗೆದು ಆಲಿವ್ ಆಯಿಲ್ ನಲ್ಲಿ ಬಿಸಿ ಮಾಡಿ. ತಣ್ಣಾಗಾದ ಮೇಲೆ ಎರಡು ಹನಿಯನ್ನು ಕಿವಿಯೊಳಗೆ  ಹಾಕಿ, ನೋವು ಮಂಗಮಾಯ


ಇದನ್ನೂ ಓದಿ : Water Habits : ನೀರು ಅಮೃತ ಸಮಾನ ನಿಜ, ಹೀಗೆ ಮಾಡಿದರೆ ಅದು ವಿಷವಾಗಬಹುದು..!


ಐಸ್ ಪ್ಯಾಕ್ ಅಥವಾ ಹೀಟಿಂಗ್ ಪ್ಯಾಡ್ :
ಇದೊಂದು ತುಂಬಾ ಜನಪ್ರಿಯ ಮನೆಮದ್ದು. ಐಸ್ ಪ್ಯಾಕ್ (Ice pack) ಅಥವಾ ಹೀಟಿಂಗ್ ಪ್ಯಾಡ್ ಇಟ್ಟರೆ, ಕಿವಿ ನೋವಿನಿಂದ ಶೀಘ್ರದಲ್ಲಿ ಪರಿಹಾರ ಸಿಗುತ್ತದೆ. ಮಕ್ಕಳು, ದೊಡ್ಡವರು ಎಲ್ಲರೂ ಇದನ್ನು ಬಳಸಬಹುದು. ಕಿವಿಯ ಬಳಿ ಐಸ್ ಪ್ಯಾಕ್ ಅಥವಾ ಹೀಟಿಂಗ್ ಪ್ಯಾಡ್ ಇಟ್ಟರೆ, ಕಿವಿ ನೋವು ಬೇಗ ಗುಣವಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.