Diabetes Control In Summer: ಬೇಸಿಗೆ ಕಾಲದಲ್ಲಿ ಅಧಿಕ ಉಷ್ಣತೆಯು ಡಯಾಬಿಟಿಸ್ ರೋಗಿಗಗಳಿಗೆ ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ಡಬಹುದು. ಅದು, ಬೇಗೆ ಆಯಾಸಗೊಳ್ಳುವುದು, ತುಂಬಾ ಬೆವರುವುದು ಇತ್ಯಾದಿ ರೀತಿಯದ್ದಾಗಿರಬಹುದು. ಇದರಿಂದಾಗಿ, ಮಧುಮೇಹಿಗಳು ಸಾಮಾನ್ಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಕಠಿಣವಾಗುತ್ತದೆ. 


COMMERCIAL BREAK
SCROLL TO CONTINUE READING

ಬೇರೆ ಋತುಗಳಿಗಿಂತ ದೇಹವು ಬೇಸಿಗೆಯಲ್ಲಿ ಇನ್ಸುಲಿನ್ ಅನ್ನು ವಿಭಿನ್ನವಾಗಿ ಬಳಸುತ್ತದೆ ಮತ್ತು ಟೈಪ್ 1 ಡಯಾಬಿಟಿಸ್ ರೋಗಿಗಳು ಸರಿಯಾದ ಇನ್ಸುಲಿನ್ ಪ್ರಮಾಣವನ್ನು ನಿರ್ಧರಿಸಲು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುವ ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸುವುದು ಅತ್ಯಗತ್ಯವಾಗಿದೆ. ಹಾಗಿದ್ದರೆ, ಬೇಸಿಗೆಯಲ್ಲಿ ಮಧುಮೇಹವನ್ನು ನಿರ್ವಹಿಸಲು ಸಹಾಯಕವಾಗುವ ಅಭ್ಯಾಸಗಳು ಯಾವುವು ಎಂದು ತಿಳಿಯೋಣ... 


ಬೇಸಿಗೆಯಲ್ಲಿ ಮಧುಮೇಹವನ್ನು ನಿರ್ವಹಿಸಲು ಈ ಟಿಪ್ಸ್ ಅನುಸರಿಸಿ: 
* ಸಕ್ರಿಯರಾಗಿರುವುದು: 

ಬೇಸಿಗೆ ಕಾಲದಲ್ಲಿ ಅತಿಯಾದ ಶಾಖ, ಉಷ್ಣತೆಯನ್ನು ತಪ್ಪಿಸಲು ದೈಹಿಕವಾಗಿ ಸಕ್ರಿಯರಾಗಿರುವುದು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಇದಕ್ಕಾಗಿ, ನಿತ್ಯ ಬೆಳಿಗ್ಗೆ ಮತ್ತು ಸಂಜೆ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡುವುದನ್ನು ಪರಿಗಣಿಸಿ. 


ಇದನ್ನೂ ಓದಿ- Weight Loss: 40 ವರ್ಷಗಳ ನಂತರ ತೂಕ ಕಳೆದುಕೊಳ್ಳುವುದು ಕಷ್ಟ ಏಕೆ ಗೊತ್ತೇ ? 


* ಫೈಬರ್-ಭರಿತ ಆಹಾರ: 
ಫೈಬರ್ ಅಧಿಕವಾಗಿರುವ ಆಹಾರಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಲು ಮತ್ತು ರಕ್ತದಲ್ಲಿನ ಸಕ್ಕರೆಯ ಹೆಚ್ಚಳವನ್ನು ತಡೆಯಲು ಸಹಾಯಕವಾಗಿರುವುದರಿಂದ ಬೇಸಿಗೆ ಋತುವಿನಲ್ಲಿ ಹೆಚ್ಚಿನ ಫೈಬರ್ ಭರಿತ ಆಹಾರವು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ ಆಗಿದೆ. 


* ಹೈಡ್ರೇಟ್ ಆಗಿರುವುದು: 
ಬೇಸಿಗೆ ಕಾಲದಲ್ಲಿ ನಿಮಗೆ ಬಾಯಾರಿಕೆ ಆಗದಿದ್ದರೂ ನಿಯಮಿತವಾಗಿ ದ್ರವ ಆಹಾರಗಳನ್ನು ತೆಗೆದುಕೊಳ್ಳುವುದು, ಅದರಲ್ಲೂ ಹೆಚ್ಚಾಗಿ ನೀರು ಕುಡಿಯುವುದು ತುಂಬಾ ಅಗತ್ಯ. ಇದು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಕೂಡ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 


* ಬಿಸಿಲಿಗೆ ಹೂಗುವುದನ್ನು ತಪ್ಪಿಸಿ: 
ಡಯಾಬಿಟಿಸ್ ಸಮಸ್ಯೆ ಇರುವವರು ತುಂಬಾ ಬಿಸಿಲಿರುವ ಸಂದರ್ಭದಲ್ಲಿ ಹೊರಗಡೆ ಹೋಗುವುದನ್ನು ತಪ್ಪಿಸಿ. 


ಇದನ್ನೂ ಓದಿ- HDL Increase Remedies: ಶರೀರದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತವೆ ಈ ನಾಲ್ಕು ಉಪಾಯಗಳು!


* ತಂಪು ಪಾನೀಯ ಬಳಕೆಯನ್ನು ತಪ್ಪಿಸಿ: 
ಬೇಸಿಗೆಯಲ್ಲಿ ತಾಜಾ ಹಣ್ಣುಗಳ ಸೇವನೆ, ತಾಜಾ ಹಣ್ಣುಗಳ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ, ಮಾರುಕಟ್ಟೆಯಲ್ಲಿ ರೆಡಿಮೆಡ್ ಆಗಿ ಸಿಗುವ ತಂಪು ಪಾನೀಯಗಳಲ್ಲಿ ಕೃತಕ ಸಕ್ಕರೆಗಳನ್ನು ಬಳಸುವುದರಿಂದ ಇವುಗಳ ಸೇವನೆಯು ಮಧುಮೇಹಿಗಳಲ್ಲಿ ಗ್ಲೂಕೋಸ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಬಹುದು. ಹಾಗಾಗಿ, ಬೇಸಿಗೆಯಲ್ಲಿ ಮಧುಮೇಹಿಗಳು ತಂಪು ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.