ಹೊಟ್ಟೆನೋವು ಮತ್ತು ಭೇದಿಯಾಗುತ್ತಿದೆಯೇ? ಇಲ್ಲಿವೆ ಸೂಪರ್ ಮನೆಮದ್ದುಗಳು

ಉಪಯುಕ್ತ ಆರೋಗ್ಯ ಸಲಹೆಗಳು: ಇಂದು ನಾವು ನಿಮಗೆ ಹೊಟ್ಟೆನೋವು ಮತ್ತು ಅತಿಸಾರದಿಂದ ಮುಕ್ತಿ ಹೊಂದಲು ಕೆಲವು ಮನೆಮದ್ದುಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಈ ಮನೆಮದ್ದುಗಳನ್ನು ಪ್ರಯತ್ನಿಸುವ ಮೂಲಕ ನೀವು ಅತಿಸಾರ ಸಮಸ್ಯೆ ಮತ್ತು ಹೊಟ್ಟೆ ನೋವಿನಿಂದ ತ್ವರಿತ ಪರಿಹಾರ ಪಡೆಯಬಹುದು.  

Written by - Puttaraj K Alur | Last Updated : Jun 21, 2023, 05:20 PM IST
  • ಹೊಟ್ಟೆ ನೋವು ಮತ್ತು ಭೇದಿ ಸಮಸ್ಯೆಗೆ ನಿಂಬೆ ಪಾನಕ ಅತ್ಯುತ್ತಮ ಮನೆಮದ್ದು
  • ಹೊಟ್ಟೆ ನೋವು ಮತ್ತು ಭೇದಿ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾಸಿವೆ ಕಾಳು ಸಹಕಾರಿಯಾಗಿದೆ
  • ಮಜ್ಜಿಗೆಯು ನಿಮ್ಮ ಹೊಟ್ಟೆಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ
ಹೊಟ್ಟೆನೋವು ಮತ್ತು ಭೇದಿಯಾಗುತ್ತಿದೆಯೇ? ಇಲ್ಲಿವೆ ಸೂಪರ್ ಮನೆಮದ್ದುಗಳು title=
ಹೊಟ್ಟೆ ನೋವು & ಭೇದಿಗೆ ಮನೆಮದ್ದುಗಳು

ನವದೆಹಲಿ: ಕೆಲವೊಮ್ಮೆ ನೀವು ತುಂಬಾ ಮಸಾಲೆಯುಕ್ತ ಆಹಾರವನ್ನು ಸೇವಿಸುತ್ತೀರಿ, ಇದು ನಿಮ್ಮ ಹೊಟ್ಟೆಯಲ್ಲಿ ತಳಮಳ ಸೃಷ್ಟಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಹೊಟ್ಟೆ ನೋವು ಮತ್ತು ಭೇದಿ ಸಮಸ್ಯೆಯನ್ನು ಎದುರಿಸುತ್ತೀರಿ. ಮತ್ತೆ ಮತ್ತೆ ಶೌಚಾಲಯಕ್ಕೆ ಹೋಗಬೇಕಾದ ಪರಿಸ್ಥಿತಿ ಬರಬಹುದು. ಇದರಿಂದ ನೀವು ಸುಸ್ತಾಗುತ್ತೀರಿ. ಇದರಿಂದ ನಿಮ್ಮ ಸ್ಥಿತಿ ತುಂಬಾ ಶೋಚನೀಯವಾಗುತ್ತದೆ. ಇದರಿಂದಾಗಿ ನಿಮಗೆ ಏನನ್ನೂ ತಿನ್ನುವ ಬಯಕೆ ಉಂಟಾಗುವುದಿಲ್ಲ.

ಹೊಟ್ಟೆ ನೋವು ಮತ್ತು ಭೇದಿ ಸಮಸ್ಯೆಯಿಂದ ಬಳಲುವವರ ಕಷ್ಟ ಹೇಳತೀರದು. ಹೀಗಾಗಿಯೇ ನಾವು ನಿಮಗಾಗಿ ಕೆಲವು ಮನೆಮದ್ದುಗಳ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ. ಈ ಮನೆಮದ್ದುಗಳನ್ನು ಪ್ರಯತ್ನಿಸುವ ಮೂಲಕ ನೀವು ಅತಿಸಾರ ಸಮಸ್ಯೆ ಮತ್ತು ಹೊಟ್ಟೆ ನೋವಿನಿಂದ ತ್ವರಿತ ಪರಿಹಾರ ಪಡೆಯಬಹುದು.  

ಇದನ್ನೂ ಓದಿ: ನರವೈಜ್ಞಾನಿಕ ಕಾಯಿಲೆಗೆ ಸಂಬಂಧಿಸಿದ ಈ ರೋಗಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ

ಹೊಟ್ಟೆ ನೋವು ಮತ್ತು ಭೇದಿಗೆ ಮನೆಮದ್ದುಗಳು

ನಿಂಬೆ ಪಾನಕ: ನೀವು ಹೊಟ್ಟೆ ನೋವು ಮತ್ತು ಭೇದಿ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಂಬೆ ಪಾನಕ ಅತ್ಯುತ್ತಮ ಮನೆಮದ್ದು. ಇದಕ್ಕಾಗಿ ನೀವು ಸಕ್ಕರೆ, ಉಪ್ಪು, ನಿಂಬೆ ರಸ ಮತ್ತು ನೀರನ್ನು ಒಂದು ಗ್ಲಾಸ್‍ನಲ್ಲಿ ಮಿಶ್ರಣ ಮಾಡಿ. ನಂತರ ನೀವು ಪ್ರತಿ 2-3 ಗಂಟೆಗಳ ನಂತರ ಕುಡಿಯಿರಿ. ಇದು ನಿಮ್ಮ ದೇಹವನ್ನು ಹೈಡ್ರೀಕರಿಸುತ್ತದೆ. ಇದು ನಿಮಗೆ ಅತಿಸಾರದಲ್ಲಿ ತ್ವರಿತ ಪರಿಹಾರ  ನೀಡುತ್ತದೆ.

ಸಾಸಿವೆ ಕಾಳು: ಕಾಲು ಚಮಚ ಸಾಸಿವೆಯನ್ನು ಸುಮಾರು 1 ಚಮಚ ನೀರಿನಲ್ಲಿ ಬೆರೆಸಿ ಸುಮಾರು 1 ಗಂಟೆ ಬಿಡಿ. ನಂತರ ನೀವು ತಯಾರಿಸಿದ ಮಿಶ್ರಣವನ್ನು ದಿನಕ್ಕೆ ಕನಿಷ್ಠ 2-3 ಬಾರಿ ಅತಿಸಾರದ ಸಮಸ್ಯೆಯ ಸಮಯದಲ್ಲಿ ಸೇವಿಸಬಹುದು.

ಮಜ್ಜಿಗೆ: ಮಜ್ಜಿಗೆಯ ಸೇವನೆಯು ನಿಮ್ಮ ಹೊಟ್ಟೆಗೆ ತ್ವರಿತ ತಂಪು ನೀಡುತ್ತದೆ, ಇದು ನಿಮ್ಮ ಹೊಟ್ಟೆಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಇದಕ್ಕಾಗಿಯೇ ಅತಿಸಾರದ ಸಮಯದಲ್ಲಿ ಮಜ್ಜಿಗೆ ಸೇವನೆಯಿಂದ ಅತಿಸಾರದಿಂದ ಮುಕ್ತಿ ದೊರೆಯುತ್ತದೆ. ಇದರೊಂದಿಗೆ ಹೊಟ್ಟೆ ನೋವಿಗೆ ಪರಿಹಾರ ನೀಡುತ್ತದೆ.

ಒಣ ಶುಂಠಿ: ಇದಕ್ಕಾಗಿ ಅರ್ಧ ಚಮಚ ಒಣ ಶುಂಠಿಯನ್ನು ಒಂದು ಲೋಟ ನೀರಿಗೆ ಬೆರೆಸಿ ಸೇವಿಸಿ. ಬೇಕಿದ್ದರೆ ಒಣ ಶುಂಠಿಯನ್ನು ಮಜ್ಜಿಗೆಯೊಂದಿಗೆ ಬೆರೆಸಿ ಸೇವಿಸಬಹುದು. ಹೀಗೆ ಮಾಡುವುದರಿಂದ ನೀವು ಕ್ಷಣಮಾತ್ರದಲ್ಲಿ ಅತಿಸಾರದ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ.  

ಮೆಂತ್ಯ ಕಾಳು: ಇದಕ್ಕಾಗಿ ಮೊದಲು ಮೆಂತ್ಯವನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ಲೋಟ ನೀರಿಗೆ 1 ಚಮಚ ಮೆಂತ್ಯ ಪುಡಿಯನ್ನು ಬೆರೆಸಿ ಸೇವಿಸಿ. ಇದರಿಂದ ನೀವು ಹೊಟ್ಟೆ ನೋವು ಮತ್ತು ಅತಿಸಾರ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ.  

ಇದನ್ನೂ ಓದಿ: ಜ್ಞಾಪಕ ಶಕ್ತಿ & ಏಕಾಗ್ರತೆ ಹೆಚ್ಚಲು ಈ 5 ಯೋಗ ಭಂಗಿಗಳು ಸಹಾಯಕ...!

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಪಾಲಿಸುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News