Winter Tips: ಚಳಿಗಾಲ ಎಂದರೆ ಕೆಲವರಿಗೆ ಅಚ್ಚುಮೆಚ್ಚು. ಇನ್ನೂ ಕೆಲವರಿಗೆ ಅಯ್ಯೋ, ಈ ಋತು ಯಾವಾಗ ಮುಗಿಯುತ್ತೋ ಎಂಬ ಚಿಂತೆ. ಈ ಋತುವಿನಲ್ಲಿ ಜನರು ಬೆಚ್ಚಗಿರಲು ಹೆಚ್ಚು ಬೆಚ್ಚಗಿನ ಬಟ್ಟೆಗಳನ್ನು ಧರಿಸುತ್ತಾರೆ. ರಾತ್ರಿ ಮಲಗುವಾಗಲೂ ಬೆಚ್ಚನೆಯ ಬಟ್ಟೆ ಹಾಕಿಕೊಂಡು ಮಲಗುವವರು ಬಹಳ ಮಂದಿ ಇದ್ದಾರೆ. ಆದರೆ ಹಾಗೆ ಮಾಡುವುದು ನಿಮಗೆ ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಬಹುದು ಎಂದು ನಿಮಗೆ ತಿಳಿದಿದೆಯೇ? ರಾತ್ರಿ ಸ್ವೆಟರ್ ಧರಿಸಿ ಮಲಗುವುದು (Sleeping in sweater) ಹಲವು ರೀತಿಯ ದೈಹಿಕ ಸಮಸ್ಯೆಗಳನ್ನು ಆಹ್ವಾನಿಸುತ್ತದೆ. 


COMMERCIAL BREAK
SCROLL TO CONTINUE READING

ಹೌದು, ರಾತ್ರಿ ವೇಳೆ ಸ್ವೆಟರ್ ಧರಿಸಿ ಮಲಗುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ರಾತ್ರಿ ಸ್ವೆಟರ್ ಧರಿಸಿ ಮಲಗುವುದರಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಯೋಣ-
ಚರ್ಮದ ಸಮಸ್ಯೆ:

ಬೆಚ್ಚಗಿನ ಬಟ್ಟೆಗಳನ್ನು ಧರಿಸಿ ಮಲಗುವುದರಿಂದ ಚರ್ಮವು  (Skin) ತುಂಬಾ ಒಣಗುತ್ತದೆ . ಇದು ಚರ್ಮದ ಮೇಲೆ ತುರಿಕೆಗೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ರಾತ್ರಿ ಸ್ವೆಟರ್ ಹಾಕಿಕೊಂಡು ಮಲಗದಿದ್ದರೆ ಒಳ್ಳೆಯದು.


ಇದನ್ನೂ ಓದಿ-  ಈ ಸಮಸ್ಯೆ ಇರುವವರು ಹೂಕೋಸನ್ನು ಮುಟ್ಟಿ ಕೂಡಾ ನೋಡಬೇಡಿ


ಬಿಪಿ- 
ಉಣ್ಣೆಯ ಬಟ್ಟೆಗಳನ್ನು ಧರಿಸುವುದರಿಂದ ದೇಹದ ಶಾಖವು ಹೊರಬರಲು ಬಿಡುವುದಿಲ್ಲ, ಇದರಿಂದಾಗಿ ಬಿಪಿ ಮತ್ತು ಮಧುಮೇಹ (Sugar) ರೋಗಿಗಳ ಸಮಸ್ಯೆ ಗಮನಾರ್ಹವಾಗಿ ಹೆಚ್ಚಾಗುತ್ತದೆ.


ಲೋ ಬಿಪಿ- 
ಬೆಚ್ಚನೆಯ ಬಟ್ಟೆಗಳನ್ನು ಧರಿಸಿ ಮಲಗುವುದರಿಂದ ರಾತ್ರಿಯಲ್ಲಿ ನೀವು ಹೆಚ್ಚು ಬೆವರಬಹುದು, ಇದರಿಂದಾಗಿ ನಿಮ್ಮ ಬಿಪಿ (BP) ಕೂಡ ಕಡಿಮೆಯಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ರಾತ್ರಿ ಸ್ವೆಟರ್ ಧರಿಸಿ ಮಲಗುವ ಅಭ್ಯಾಸವನ್ನು ತಪ್ಪಿಸಬೇಕು.


ಇದನ್ನೂ ಓದಿ- Health Tips: ಈ ವಿಶೇಷ ತೈಲವು ಅನೇಕ ರೋಗಗಳನ್ನು ತಡೆಯುತ್ತದೆ, ಈಗಲೇ ಬಳಸಿ ನೋಡಿ


ಉಸಿರಾಟದ ತೊಂದರೆ - 
ಬೆಚ್ಚಗಿನ ಬಟ್ಟೆಗಳನ್ನು ಧರಿಸಿ ಮಲಗುವುದರಿಂದ ಆಮ್ಲಜನಕವನ್ನು ನಿರ್ಬಂಧಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಪ್ಯಾನಿಕ್ ಎಂದರೆ ಏನೋ ಒಂದು ರೀತಿಯ ಆತಂಕದಂತಹ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಇದರೊಂದಿಗೆ ಉಸಿರಾಟದ ತೊಂದರೆಯೂ ಉಂಟಾಗುತ್ತದೆ.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.