Crime News: ಕೌಟುಂಬಿಕ ಕಲಹ ಹಿನ್ನೆಲೆ ಪತಿ ವಿರುದ್ಧ ಎಸ್ಪಿಗೆ ದೂರು ನೀಡಲು ಬಂದ ಪತ್ನಿಗೆ ಠಾಣೆಯಲ್ಲೇ ಚಾಕು ಇರಿದು ಹತ್ಯೆಗೈದ ಘಟನೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದಿದೆ. ಹಾಸನ ನಗರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ (Police Constable) ಲೋಕನಾಥ್ ಪತ್ನಿಗೆ ಚಾಕುವಿನಿಂದ ಇರಿದ ಆರೋಪಿ ಎಂದು ವರದಿಯಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ (Superintendent of Police) ಕಚೇರಿಯಲ್ಲಿ ಕಾನ್ಸ್ಟೆಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಲೋಕನಾಥ್ ಕೊಲೆ ಮಾಡಿದ ಆರೋಪಿ ಆಗಿದ್ದು, ದೂರು ನೀಡಲು ಬಂದು ಗಂಡನಿಂದ ಹತ್ಯೆಯಾದ ದುರ್ದೈವಿಯನ್ನು ಪಿಸಿ ಲೋಕನಾಥ್ ಪತ್ನಿ ಮಮತಾ ಎಂದು ಹೇಳಲಾಗಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಗಂಡ ಹೆಂಡತಿ (Husband Wife) ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು. ಐದು ದಿನಗಳ ಹಿಂದೆ ಕೂಡ ಲೋಕನಾಥ್ ಹಾಗೂ ಮಮತಾ ಅವರ ನಡುವೆ ದೊಡ್ಡ ಜಗಳವೇ ಆಗಿತ್ತು. ಇದರಿಂದಾಗಿ ಗಂಡ ಹೆಂಡತಿ ಪರಸ್ಪರ ಮುನಿಸಿಕೊಂಡಿದ್ದರು.
ಇದನ್ನೂ ಓದಿ- ಜೈಲಿನಲ್ಲಿ 6 ದಿನ ಕಳೆದ ದರ್ಶನ್ ಅಂಡ್ ಗ್ಯಾಂಗ್..!
ಜಗಳ ತೀವ್ರವಾದಾಗ ಹೆಂಡತಿ (Wife) ಮಮತಾ ಎಸ್ಪಿ ಕಚೇರಿಗೆ ಆಗಮಿಸಿ ದೂರು ನೀಡಲು ಮುಂದಾದಾಗ ಕೋಪಗೊಂಡ ಪತಿ ಲೋಕನಾಥ್ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ. ಚಾಕುವಿನಿಂದ ಇರಿದಿದ್ದನ್ನು ಕಂಡ ಪೊಲೀಸರು ತಕ್ಷಣವೇ ಮಮತಾ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಮತಾ ಮೃತಪಟ್ಟಿದ್ದಾರೆ. ಆರೋಪಿ ಪತಿ ಲೋಕನಾಥ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನಲೆ:
ಹಾಸನ ಹೊರ ವಲಯದ ಚನ್ನಪಟ್ಟಣ ಬಡಾವಣೆಯಲ್ಲಿ ವಾಸವಿದ್ದ ಮಮತ ಹಾಗೂ ಕೆ.ಆರ್ ಪುರಂ ನ ಲೋಕನಾಥ್ 17 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದಾಗಿನಿಂದಲೂ ಲೋಕನಾಥ್ ಆಸ್ತಿ, ಸೈಟ್ ಹಾಗೂ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದ. ಹಲವು ಬಾರಿ ಪತ್ನಿಯ ಮೇಲೆ ದೈಹಿಕವಾಗಿಯೂ ಹಲ್ಲೆ ನಡೆಸುತ್ತಿದ್ದನು ಎಂದು ತಿಳಿದುಬಂದಿದೆ.
ಇದನ್ನೂ ಓದಿ- Chamarajanagar News: ಕಾಲೇಜಿಗೂ ಕಾಲಿಟ್ಟ ಖದೀಮರ ಗ್ಯಾಂಗ್ !
ಮಗಳ ಹತ್ಯೆ ಬಗ್ಗೆ ತಂದೆಯ ಅಳಲು:
ಪತಿಯ ಕಿರುಕುಳದ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿದರೂ ಮರ್ಯಾದೆಗಂಜಿ ನನ್ನ ಮಗಳು ಅವನು ಕೊಡುತ್ತಿದ್ದ ಕಿರುಕುಳವನ್ನೆಲ್ಲಾ ಸಹಿಸಿಕೊಂಡಿದ್ದಳು. ಲೋಕನಾಥ್ ಅವರ ಪೋಷಕರಿಂದಲೂ ಮಗಳಿಗೆ ಕಿರುಕುಳ ಆಗಿದೆ. ಈಗ ಮೂರು ದಿನದ ಹಿಂದೆ ಏನಾಯ್ತು ಗೊತ್ತಿಲ್ಲ. ಇಂದು ನನ್ನ ಮಗಳನ್ನು ಬರ್ಬರವಾಗಿ ಕೊಂಡಿದ್ದಾನೆ. ಅವನಿಗೆ ಕಠಿಣ ಶಿಕ್ಷೆ ಆಗಬೇಕು. ಅವನ ಕುಟುಂಬದವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಮಮತಾ ಅವರ ತಂದೆ ತಂದೆ ಶಾಮಣ್ಣ ಆಗ್ರಹಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.