ನವದೆಹಲಿ : ಪ್ರತಿದಿನ 2 ಕೆಂಪು ಟೊಮೇಟೊಗಳನ್ನು ಸೇವಿಸುವುದರಿಂದ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹೌದು ನೀವು ಇದನ್ನ  ನಂಬಲೇಬೇಕು. ನಿಮ್ಮ ದೈನಂದಿನ ಆಹಾರದಲ್ಲಿ ಪ್ರತಿದಿನ 2 ಕೆಂಪು ಟೊಮೇಟೊಗಳನ್ನು ತಿನ್ನುವುದರಿಂದ ನೀವು ಹೊಳೆಯುವ ಮತ್ತು ಮುಖದ ಕಪ್ಪು ಕಲೆಯನ್ನ ತೆಗೆದು ಹಾಕಲು ಸಹಾಯ ಮಾಡುತ್ತದೆ. 


COMMERCIAL BREAK
SCROLL TO CONTINUE READING

ನೀವು ಪ್ರತಿದಿನ 2 ಕೆಂಪು ಟೊಮೇಟೊ(Tomato)ಗಳನ್ನು ಕತ್ತರಿಸಿ ಸಲಾಡ್‌ನಲ್ಲಿ ಸೇವಿಸಬೇಕು. ಟೊಮೇಟೊ ಚರ್ಮಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುತ್ತದೆ. ಇದು ಚರ್ಮವನ್ನು ಹೊರಗಿನಿಂದ ಮತ್ತು ಒಳಗಿನಿಂದ ಆರೋಗ್ಯಕರವಾಗಿಸುತ್ತದೆ ಮತ್ತು ನಿಮ್ಮ ಚರ್ಮದ ಹೊಳಪನ್ನು ನೀವು ಮರಳಿ ಪಡೆಯಬಹುದು.


ಇದನ್ನೂ ಓದಿ : Disadvantages Of Maida: ನೀವು ಬಳಸುವ ಮೈದಾ ಹಿಟ್ಟು ನಿಮ್ಮನ್ನು ಗಂಭೀರ ಕಾಯಿಲೆಗೆ ಗುರಿಯಾಗಿಸಬಹುದು


ಪ್ರತಿದಿನ 2 ಟೊಮೇಟೊ ತಿನ್ನುವುದರಿಂದ ಚರ್ಮದ ಪ್ರಯೋಜನಗಳು :


ಟೊಮೇಟೊ ನಿಮ್ಮ ಚರ್ಮ(Skin)ಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಏಕೆಂದರೆ ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಸಿ, ವಿಟಮಿನ್ ಬಿ ತುಂಬಿದೆ. ಇದು ಚರ್ಮದ ಮೇಲೆ ಹಚ್ಚಿದ ನಂತರವೂ ಚರ್ಮವನ್ನು ಆರೋಗ್ಯಕರವಾಗಿಸುತ್ತದೆ. ಬನ್ನಿ, ಟೊಮೇಟೊ ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.


ಬಿಸಿಲಿನಿಂದ ರಕ್ಷಣೆಗೆ ಟೊಮೇಟೊ :


ಸೂರ್ಯನ ಬೆಳಕಿನಿಂದಾಗಿ ಅನೇಕ ಚರ್ಮದ ತೊಂದರೆಗಳು(Skin Problems) ಉಂಟಾಗಬಹುದು. ಭರದಲ್ಲಿ ತುಂಬಾ  ಬಿಸಿಲು ಇರುವ ಕಾರಣ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುತ್ತೇವೆ. ಟೊಮೇಟೊ ಲೈಕೋಪೀನ್ ಅನ್ನು ಹೊಂದಿರುತ್ತದೆ, ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಅಲ್ಲದೆ ಇದನ್ನ, ಚರ್ಮದ ರಕ್ಷಣೆಗಾಗಿ ನೀವು ಇದನ್ನ ಸನ್‌ಸ್ಕ್ರೀನ್ ಆಗಿ ಬಳಸಬಹುದು.


ಇದನ್ನೂ ಓದಿ : Benefits Of Jeera: ಈ ಕಾರಣಗಳಿಗಾಗಿ ಆಹಾರದಲ್ಲಿ ಸೇವಿಸಲೇ ಬೇಕು ಜೀರಿಗೆ


ಯವ್ವನದ ಚರ್ಮವನ್ನು ಕಾಪಾಡಿಕೊಳ್ಳಲು ಟೊಮೇಟೊ :


ಟೊಮೇಟೊದಲ್ಲಿ ವಿಟಮಿನ್ ಸಿ ನಮ್ಮ ರೋಗ ನಿರೋಧಕ ಶಕ್ತಿ(Immunity Power)ಯನ್ನು ಬಲಪಡಿಸುತ್ತದೆ. ಆದರೆ ಇದು ನಿಮ್ಮ ದೇಹದಲ್ಲಿ ಕಾಲಜನ್ ಪ್ರೋಟೀನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಏಕೆಂದರೆ, ಅದರ ಕೊರತೆಯಿಂದಾಗಿ ಚರ್ಮವು ನಿರ್ಜೀವವಾಗಿ ಕಾಣಲು ಪ್ರಾರಂಭಿಸುತ್ತದೆ. ಆದ್ದರಿಂದ, ನಿಮ್ಮ ಚರ್ಮವನ್ನು ಶಕ್ತಿಯನ್ನ ಕಾಪಾಡಿಕೊಳ್ಳಲು ಪ್ರತಿದಿನ ಕೆಂಪು ಟೊಮೇಟೊ ತಿನ್ನುವುದು ಬಹಳ ಮುಖ್ಯ.


ಚರ್ಮದ ಮತ್ತು ದೇಹದ ಸುಕ್ಕನ್ನು ತಡೆಯಲು :


ನಮ್ಮಗೆ ವಯಸ್ಸಾದಂತೆ ಚರ್ಮ(Skin)ವು ಅದರ ಪೋಷಣೆಯನ್ನು ಕಳೆದುಕೊಳ್ಳುತ್ತಲೇ ಇರುತ್ತದೆ. ಇದರಿಂದ ಚರ್ಮ ಸುಕ್ಕುಗಟ್ಟುವುದು, ಸೂಕ್ಷ್ಮ ರೇಖೆಗಳು ಕಂಡುಬರುತ್ತದೆ, ಚರ್ಮ ಶಕ್ತಿ ಕಳೆದುಕೊಳ್ಳುತ್ತದೆ ಹೀಗೆ ಅನೇಕ ಸಮಸ್ಯೆಗಳು ಕಂಡು ಬರುತ್ತವೆ. ಆದರೆ ಟೊಮೇಟೊದಲ್ಲಿ ವಿಟಮಿನ್ ಬಿ 1, ಬಿ 3, ಬಿ 5, ಬಿ 6, ಬಿ 9 ಇರುತ್ತದೆ. ಇದು ಜೀವಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : ಹಾಲಿಗೆ ಒಂದು ಚಮಚ ತುಪ್ಪ ಸೇರಿಸಿ ನಿತ್ಯ ಕುಡಿಯಿರಿ, ಈ ಸಮಸ್ಯೆಗಳಿಂದ ಸಿಗಲಿದೆ ಮುಕ್ತಿ


ಚರ್ಮಕ್ಕೆ ತೇವಾಂಶ ಒದಗಿಸಲು ಟೊಮೇಟೊ :


ಚರ್ಮದ ನೈಸರ್ಗಿಕ ತೇವಾಂಶದ ಕೊರತೆಯಿಂದ ತುರಿಕೆ, ಚರ್ಮ ಹೊಡೆಯುವುದು ಮತ್ತು ಶುಷ್ಕತೆಗೆ ಕಾರಣವಾಗುತ್ತದೆ. ಆದರೆ ಟೊಮೇಟೊ(Tomato)ದಲ್ಲಿರುವ ಪೊಟ್ಯಾಸಿಯಮ್ ಶುಷ್ಕ ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ. ಪೊಟ್ಯಾಸಿಯಮ್ ಕೊರತೆಯಿಂದಾಗಿ 2012 ರಲ್ಲಿ ಪಬ್ಮೆಡ್ನಲ್ಲಿ ಪ್ರಕಟವಾದ ಜಪಾನಿನ ಸಂಶೋಧನೆಯ ಪ್ರಕಾರ, ಚರ್ಮವು ಒಣಗಲು ಪ್ರಾರಂಭಿಸುತ್ತದೆ. ಆದ್ದರಿಂದ, ಟೊಮೆಟೊ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ