ನೀವು 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಪ್ರತಿ ರಾತ್ರಿ 5 ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ರೆ ಮಾಡುವುದು ನಿಮಗೆ ಅಪಾಯಕಾರಿ. ನೀವು ಗಂಭೀರ ಕಾಯಿಲೆಗಳಿಂದ ಬಳಲಬಹುದು ಎಂದು ಪ್ಲೋಸ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಸಂಶೋಧನೆಯಲ್ಲಿ ಬಹಿಂಗವಾಗಿದೆ.


COMMERCIAL BREAK
SCROLL TO CONTINUE READING

25 ವರ್ಷಗಳ ಕಾಲ ನಡೆದ ಸಂಶೋಧನೆಯಲ್ಲಿ ಬ್ರಿಟನ್‌ನ 8 ಸಾವಿರ ಸರ್ಕಾರಿ ನೌಕರರನ್ನು ಸೇರಿಸಲಾಯಿತು .ಅವರಿಗೆ 50 ವರ್ಷ ವಯಸ್ಸಿನವರೆಗೆ ಯಾವುದೇ  ದೀರ್ಘಕಾಲದ ಕಾಯಿಲೆ ಇರಲಿಲ್ಲ. ಪ್ರತಿ 4 ರಿಂದ 5 ವರ್ಷಗಳಿಗೊಮ್ಮೆ ಮುಂದಿನ 25 ವರ್ಷಗಳವರೆಗೆ ಅವರ ನಿದ್ರೆ ಮತ್ತು ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡುವಂತೆ ವಿಜ್ಞಾನಿಗಳು ಕೇಳಿಕೊಂಡರು.


ರಾತ್ರಿಯಲ್ಲಿ 7 ಗಂಟೆಗಳ ಕಾಲ ಮಲಗುವ ಜನರಿಗೆ ಹೋಲಿಸಿದರೆ ರಾತ್ರಿ 5 ಗಂಟೆಗಳ ಕಾಲ ನಿದ್ರಿಸುವವರಲ್ಲಿ ದೀರ್ಘಕಾಲದ ಕಾಯಿಲೆಗಳ ಅಪಾಯ ಹೆಚ್ಚು ಎಂಬ ಅಂಶ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. 50ನೇ ವಯಸ್ಸಿನಲ್ಲಿ ನಿದ್ರೆಯನ್ನು ಪತ್ತೆಹಚ್ಚಿದ ಜನರು 5 ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ರೆ ಮಾಡಿದರೆ ದೀರ್ಘಕಾಲದ ಕಾಯಿಲೆಗಳ ಅಪಾಯವು 30% ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ, ಈ ಅಪಾಯವು 60 ವರ್ಷದವರಲ್ಲಿ 32% ಮತ್ತು 70 ವರ್ಷದವರಲ್ಲಿ 40% ಎಂದು ಹೇಳಲಾಗತ್ತೆ. ಸಾಕಷ್ಟು ನಿದ್ದೆ ಮಾಡದೆ ಇರುವವರ ಸಾವಿನ ಅಪಾಯವೂ 25% ಅಧಿಕ ಎಂಬ ಆಘಾತಕಾರಿ ಅಂಶ ಈ ಸಂಶೋಧನೆಯಿಂದ ತಿಳಿದುಬಂದಿದೆ. 


ಇದನ್ನೂ ಓದಿ- Weight Loss Drinks: ಮಲಗುವ ಮುನ್ನ ಈ ಡ್ರಿಂಕ್ಸ್ ಕುಡಿದರೆ ಯಾವುದೇ ಜಿಮ್, ವ್ಯಾಯಾಮ ಮಾಡದೆಯೂ ಕರಗುತ್ತೆ ಬೆಲ್ಲಿ ಫ್ಯಾಟ್


ಕಡಿಮೆ ನಿದ್ರೆಯಿಂದ ಈ ರೋಗಗಳ ಅಪಾಯವು ತಪ್ಪಿದ್ದಲ್ಲ. 
ರಾತ್ರಿಯಲ್ಲಿ 5 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವವರಿಗೆ ಮಧುಮೇಹ, ಅನೇಕ ರೀತಿಯ ಕ್ಯಾನ್ಸರ್, ಹೃದ್ರೋಗ, ಹೃದಯಾಘಾತ, ಹೃದಯ ವೈಫಲ್ಯ, ಶ್ವಾಸಕೋಶದ ಕಾಯಿಲೆ, ಮೂತ್ರಪಿಂಡದ ಕಾಯಿಲೆ, ಪಿತ್ತಜನಕಾಂಗದ ಕಾಯಿಲೆ, ಖಿನ್ನತೆ,  ಪಾರ್ಕಿನ್ಸನ್ ಕಾಯಿಲೆ, ಸಂಧಿವಾತ ಮತ್ತು ಅನೇಕ ಮಾನಸಿಕ ಅಸ್ವಸ್ಥತೆಗಳ ಅಪಾಯವಿದೆ.


ಶ್ರೀಮಂತ ರಾಷ್ಟ್ರಗಳಲ್ಲಿ ಬೆಳೆಯುತ್ತಿರುವ ಸಮಸ್ಯೆ ಇದಾಗಿದೆ. ಇಲ್ಲಿ ಅರ್ಧಕ್ಕಿಂತ ಹೆಚ್ಚು ವಯಸ್ಸಾದವರಿಗೆ ಮಿನಿಮಮ್ ಎರಡು ದೀರ್ಘಕಾಲದ ಕಾಯಿಲೆಗಳಿವೆ. ಇದು ಆರೋಗ್ಯ ಸೇವೆಗಳು, ಆಸ್ಪತ್ರೆಗಳು ಮತ್ತು ಇಡೀ ಆರೋಗ್ಯ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ.


ಇದನ್ನೂ ಓದಿ- Drinking Water After Fruits: ಹಣ್ಣುಗಳನ್ನು ತಿಂದರೆ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ


ಹಾಗಾದರೆ ಎಷ್ಟು ನಿದ್ರೆ ಬೇಕು?
ಜನರಿಗೆ  ವಯಸ್ಸಾದಂತೆ, ಅವರ ನಿದ್ರೆಯ ಸೈಕಲ್‌  ಸಹ ಬದಲಾಗುತ್ತೆ. ನೀವು ದೀರ್ಘಕಾಲದ ಮತ್ತು ಗಂಭೀರ ಕಾಯಿಲೆಗಳನ್ನು ತಪ್ಪಿಸಲು ಬಯಸಿದರೆ, ಪ್ರತಿ ರಾತ್ರಿ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವುದು ಅವಶ್ಯಕ. ಇದಕ್ಕಿಂತ ಹೆಚ್ಚು ಅಥವಾ ಕಡಿಮೆ ನಿದ್ರೆ ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಚೆನ್ನಾಗಿ ನಿದ್ರಿಸಲು, ಕೊಠಡಿಯು ಡಾರ್ಕ್, ಶಾಂತ ಮತ್ತು ಸರಿಯಾದ ತಾಪಮಾನದಲ್ಲಿರಬೇಕು. ಮಲಗುವ ಮುನ್ನ ಹೆವಿ ಫುಡ್ ಏನನ್ನೂ ತಿನ್ನಬೇಡಿ ಮತ್ತು ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಮ್ಮಿಂದ ದೂರವಿಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.