ಬೆಂಗಳೂರು : ಪ್ರತಿನಿತ್ಯ ಹಲ್ಲುಜ್ಜಿದರೂ ಹಳದಿ ಹಲ್ಲುಗಳ ಸಮಸ್ಯೆಯಿಂದ ಬಳಲುತ್ತಿರುವವರು ನಮ್ಮ ನಡುವೆ ಅನೇಕರಿದ್ದಾರೆ. ಹಳದಿ ಹಲ್ಲುಗಳು ನಮ್ಮ  ಸೌಂದರ್ಯವನ್ನು ಹಾಳುಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದರ ಜೊತೆಗೆ ಹಳದಿ ಹಲ್ಲು ರೋಗಗಳ ಸಂಕೇತವೂ ಆಗಿರುತ್ತದೆ.ಆದರೆ,ಹಳದಿ ಹಲ್ಲುಗಳ ಸಮಸ್ಯೆಯನ್ನು ಬಗೆಹರಿಸಲು ಹಲವು ಮಾರ್ಗಗಳಿವೆ. 


COMMERCIAL BREAK
SCROLL TO CONTINUE READING

ಹಳದಿ ಹಲ್ಲುಗಳ ಬಿಳುಪನ್ನು ಮತ್ತೆ ಮರಳಿ ಪಡೆಯುವುದು ಹೇಗೆ ಎನ್ನುವ ಪ್ರಶ್ನೆ ಅನೇಕರ ಮನದಲ್ಲಿ ಮೂಡಿರುತ್ತದೆ. ಆದರೆ ಹಲ್ಲುಗಳನ್ನು ಬೆಳ್ಳಗಾಗಿಸುವ ಮನೆಮದ್ದುಗಳು ತುಂಬಾ ಪರಿಣಾಮಕಾರಿಯಾಗಿರುತ್ತದೆ. ಇದನ್ನು ಕೆಲವು ದಿನಗಳವರೆಗೆ ಪ್ರಯತ್ನಿಸಿದರೆ ಹಲ್ಲಿನ ಮೇಲಿರುವ ಹಳದಿ ಕಲೆಗಳು ಮರೆಯಾಗಿ ಹಲ್ಲುಗಳು ಮತ್ತೆ ಮುತ್ತಿನಂತೆ ಹೊಳೆಯಲು ಆರಂಭಿಸುತ್ತದೆ. ಅರಿಶಿನದೊಂದಿಗೆ ಕೆಲವು ಪದಾರ್ಥಗಳನ್ನು ಬೆರೆಸಿ ಹಲ್ಲುಗಳಿಗೆ ಹಚ್ಚಿದರೆ ಕೆಲವೇ ದಿನಗಳಲ್ಲಿ ಹಲ್ಲು ಫಳ ಫಳನೇ ಹೊಳೆಯುತ್ತದೆ. 


ಇದನ್ನೂ ಓದಿ : ಶೀತ, ಗಂಟಲು ನೋವಿನಿಂದ ತಕ್ಷಣ ಪರಿಹಾರ ನೀಡುತ್ತದೆ ಈ ಮನೆ ಮದ್ದುಗಳು !


ಹಳದಿ ಹಲ್ಲುಗಳನ್ನು ಬಿಳುಪುಗೊಳಿಸಲು ಅರಿಶಿನವನ್ನು ಬಳಸುವುದು ಹೇಗೆ ? :
ತೆಂಗಿನ ಎಣ್ಣೆಯೊಂದಿಗೆ ಅರಿಶಿನವನ್ನು ಮಿಶ್ರಣ ಮಾಡಿ  ಅದನ್ನು ನಿಮ್ಮ ಹಲ್ಲುಗಳ ಮೇಲೆ ಸ್ವಲ್ಪ ಸಮಯದವರೆಗೆ ಹಚ್ಚಿ. ಇದು ಹಲ್ಲುಗಳ ಮೇಲಿನ ಹಳದಿ ಬಣ್ಣವನ್ನು   ಹೋಗಲಾಡಿಸುವುದು ಮಾತ್ರವಲ್ಲ ಬಾಯಿಯ ದುರ್ವಾಸನೆಯನ್ನು ಕೂಡಾ ನಿರ್ಮೂಲನೆ ಮಾಡುತ್ತದೆ. ಈ ಮಿಶ್ರಣವನ್ನು ನಿಮ್ಮ ಹಲ್ಲುಗಳ ಮೇಲೆ ಹಚ್ಚಿ ವಲ್ಪ ಸಮಯದವರೆಗೆ ಹಾಗೆಯೇ ಬಿಡಿ . ನಂತರ ಹಲ್ಲನ್ನು ಚೆನ್ನಾಗಿ ಉಜ್ಜಿ. ಈ ಪ್ರಕ್ರಿಯೆಯನ್ನು  ಕೆಲವು ದಿನಗಳವರೆಗೆ ಪುನರಾವರ್ತಿಸಿದರೆ ಹಳದಿ ಹಲ್ಲಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯುವುದು. 


ಅರಿಶಿನ ಪುಡಿ, ಅಡಿಗೆ ಸೋಡಾ ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ ಅದನ್ನು ನಿಮ್ಮ ಹಲ್ಲುಗಳ ಮೇಲೆ ಹಚ್ಚಿ. ಅನೇಕರಿಗೆ ಇದರ ರುಚಿ  ಇಷ್ಟವಾಗದೇ ಇರಬಹುದು. ಆದರೆ ಇದರ ನಿಯಮಿತ ಬಳಕೆಯಿಂದಾಗಿ ಹಲ್ಲುಗಳ ಮೇಲಿನ ಹಳದಿ ಹಲ್ಲುಗಳ ಸಮಸ್ಯೆ ದೂರವಾಗುವುದು. ಈ ದ್ರಾವಣವನ್ನು ಹಲ್ಲುಗಳ ಮೇಲೆ ಕೆಲವು ನಿಮಿಷಗಳ ಕಾಲ ಹಚ್ಚಿ ಬ್ರಶ್ ಮಾಡಬೇಕು. 


ಇದನ್ನೂ ಓದಿ : ಸೀತಾಫಲ ಹಣ್ಣು ಚಳಿಗಾಲದಲ್ಲಿ ಕಾಡುವ ಈ ಸಮಸ್ಯೆಗೆ ರಾಮಬಾಣ!


ಹಲ್ಲುಗಳನ್ನು ಸ್ವಚ್ಛಗೊಳಿಸಲು ಮನೆಮದ್ದುಗಳು :
1- ನಿಮ್ಮ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ, ಅವುಗಳ ಮೇಲೆ ನಿಂಬೆ ಹಚ್ಚಿ. ಇದರೊಂದಿಗೆ ನೀವು ನಿಮ್ಮ ಹಲ್ಲುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಇದು ಹಲ್ಲುನೋವಿನಿಂದಲೂ ಪರಿಹಾರ ನೀಡುತ್ತದೆ.


2- ಹಲ್ಲುಗಳನ್ನು ಸ್ವಚ್ಛಗೊಳಿಸಲು ಅಡಿಗೆ ಸೋಡಾಡ ಪೇಸ್ಟ್ ಮಾಡಿ ಹಚ್ಚಿದರೂ ಪ್ರಯೋಜನವಾಗುವುದು. ಈ ಪೇಸ್ಟ್ ಮೂಲಕ ವಾರಕ್ಕೊಮ್ಮೆ ಬ್ರಷ್ ಮಾಡಿದರೆ ಹಳದಿ ಹಲ್ಲುಗಳು ಬಿಳಿಯಾಗಲು ಪ್ರಾರಂಭಿಸುತ್ತದೆ.


3- ನಿಮ್ಮ ಹಲ್ಲುಗಳು ಹಳದಿಯಾಗಿದ್ದರೆ, ಸಾಸಿವೆ ಎಣ್ಣೆಯಲ್ಲಿ ಒಂದು ಚಿಟಿಕೆ ಅರಿಶಿನ ಮತ್ತು ಉಪ್ಪನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈಗ ಈ ಪೇಸ್ಟ್ ಸಹಾಯದಿಂದ  ದಿನಕ್ಕೆ ಎರಡು ಬಾರಿ ಬ್ರಷ್ ಮಾಡಿ.ಹೀಗೆ ಮಾಡುವುದರಿಂದ ಹಲ್ಲುಗಳಲ್ಲಿರುವ ಕ್ರಿಮಿಗಳು  ದೂರವಾಗುತ್ತವೆ. ಇದಲ್ಲದೇ ಬಾಯಿಯ ದುರ್ವಾಸನೆಯೂ ದೂರವಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.