ನವದೆಹಲಿ: ಒಂದು ವೇಳೆ ನೀವೂ ಕೂಡ ನಿತ್ಯ ಕೂದಲು ಉದುರುವಿಕೆಯ (Hairfall) ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ಅಥವಾ ನಿಮಗೆ ಎಲೋಪೆಸೀಯಾ(Alopecia) ಕಾಯಿಲೆ ಇದ್ದು, ಅದರಿಂದ ನಿಮ್ಮ ಕೂದಲುಗಳು ಉದುರುತ್ತಿದ್ದರೆ, ಈ ಒಳ್ಳೆಯ ಸುದ್ದಿ ನಿಮಗಾಗಿ. ಥೈಲ್ಯಾಂಡ್ (Thailand) ವಿಜ್ಞಾನಿಗಳು ಈ ನಿಟ್ಟಿನಲ್ಲಿ ಹೊಸ ಸಂಶೋಧನೆಯೊಂದನ್ನು ನಡೆಸಿದ್ದು, ಇದಕ್ಕಾಗಿ ಔಷಧಿ ಕಂಡುಹಿಡಿಯುವ ಬೊಕ್ಕ ತಲೆ (Baldness) ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಿದ್ದಾರೆ.
ಕೂದಲುದುರುವಿಕೆಯನ್ನು ತಡೆಯುತ್ತದೆ ಮ್ಯಾನ್ ಗ್ರೋವ್ ಅರ್ಕ
ಥೈಲ್ಯಾಂಡ್ ನಲ್ಲಿರುವ ಚುಲಾಲೊಂಗ್ ಕಾರ್ನ್ (Mangrove University) ವಿವಿ ವಿಜ್ಞಾನಿಗಳು ಮ್ಯಾನಗ್ರೂವ್ (Mangrove) (ವಿಂಡ್ ಶಿಫ್) ಮರದ ಅರ್ಕವನ್ನು (Extract) ಪತ್ತೆಹಚ್ಚಿದ್ದು, ಇದು ಬೊಕ್ಕ ತಲೆಗೆ (Baldness) ಚಿಕಿತ್ಸೆ ಸಾಬೀತಾಗುವ ಸಾಧ್ಯತೆ ಇದೆ. ಆದರೆ, ಈ ಅಧ್ಯಯನದ ಗಾತ್ರ ತುಂಬಾ ಚಿಕ್ಕದಾಗಿತ್ತು. ಏಕೆಂದರೆ ಕೇವಲ 50 ಜನರ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಮಹಿಳೆ ಹಾಗೂ ಪುರಷರಿಬ್ಬರು ಕೂಡ ಶಾಮೀಲಾಗಿದ್ದರು. ಇವರೆಲ್ಲರೂ ಅಂಡ್ರೋಜೆನಿಕ್ ಎಲೋಪೆಸಿಯಾ (Androgenic Alopecia) ಕಾಯಿಲೆಯಿಂದ ಬಳಲುತ್ತಿದ್ದರು. ಇದು ಕೂದಲುದುರುವಿಕೆಯ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಮ್ಯಾನ್ ಗ್ರೂವ್ ಅರ್ಕ ತಲೆ ಕೂದಲುದುರುವಿಕೆ(Hari Fall) ಸಮಸ್ಯೆಯನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ ಎಂಬುದು ಈ ಅಧ್ಯಯನದಿಂದ ತಿಳಿದುಬಂದಿದೆ. ಅಷ್ಟೇ ಅಲ್ಲ ಕೂದಲು ಸೊಂಪಾಗಿ ಬೆಳೆಯಲು (Hair Growth) ಕೂಡ ಇದು ಸಹಕಾರಿ ಎಂದು ಸಾಬೀತಾಗಿದೆ.
ಇದನ್ನು ಓದಿ-Hair Fall : ಕೂದಲುದುರುವ ಸಮಸ್ಯೆಯಿಂದ ಬೇಸತ್ತಿದ್ದರೆ ಇಲ್ಲಿದೆ ಪರಿಹಾರ..
ಹೊಸ ಕೂದಲು ಬೆಳವಣಿಗೆಗೂ ಸಹಕಾರಿ
ಅವೆಸೆನಿಯಾ ಮರಿನ್ (Avecenia Marin) ಎಂಬ ಈ ವಸ್ತುವು ಅವಿಸೆಕ್ವಿನೋನ್-ಸಿ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ ಮತ್ತು ಇದು ಕೂದಲು ಉದುರುವಿಕೆಯ ಸಮಸ್ಯೆಯನ್ನು ತಡೆಯುವುದಲ್ಲದೆ ಮತ್ತೆ ಹೊಸ ಬೆಳೆಯಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಈ ರಾಸಾಯನಿಕವು ದೇಹದಲ್ಲಿನ ಬೊಕ್ಕ ತಲೆಗೆ ಕಾರಣವಾಗುವ ಹಾರ್ಮೋನ್ ಮಟ್ಟವನ್ನು (Hormone level) ತಡೆಯುತ್ತದೆ. ಅಧ್ಯಯನದಲ್ಲಿ ಪಾಲ್ಗೊಂಡ ಎಲ್ಲ ಜನರ ಸ್ಕಾಲ್ಪ್ (Scalp) ಈ ವಸ್ತುವನ್ನು ಅನ್ವಯಿಸಲಾಗಿದೆ. ಬಳಿಕ ನಿಯಮಿತವಾಗಿ ಕೂದಲು ಬೆಳವಣಿಗೆಯ ಫೋಟೋ ಸಹ ತೆಗೆದುಕೊಳ್ಳಲಾಗಿದೆ. ಈ ಸಮಯದಲ್ಲಿ, ಕೂದಲಿನ ಬೆಳವಣಿಗೆಯಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ.
ಇದನ್ನು ಓದಿ- ನಿಮ್ಮ ಮನೆಯಲ್ಲಿ ಈ ಒಂದು ಸಸ್ಯಯಿದ್ದರೆ ಸಾಕು ಸಾವಿರ ಸಮಸ್ಯೆಗೆ ಪರಿಹಾರ: ಸೌಂದರ್ಯವರ್ಧಕದ ಅಗತ್ಯವಿಲ್ಲ
ಈ ಔಷಧಿ ಹಲವು ಪ್ರಯೋಜನಗಳನ್ನು ಹೊಂದಿದೆ ಎಂದು ಈ ಅಧ್ಯಯನದಲ್ಲಿ ಪಾಲ್ಗೊಂಡ ಪ್ರಾಧ್ಯಾಪಕರು ಹೇಳಿದ್ದಾರೆ. ಮೊದಲನೆಯದಾಗಿ, ಇದು ಕೂದಲು ಉದುರುವ ಹಾರ್ಮೋನ್ ಉತ್ಪಾದನೆಯನ್ನು ಕ್ಷೀಣಿಸುತ್ತದೆ ಅಥವಾ ಪ್ರತಿಬಂಧಿಸುತ್ತದೆ ಮತ್ತು ಎರಡನೆಯದಾಗಿ ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಪ್ರೋಟೀನ್‌ಗಳನ್ನು ಸಹ ಉತ್ಪಾದಿಸುತ್ತದೆ. ಆದರೆ, ಥೈಲ್ಯಾಂಡ್‌ನ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಮ್ಯಾಂಗ್ರೋವ್ ಸಾರವನ್ನು ಬೋಳು ಚಿಕಿತ್ಸೆಯಾಗಿ ಅಧಿಕೃತವಾಗಿ ಅನುಮೋದಿಸುವ ಮೊದಲು, ಇದನ್ನು ಇನ್ನೂ ಅನೇಕ ಜನರ ಮೇಲೆ ಪರೀಕ್ಷಿಸಲಾಗುವುದು ಎಂದು ಹೇಳಿದೆ.
ಇದನ್ನು ಓದಿ-ಚಳಿಗಾಲದಲ್ಲಿ ಕೂದಲುದುರುವ ಸಮಸ್ಯೆಗೆ ಇಲ್ಲಿದೆ ಪರಿಹಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.