HDL Increase Remedies: ಶರೀರದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತವೆ ಈ ನಾಲ್ಕು ಉಪಾಯಗಳು!

Good Cholesterol Remedies: ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಜೀವಕೋಶಗಳ ಪೊರೆಗಳ ಪ್ರಮುಖ ಭಾಗವಾಗಿದೆ. ಇದು ಜೀವಕೋಶಗಳಿಗೆ ಆಕಾರ ಮತ್ತು ಲೌಚಿಕತೆ ನೀಡುತ್ತದೆ. (Health News In Kananda)  

Written by - Nitin Tabib | Last Updated : Mar 18, 2024, 07:48 PM IST
  • ಕೆಲವು ಆಹಾರಗಳು HDL ಮಟ್ಟವನ್ನು ಹೆಚ್ಚಿಸಿದರೆ, ಕೆಲ ಆಹಾರಗಳು ಉತ್ತಮ ಕೊಲೆಸ್ಟ್ರಾಲ್ ಗೆ ಮಾರಕವಾಗಿವೆ.
  • ಬಿಳಿ ಬ್ರೆಡ್, ಪಾಸ್ತಾ, ನೂಡಲ್ಸ್ ಇತ್ಯಾದಿಗಳು ಹೆಚ್ಚಿನ ಜನರ ಮೊದಲ ಆಯ್ಕೆಯಾಗಿದೆ, ಆದರೆ ಅವುಗಳಲ್ಲಿ ಇರುವ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
  • ಇವು ದೇಹದಲ್ಲಿನ ಎಚ್ ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ.
HDL Increase Remedies: ಶರೀರದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತವೆ ಈ ನಾಲ್ಕು ಉಪಾಯಗಳು! title=

Good Cholesterol Home Remedies: ಸಾಮಾನ್ಯವಾಗಿ ‘ಕೊಲೆಸ್ಟ್ರಾಲ್’ ಹೆಸರು ಕೇಳಿದರೆ ಸಾಕು ಜನ ಬೆಚ್ಚಿಬೀಳುತ್ತಾರೆ. ಆದರೆ ಒಳ್ಳೆಯ ಕೊಲೆಸ್ಟ್ರಾಲ್ ಅಂದರೆ ಎಚ್‌ಡಿಎಲ್ ನಮ್ಮ ದೇಹದಲ್ಲಿರುವುದು ಅತ್ಯಗತ್ಯವಾಗಿದೆ. HDL ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ ಆಗಿದೆ, ಇದು ದೇಹದಲ್ಲಿ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಜೀವಕೋಶಗಳ ಪೊರೆಗಳ ಪ್ರಮುಖ ಭಾಗವಾಗಿದೆ. ಇದು ಜೀವಕೋಶಗಳಿಗೆ ಆಕಾರ ಮತ್ತು ಲೌಚಿಕತೆ ನೀಡುತ್ತದೆ. ಇದು ಜೀವಕೋಶಗಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ತೆಗೆದುಕೊಳ್ಳಲು ಮತ್ತು ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ (How to increase HDL cholesterol with home remedies). ಇದರೊಂದಿಗೆ, ಇದು ಟೆಸ್ಟೋಸ್ಟೆರಾನ್, ಈಸ್ಟ್ರೊಜೆನ್ ಮತ್ತು ಅಡ್ರಿನಾಲಿನ್‌ನಂತಹ ಹಾರ್ಮೋನುಗಳನ್ನು ಉತ್ಪಾದಿಸಲು ಸಹ ದೇಹಕ್ಕೆ ಸಹಾಯ ಮಾಡುತ್ತದೆ. ಇದು ವಿಟಮಿನ್ ಡಿ ಯ ಮೂಲವಾಗಿದೆ, ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಕೃತ್ತಿನ ಆರೋಗ್ಯಕ್ಕೆ HDL ಮುಖ್ಯವಾಗಿದೆ, ಏಕೆಂದರೆ ಇದು ಪಿತ್ತರಸದ ಉತ್ಪಾದನೆಗೆ ಅವಶ್ಯಕವಾಗಿದೆ. ಪಿತ್ತರಸವು ಕೊಬ್ಬನ್ನು ಜೀರ್ಣಿಸಿಕೊಳ್ಳಲು ಮತ್ತು ದೇಹದಿಂದ ತ್ಯಾಜ್ಯ ಪದಾರ್ಥಗಳನ್ನು  ತೆಗೆದುಹಾಕಲು ಸಹಾಯ ಮಾಡುತ್ತದೆ. ಮೆದುಳು ಮತ್ತು ನರಮಂಡಲಕ್ಕೆ HDL ಸಹ ಮುಖ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ದೇಹದಲ್ಲಿ HDL ಮಟ್ಟವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ನಿಮ್ಮ ದೈನಂದಿನ ದಿನಚರಿ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ, ನೀವು ಅದನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು ಮತ್ತು ಆರೋಗ್ಯಕರವಾಗಿರಬಹುದು.(Health News In Kananda)

1. ಯಾವಾಗಲೂ ಕ್ರಿಯಾಶೀಲರಾಗಿರಿ: ನಿಯಮಿತ ವ್ಯಾಯಾಮ ಎಚ್‌ಡಿಎಲ್ ಕೊಲೆಸ್ಟ್ರಾಲ್ ಹೆಚ್ಚಿಸುವ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಏಕೆಂದರೆ ಕೆಟ್ಟ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಮಾರಕವಾಗಿದೆ. ಇದು ಅಪಧಮನಿಗಳ ಗೋಡೆಗಳ ಮೇಲೆ ಸಂಗ್ರಹವಾಗುತ್ತದೆ ಮತ್ತು ಹೃದ್ರೋಗಕ್ಕೆ ಕಾರಣವಾಗುತ್ತದೆ. ಆದ್ದರಿಂದ, ನೀವು ನಿಯಮಿತವಾಗಿ ವಾಕಿಂಗ್, ಸೈಕ್ಲಿಂಗ್, ಈಜು, ಏರೋಬಿಕ್ಸ್ ಇತ್ಯಾದಿಗಳನ್ನು ಮಾಡಬೇಕು (Increase HDL in one month)  

2. ಒಮೆಗಾ-3 ಕೊಬ್ಬಿಗಳು ಆವಶ್ಯಕ : ಒಮೆಗಾ -3 ಕೊಬ್ಬಿನಾಮ್ಲಗಳು ಆರೋಗ್ಯಕ್ಕೆ ಸಾಕಷ್ಟು  ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು HDL ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಅನೇಕ ಹೃದಯ ಸಂಬಂಧಿ ಕಾಯಿಲೆಗಳಿಂದ ನಿಮ್ಮನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಕೊಬ್ಬಿನ ಮೀನು, ಅಗಸೆ ಬೀಜಗಳು, ಚಿಯಾ ಬೀಜಗಳು ಮತ್ತು ವಾಲ್ನಟ್ಗಳು ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಿ.(How to increase HDL cholesterol)

3. ಆಹಾರಕ್ರಮ ಸರಿಯಾಗಿರಲಿ: ನಮ್ಮ ಆಹಾರ ಮತ್ತು ಆಹಾರ ಪದ್ಧತಿಯನ್ನು ಸುಧಾರಿಸುವುದು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ(Good cholesterol foods). ಫೈಬರ್ ಯುಕ್ತ ಹಣ್ಣುಗಳು ಮತ್ತು ತರಕಾರಿಗಳು HDL ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದರೊಂದಿಗೆ, ಬೀಜಗಳು ಮತ್ತು ಡ್ರೈಫ್ರೂಟ್ ಗಳು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲಗಳಾಗಿವೆ. ಆವಕಾಡೊ ಉತ್ತಮ ಕೊಲೆಸ್ಟ್ರಾಲ್‌ಗೆ ಉತ್ತಮ ಡ್ರೈ ಫ್ರೂಟ್ ಗಳಲ್ಲಿ ಒಂದಾಗಿದೆ. ಆವಕಾಡೊ ಮೊನೊಸಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ, ಇದು HDL ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಸೋಯಾ ಉತ್ಪನ್ನಗಳು ಕೂಡ ಆರೋಗ್ಯಕರವಾಗಿವೆ. ಏಕೆಂದರೆ ಇದು ಐಸೊಫ್ಲಾವೊನ್‌ಗಳನ್ನು ಹೊಂದಿರುತ್ತದೆ. (Foods that increase HDL)

ಇದನ್ನೂ ಓದಿ-Holi 2024: ಬಣ್ಣದೋಕುಳಿ ಆಡುವ ಮುನ್ನ ಮುಖಕ್ಕೆ ಈ ಐದು ಸಂಗತಿಗಳನ್ನು ಬಳಸಿ, ತ್ವಚೆ ಹಾಳಾಗುವುದಿಲ್ಲ!

4. ಇವುಗಳಿಂದ ಆದಷ್ಟು ಅಂತರ ಕಾಯ್ಕ್ದಕೊಳ್ಳಿ: ಕೆಲವು ಆಹಾರಗಳು HDL ಮಟ್ಟವನ್ನು ಹೆಚ್ಚಿಸಿದರೆ, ಕೆಲ ಆಹಾರಗಳು ಉತ್ತಮ ಕೊಲೆಸ್ಟ್ರಾಲ್ ಗೆ ಮಾರಕವಾಗಿವೆ. ಬಿಳಿ ಬ್ರೆಡ್, ಪಾಸ್ತಾ, ನೂಡಲ್ಸ್ ಇತ್ಯಾದಿಗಳು ಹೆಚ್ಚಿನ ಜನರ ಮೊದಲ ಆಯ್ಕೆಯಾಗಿದೆ, ಆದರೆ ಅವುಗಳಲ್ಲಿ ಇರುವ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇವು ದೇಹದಲ್ಲಿನ ಎಚ್ ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ. ಇದರೊಂದಿಗೆ ಹೆಚ್ಚು ಸಿಹಿ ತಿನ್ನುವುದು ಅಥವಾ ತಂಪು ಪಾನೀಯಗಳ ಅತಿಯಾದ ಬಳಕೆ ಕೂಡ ಒಳ್ಳೆಯ ಕೊಲೆಸ್ಟ್ರಾಲ್‌ಗೆ ಮಾರಕಗಳಾಗಿವೆ. 

ಇದನ್ನೂ ಓದಿ-Holi 2024: ಬೀಟ್ ರೂಟ್ ಹಾಗೂ ಕಿತ್ತಳೆ ಹಣ್ಣಿನಿಂದ ಮನೆಯಲ್ಲೇ ಈ ರೀತಿ ತಯಾರಿಸಿ ನೈಸರ್ಗಿಕ ಗುಲಾಲ ಬಣ್ಣ!

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 

Trending News