Health Tips: ಹಣ್ಣು ಸೇವಿಸುವಾಗ ಮರೆತೂ ಕೂಡ ಈ ತಪ್ಪನ್ನು ಮಾಡಬೇಡಿ

Do not make These Mistakes while Eating Fruits: ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಹಣ್ಣುಗಳನ್ನು ತಿನ್ನುವಾಗ, ನಾವು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಹಣ್ಣುಗಳನ್ನು ತಿನ್ನುವಾಗ ಯಾವ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Dec 13, 2022, 10:58 PM IST
  • ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
  • ನಮ್ಮ ದೇಹದ ಎಲ್ಲಾ ಅಗತ್ಯಗಳನ್ನು ಪೂರೈಸಲು ಬೇಕಾಗುವ ಅಗತ್ಯವಾದ
  • ಅನೇಕ ಜೀವಸತ್ವಗಳು ಮತ್ತು ಖನಿಜಗಳು ಹಣ್ಣುಗಳಲ್ಲಿ ಇರುತ್ತವೆ.
Health Tips: ಹಣ್ಣು ಸೇವಿಸುವಾಗ ಮರೆತೂ ಕೂಡ ಈ ತಪ್ಪನ್ನು ಮಾಡಬೇಡಿ title=
Eating Fruits

Common Mistakes To Avoid While Fruits: ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ನಮ್ಮ ದೇಹದ ಎಲ್ಲಾ ಅಗತ್ಯಗಳನ್ನು ಪೂರೈಸಲು ಬೇಕಾಗುವ ಅಗತ್ಯವಾದ ಅನೇಕ ಜೀವಸತ್ವಗಳು ಮತ್ತು ಖನಿಜಗಳು ಹಣ್ಣುಗಳಲ್ಲಿ ಇರುತ್ತವೆ. ಇನ್ನೊಂದೆಡೆ, ಹಣ್ಣುಗಳು ತೂಕವನ್ನು ಕಡಿಮೆ ಮಾಡಲು ತುಂಬಾ ಸಹಕಾರಿಯಾಗಿವೆ ಎಂದೂ ಕೂಡ ಹೇಳಲಾಗುತ್ತದೆ. ಏಕೆಂದರೆ, ಹಣ್ಣುಗಳಲ್ಲಿ ಕ್ಯಾಲೊರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿರುತ್ತದೆ ಮತ್ತು ಫೈಬರ್ನ ಪ್ರಮಾಣವು ಹೆಚ್ಚಾಗಿರುತ್ತದೆ, ಇಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹಣ್ಣುಗಳನ್ನು ತಿನ್ನುವಾಗ ಯಾವ ವಿಷಯಗಳನ್ನು ನೆನಪಿನಲ್ಲಿಡಬೇಕು ತಿಳಿಯೋಣ ಬನ್ನಿ

ಹಣ್ಣುಗಳನ್ನು ತಿನ್ನುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
ಮಿಶ್ರಣ ಮಾಡುವ ಮೂಲಕ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿ

ಹಣ್ಣುಗಳು ನಮ್ಮ ದೇಹದೊಳಗೆ ಬೇರೆ ಯಾವುದೇ ಆಹಾರಕ್ಕಿಂತ ವೇಗವಾಗಿ ಜೀರ್ಣಗೊಳ್ಳುತ್ತವೆ. ಆದರೆ ಹಣ್ಣುಗಳನ್ನು ಇತರ ಪದಾರ್ಥಗಳೊಂದಿಗೆ ಬೆರೆಸಿದಾಗ, ಅದು ದೇಹದಲ್ಲಿ ವಿಷವನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ, ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ನೀವು ವಿವಿಧ ಹಣ್ಣುಗಳನ್ನು ಒಟ್ಟಿಗೆ ಬೆರೆಸಿ ಸೇವಿಸಿದರೆ, ಅದು ನಿಮ್ಮ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಇದನ್ನು ಮಾಡುವುದನ್ನು ತಪ್ಪಿಸಿ.

ರಾತ್ರಿ ಹೊತ್ತು ಹಣ್ಣುಗಳನ್ನು ಸೇವಿಸಬೇಡಿ
ರಾತ್ರಿ ಮಲಗುವ 3 ಗಂಟೆಗಳ ಮೊದಲು ನೀವು ಏನನ್ನೂ ತಿನ್ನಬಾರದು. ಏಕೆಂದರೆ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಏಕೆಂದರೆ ನೈಸರ್ಗಿಕ ಸಕ್ಕರೆ ಹಣ್ಣುಗಳಲ್ಲಿ ಕಂಡುಬರುತ್ತದೆ. ನೀವು ಮಲಗುವ ಮುನ್ನ ಹಣ್ಣುಗಳನ್ನು ಸೇವಿಸಿದಾಗ, ಸಕ್ಕರೆಯು ನಿಮ್ಮ ದೇಹವನ್ನು ತಲುಪುತ್ತದೆ, ಇದು ನಿಮ್ಮ ನಿದ್ರೆಗೆ ಭಂಗ ತರುತ್ತದೆ. ಅಷ್ಟೇ ಅಲ್ಲ ಮಲಗುವ ಮುನ್ನ ಹಣ್ಣುಗಳನ್ನು ಸೇವಿಸಿದರೆ ಅಸಿಡಿಟಿ ಸಮಸ್ಯೆಯೂ ಕಾಡಬಹುದು. ಹೀಗಾಗಿ ಮಲಗುವ ಮೊದಲು ಹಣ್ಣುಗಳನ್ನು ತಿನ್ನಬೇಡಿ.

ಇದನ್ನೂ ಓದಿ-White Hair Problem: ನೈಸರ್ಗಿಕವಾಗಿ ಕೂದಲು ಕಪ್ಪಾಗಿಸಲು ಈ ವಿಧಾನಗಳನ್ನು ಎಂದಿಗೂ ಅನುಸರಿಸಬೇಡಿ

ಹಣ್ಣು ತಿಂದ ತಕ್ಷಣ ನೀರು ಕುಡಿಯುವುದು ತಪ್ಪಿಸಿ
ಅನೇಕ ಜನರು ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯುತ್ತಾರೆ, ಆದರೆ ಹಾಗೆ ಮಾಡುವುದರಿಂದ ನೀವು ಅಸಿಡಿಟಿ ಸಮಸ್ಯೆಯನ್ನು ಎದುರಿಸಬಹುದು. ಹೀಗಾಗಿ ನೀವು ಇದನ್ನು ಮಾಡುವುದನ್ನು ತಪ್ಪಿಸಬೇಕು.

ಇದನ್ನೂ ಓದಿ-Treatment For Cancer: ಸಿಕ್ಕೆ ಬಿಟ್ತು ಬ್ಲಡ್ ಕ್ಯಾನ್ಸರ್ ಗೆ ಸೂಕ್ತ ಚಿಕಿತ್ಸೆ, ಬ್ರಿಟನ್ ನಲ್ಲಿ 13 ವರ್ಷದ ಬಾಲಕಿಯ ಪ್ರಾಣ ಉಳಿಸಿದ ವೈದ್ಯರು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News