ಗರ್ಭಿಣಿಯರ ಆರೋಗ್ಯಕ್ಕೆ ಕಿವಿ ಮಾತು
ಗರ್ಭಿಣಿಯ ಬಯಕೆ ತೀರಿಸುವ ನಿಟ್ಟಿನಲ್ಲಿ ಮಗುವಿನ ಆರೋಗ್ಯವನ್ನು ಕಡೆಗಣಿಸಬೇಡಿ
ಮಹಿಳೆ ಗರ್ಭವತಿಯಾದಳೆಂದರೆ ಎಲ್ಲರಿಗೂ ಎಲ್ಲಿಲ್ಲದ ಸಡಗರ-ಸಂಭ್ರಮ. ಮನೆಯಲ್ಲಿ ಹಬ್ಬದ ವಾತಾವರಣ ಎಲ್ಲರ ಮನದಲ್ಲೂ ಗರ್ಭಿಣಿಯಾದ ಮಹಿಳೆಯ ಬಯಕೆ ತೀರಿಸುವ ಕಾತುರ. ವಿಶೇಷ ಕಾಳಜಿ, ಉಪಚಾರ ಜೊತೆಗೆ ರುಚಿ ರುಚಿಯಾದ ತಿನಿಸುಗಳು ನೀಡುವುದು ಸರ್ವೇಸಾಮಾನ್ಯ.
ಆದರೆ ಬಯಕೆ ತೀರಿಸುವ ನಿಟ್ಟಿನಲ್ಲಿ ಮಗುವಿನ ಆರೋಗ್ಯವನ್ನು ಕಡೆಗಣಿಸಬೇಡಿ. ಏಕೆಂದರೆ ಗರ್ಭವಸ್ತೆಯಲ್ಲಿ ತಾಯಿ ತೆಗೆದುಕೊಳ್ಳುವ ಆಹಾರ ಮಗುವಿನ ಮೇಲೆ ನೇರ ಪರಿಣಾಮ ಉಂಟು ಮಾಡುತ್ತದೆ. ಹಾಗಾಗಿ ಆ ಸಮಯದಲ್ಲಿ ಬಾಯಿ ರುಚಿಗಿಂತ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ. ಈ ಸಮಯದಲ್ಲಿ ತೆಗೆದುಕೊಳ್ಳಬಹುದಾದ ಮತ್ತು ನಿರ್ಲಕ್ಷಿಸಬೇಕಾದ ಆಹಾರ ಪದಾರ್ಥಗಳ ಬಗ್ಗೆ ಗಮನ ಹರಿಸೋಣ...
ಗರ್ಭಾವಸ್ತೆಯಲ್ಲಿ ಸೇವಿಸಬೇಕಾದ ಆಹಾರ ಪದಾರ್ಥಗಳು-
* ವಾಲ್ ನಟ್ - ವಾಲ್ ನಟ್ ನಲ್ಲಿ ಓಮೀಗಾ-3 ಮತ್ತು ಕೊಬ್ಬಿನಂಶವಿದ್ದು ಇದು ಮಗುವಿನ ಮೆದುಳಿನ ಬೆಳವಣಿಗೆಗೆ ಸಹಾಯವಾಗುತ್ತದೆ.
* ಸಿಹಿ ಗೆಣಸು - ಸಿಹಿಗೆಣಸಿನಲ್ಲಿ ಬೀಟಾ-ಕ್ಯರೋಟಿನ್ ಇದ್ದು ಇದನ್ನು ದೇಹ ವಿಟಮಿನ್ ಎ ಆಗಿ ಪರಿವರ್ತಿಸುತ್ತದೆ.
* ಬಾದಾಮಿ - ಬಾದಾಮಿಯಲ್ಲಿ ವಿಟಮಿನ್-ಇ ಹೇರಳವಾಗಿದ್ದು ಮಗುವಿನ ಮೂಳೆಯ ಬೆಳವಣಿಗೆಗೆ ಸಹಾಯವಾಗುತ್ತದೆ.
* ಹಾಲು - ಗರ್ಭವಸ್ತೆಯಲ್ಲಿರುವ ಮಹಿಳೆ ಹಾಲು ಹಾಗೂ ಹಾಲಿನ ಉತ್ಪನ್ನಗಳಾದ ತುಪ್ಪ, ಮೊಸರನ್ನು ಹೇರಳವಾಗಿ ಸೇವಿಸಬೇಕು. ಇದರಿಂದ ದೇಹಕ್ಕೆ ಅಗತ್ಯವಾದ ಪ್ರೋಟೀನ್ ಮತ್ತು ವಿಟಮಿನ್ ದೊರೆಯುತ್ತದೆ.
* ಸೊಪ್ಪು, ತರಕಾರಿ - ಸೊಪ್ಪು ಮತ್ತು ತರಕಾರಿಗಳನ್ನು ಊಟದ ಜೊತೆ ಪಲ್ಯದ ರೂಪದಲ್ಲಿ
ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದನ್ನು ರೂಢಿಸಿಕೊಳ್ಳಿ.
* ಹಣ್ಣು - ಈ ಸಮಯದಲ್ಲಿ ಸೇಬು, ದಾಳಿಂಬೆ, ಸೀಬೆ ಹಣ್ಣು ಹಾಗೂ ಕಿವಿ ಹಣ್ಣುಗಳನ್ನು ಸೇವಿಸಿದರೆ ಒಳ್ಳೆಯದು.
ಇವೆಲ್ಲವುಗಳ ಜೊತೆಗೆ ಮುಖ್ಯವಾದ ಅಂಶವೆಂದರೆ ಆಹಾರವನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದು. ತರಕಾರಿ ಮತ್ತು ಹಣ್ಣುಗಳನ್ನು ಬಳಸುವ ಮುನ್ನ ಬಿಸಿ ನೀರಿನಿಂದ ತೊಳೆದು ಬಳಸುವುದು ಉತ್ತಮ.
ಗರ್ಭಾವಸ್ತೆಯಲ್ಲಿ ತ್ಯಜಿಸಬೇಕಾದ ಆಹಾರ ಪದಾರ್ಥಗಳು-
* ಗರ್ಭಾವಸ್ತೆಯ ಸಮಯದಲ್ಲಿ ಹಸಿ ಮಾಂಸ ಹಾಗೂ ಸೀ-ಫಿಶ್ ಸೇವನೆಯಿಂದ ದೂರ ಇರುವುದು ಒಳ್ಳೆಯದು.
* ಪರಂಗಿ ಹಣ್ಣು, ಬಾಳೆ ಹಣ್ಣು ಮತ್ತಿತರ ಹಣ್ಣುಗಳ ಸೇವನೆ ಒಳ್ಳೆಯದಲ್ಲ.
* ಜಂಗ್ ಫುಡ್ ಗಳ ಸೇವನೆ ಒಳ್ಳೆಯದಲ್ಲ.