ನಿಮಗೆ ಮಲಗಿದ್ದಾಗ ಕನವರಿಸುವ ಅಭ್ಯಾಸ ಇದೆಯೇ..! ಇಲ್ಲೊಂದು ಸಮಸ್ಯೆ ಖಂಡಿತ ಇದೆ
Sleep talking causes : ನಮ್ಮಲ್ಲಿ ಅನೇಕರು ನಮಗೆ ಅರಿವಿಲ್ಲದೆ ನಿದ್ರೆಯಲ್ಲಿ ಮಾತನಾಡುತ್ತಾರೆ. ಆದರೆ ನಾವು ಏನು ಮಾತನಾಡಿದ್ದೇವೆ ಅಥವಾ ಏನು ಮಾತನಾಡಿದ್ದೇವೆಯೇ ಎಂಬುದು ನೆನಪಿರಲ್ಲ. ವೈದ್ಯರು ಇದನ್ನು ಸ್ಲೀಪ್ ವಾಕಿಂಗ್ ಎಂದು ಕರೆಯುತ್ತಾರೆ. ಅದೊಂದು ರೀತಿಯ ಕಾಯಿಲೆ.
Sleep Talking : ಯಾರಾದರೂ ಆಳವಾದ ನಿದ್ರೆಯಲ್ಲಿರುವಾಗ ತಮಗೆ ಅರಿವಿಲ್ಲದೆ ಏನನ್ನಾದರೂ ಪಿಸುಗುಟ್ಟಿದರೆ ಇಲ್ಲವೇ ಮಾತನಾಡುವುದನ್ನು ಸ್ಲೀಪ್ ಟಾಕಿಂಗ್ ಎನ್ನುತ್ತಾರೆ. ಇದನ್ನು ಇಂಗ್ಲಿಷ್‌ನಲ್ಲಿ Somniloquy ಎಂದು ಕರೆಯುತ್ತಾರೆ. ಕೆಲವರು ಪ್ರತಿದಿನ ನಿದ್ದೆಯಲ್ಲಿ ಈ ರೀತಿ ಮಾತನಾಡುತ್ತಾರೆ. ಇನ್ನೂ ಕೆಲವರು ಅಗಾಗೆ ಹೀಗೆ ಮಾಡುತ್ತಾರೆ.
ಅಧ್ಯಯನವೊಂದರ ಪ್ರಕಾರ ಜಗತ್ತಿನಲ್ಲಿ ಶೇ.66ರಷ್ಟು ಜನರು ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಅವರಲ್ಲಿ 17% ಜನರು ಕೆಲವೊಮ್ಮೆ ನಿದ್ರೆಯಲ್ಲಿದ್ದಾಗ ಮಾತ್ರ ಮಾತನಾಡುತ್ತಾರೆ. ಇನ್ನು ಕೆಲವರು, ಪ್ರತಿದಿನ ನಿದ್ರೆಯಲ್ಲಿ ಮಾತನಾಡುತ್ತಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಹೊಟ್ಟೆನೋವು ಮತ್ತು ಭೇದಿಯಾಗುತ್ತಿದೆಯೇ? ಇಲ್ಲಿವೆ ಸೂಪರ್ ಮನೆಮದ್ದುಗಳು
ಅನೇಕ ವೈದ್ಯಕೀಯ ವೃತ್ತಿಪರರು ಮತ್ತು ಸಂಶೋಧಕರು ಸ್ಲೀಪ್ ಟಾಕಿಂಗ್ ಹಿಂದೆ ಒಬ್ಬ ವ್ಯಕ್ತಿಯ ಮಾನಸಿಕ ಸಮಸ್ಯೆ ಇರುತ್ತದೆ ಎಂದು ಹೇಳುತ್ತಾರೆ. ದೈಹಿಕ ಸ್ಥಿತಿಯ ಕಾರಣದಿಂದ ಕೆಲವರು ಹೆಚ್ಚು ಅಸ್ವಸ್ಥರಾಗಿರುವಾಗಲೂ ನಿದ್ರೆಯಲ್ಲಿ ಮಾತನಾಡಬಹುದು ಎಂದು ಹೇಳುತ್ತಾರೆ.
ಆದ್ರೆ, ಈ ಸ್ಲೀಪ್ ಟಾಕಿಂಗ್‌ನಿಂದ ನಿದ್ದೆ ಮಾಡುವವನಿಗೆ ಅಪಾಯವಿಲ್ಲ ಆದ್ರೆ, ಅವಳು/ ಅವನೊಂದಿಗೆ ಮಲಗುವ ಪಾಲುದಾರನಿಗೆ ಅದು ಕಿರಿಕಿರಿಯಾಗುತ್ತದೆ. ಆದ್ರೆ, ಭಯಪಡುವ ಅಗತ್ಯ ಇಲ್ಲ. ನೀವು ಆಗಾಗ್ಗೆ ನಿಮ್ಮ ನಿದ್ರೆಯಲ್ಲಿ ಮಾತನಾಡುವ ಅಭ್ಯಾಸವನ್ನು ಹೊಂದಿದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಇಲ್ಲಿವೆ ಈ ಕೆಳಗೆ ನೀಡಲಾದ ಸಲಹೆಗಳನ್ನು ಅನುಸರಿಸಿ:
ಇದನ್ನೂ ಓದಿ: ಜ್ಞಾಪಕ ಶಕ್ತಿ & ಏಕಾಗ್ರತೆ ಹೆಚ್ಚಲು ಈ 5 ಯೋಗ ಭಂಗಿಗಳು ಸಹಾಯಕ...!
- ಚೆನ್ನಾಗಿ ನಿದ್ದೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ರಾತ್ರಿ ಬೇಗ ನಿದ್ದೆ ಮಾಡಿ ಬೆಳಗ್ಗೆ ತಡವಾಗಿ ಏಳಬೇಡಿ ಅಥವಾ ತಡರಾತ್ರಿ ನಿದ್ದೆ ಮಾಡಿ ಬೆಳಗ್ಗೆ ಬೇಗ ಏಳಬೇಡಿ.
- ಈ ರೀತಿ ಚೆನ್ನಾಗಿ ನಿದ್ದೆ ಮಾಡಿ ಮತ್ತು ನಿಮ್ಮ ನಿದ್ರೆಯಲ್ಲಿ ಮಾತನಾಡುವುದನ್ನು ನಿಯಂತ್ರಿಸಬಹುದು.
-ಕೆಲವರು ಆತಂಕ ಅಥವಾ ಒತ್ತಡವನ್ನು ಅನುಭವಿಸಿದಾಗ ನಿದ್ರೆಯಲ್ಲಿ ಮಾತನಾಡುತ್ತಾರೆ. ಇದನ್ನು ಮಾಡಲು, ಮಲಗುವ ಮುನ್ನ ನಿಮ್ಮ ಮನಸ್ಸನ್ನು ಶಾಂತಗೊಳಿಸಿ. ಖಿನ್ನತೆಗೆ ಒಳಗಾಗಿ ಮಲಗಲು ಹೋಗಬೇಡಿ. ನಿದ್ರೆಗೆ ಕೆಲವು ಗಂಟೆಗಳ ಮೊದಲು ಉಸಿರಾಟದ ವ್ಯಾಯಾಮ ಅಥವಾ ಧ್ಯಾನ ಮಾಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.