Health Tips: ಈ ವಿಶೇಷ ತೈಲವು ಅನೇಕ ರೋಗಗಳನ್ನು ತಡೆಯುತ್ತದೆ, ಈಗಲೇ ಬಳಸಿ ನೋಡಿ

ಮೀನಿನ ಎಣ್ಣೆಯ ಸೇವನೆಯು ಕೀಲು ನೋವು ಮತ್ತು ಕೂದಲು ಉದುರುವಿಕೆಯ ಸಮಸ್ಯೆಯಲ್ಲೂ ಸಹ ನಿಮಗೆ ಪ್ರಯೋಜನವನ್ನು ನೀಡುತ್ತದೆ.

Written by - Puttaraj K Alur | Last Updated : Dec 22, 2021, 01:56 PM IST
  • ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ನಿಮಗೆ ಹೆಚ್ಚಿನ ಪೋಷಣೆಯನ್ನು ನೀಡುತ್ತದೆ
  • ಆಹಾರದಲ್ಲಿ ಕಡಿಮೆ ಪ್ರಮಾಣ ಮೀನಿನ ಎಣ್ಣೆ ಸೇವಿಸುವುದು ಹೃದಯದ ಆರೋಗ್ಯಕ್ಕೆ ಉತ್ತಮ
  • ಮೀನಿನ ಎಣ್ಣೆಯಲ್ಲಿರುವ DHA ದೃಷ್ಟಿಯನ್ನು ಸರಿಯಾಗಿ ಇಡುತ್ತದೆ
Health Tips: ಈ ವಿಶೇಷ ತೈಲವು ಅನೇಕ ರೋಗಗಳನ್ನು ತಡೆಯುತ್ತದೆ, ಈಗಲೇ ಬಳಸಿ ನೋಡಿ   title=
ಮೀನಿನ ಎಣ್ಣೆ ಹೃದಯದ ಆರೋಗ್ಯಕ್ಕೆ ಉತ್ತಮ

ನವದೆಹಲಿ: ಚಳಿಗಾಲ(Winter)ದಲ್ಲಿ ಅನೇಕ ರೋಗಗಳ ಅಪಾಯ ಹೆಚ್ಚಾಗುತ್ತದೆ. ಈ ಋತುವಿನಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯ. ತಜ್ಞರ ಪ್ರಕಾರ ಚಳಿಗಾಲದಲ್ಲಿ ನೀವು ನಿಮ್ಮ ಆಹಾರದಲ್ಲಿ ಉತ್ತಮ ಕೊಬ್ಬನ್ನು ಸೇರಿಸಿಕೊಳ್ಳಬೇಕು. ಇದು ಶೀತ ಮತ್ತು ಜ್ವರದಂತಹ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಅಧ್ಯಯನದ ಪ್ರಕಾರ ಮೀನಿನಲ್ಲಿರುವ ಪೋಷಕಾಂಶಗಳು ಚಳಿಗಾಲದಲ್ಲಿ ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ(Fish Oil Benefits). ನಿಮ್ಮ ಆಹಾರದಲ್ಲಿ ಮೀನಿನ ಎಣ್ಣೆಯನ್ನು ಸೇರಿಸಿದರೆ ಅದು ಹೃದಯದ ಆರೋಗ್ಯ ಮತ್ತು ಮೆದುಳಿನ ಕಾರ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ನಿಮಗೆ ಹೆಚ್ಚಿನ ಪೋಷಣೆಯನ್ನು ನೀಡುತ್ತದೆ. ಇದು ನಿಮ್ಮ ಜೈವಿಕ ಕಾರ್ಯಗಳನ್ನು ಸುಧಾರಿಸುತ್ತದೆ. ಈ ಋತುವಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬಯಸಿದರೆ ದೈನಂದಿನ ಆಹಾರದಲ್ಲಿ ಮೀನಿನ ಎಣ್ಣೆಯನ್ನು ಬಳಸುವುದು ಉತ್ತಮ.

ಹೃದಯದ ಆರೋಗ್ಯಕ್ಕಾಗಿ

ಆಹಾರದಲ್ಲಿ ಕಡಿಮೆ ಪ್ರಮಾಣದಲ್ಲಿ ಮೀನಿನ ಎಣ್ಣೆ(Fish Oil)ಯನ್ನು ಸೇರಿಸುವುದು ನಿಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಅಧ್ಯಯನದ ಪ್ರಕಾರ ಮೀನು ಸೇವಿಸುವ ಜನರಿಗೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆ. ಒಮೆಗಾ-3 ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳು (PUFAs) ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ: Jaggery: ಚಳಿಗಾಲದಲ್ಲಿ ಅತಿಯಾದ ಬೆಲ್ಲ ಸೇವನೆ ಹಾನಿಕಾರಕ

ಕಣ್ಣುಗಳ ಆರೋಗ್ಯಕ್ಕೆ

ಮೀನಿನ ಎಣ್ಣೆಯಲ್ಲಿರುವ DHA ದೃಷ್ಟಿಯನ್ನು ಸರಿಯಾಗಿ ಇಡುತ್ತದೆ. ಇದು ನಿಮ್ಮ ದೃಷ್ಟಿಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. DHA ನೈಸರ್ಗಿಕವಾಗಿ ಕಣ್ಣಿನ ರೆಟಿನಾದಲ್ಲಿ ಇರುತ್ತದೆ. ಮೀನಿನ ಎಣ್ಣೆಯಲ್ಲಿರುವ DHA ರೆಟಿನಾದ ಕಾರ್ಯವನ್ನು ಸುಧಾರಿಸುತ್ತದೆ. ಕಣ್ಣುಗಳಿಗೆ ಸಂಬಂಧಿಸಿದ ಕಾಯಿಲೆಗಳಲ್ಲೂ ಇದರ ಸೇವನೆಯು ಪ್ರಯೋಜನಕಾರಿಯಾಗಿದೆ.

ಮೆದುಳಿನ ಉತ್ತಮ ಕಾರ್ಯಕ್ಕೆ

ಮೀನಿನ ಎಣ್ಣೆಯು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇದು ನಿಮ್ಮ ಮೆದುಳಿನ ಕಾರ್ಯ(Brain Function)ವನ್ನು ಸುಧಾರಿಸುತ್ತದೆ. ತಜ್ಞರ ಪ್ರಕಾರ ಐಕೋಸಾಪೆಂಟೆನೊಯಿಕ್ ಆಸಿಡ್ (ಇಪಿಎ) ಮತ್ತು ಡೊಕೊಸಾಹೆಕ್ಸೆನೊಯಿಕ್ ಆಸಿಡ್ (ಡಿಎಚ್‌ಎ) ಒಮೆಗಾ-3 ಕೊಬ್ಬಿನಾಮ್ಲಗಳಾಗಿವೆ. ಇವು ಹೃದಯ ಪರಿಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಮೆದುಳಿನ ಆರೋಗ್ಯಕ್ಕೆ ಪ್ರಯೋಜನ ನೀಡುತ್ತವೆ

ಚರ್ಮದ ಆರೈಕೆಗೆ

ಮೀನಿನ ಎಣ್ಣೆಯ ನಿಯಮಿತ ಸೇವನೆಯು ಸುಕ್ಕುಗಳ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಇದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಹಾನಿಯನ್ನು ತಡೆಯುತ್ತದೆ.

ಇದನ್ನೂ ಓದಿ: ಈ ಸಮಸ್ಯೆ ಇರುವವರು ಹೂಕೋಸನ್ನು ಮುಟ್ಟಿ ಕೂಡಾ ನೋಡಬೇಡಿ  

ಕೀಲು ನೋವು ಮತ್ತು ಕೂದಲು ಉದುರುವಿಕೆ ಸಮಸ್ಯೆಗೆ

ಮೀನಿನ ಎಣ್ಣೆಯ ಸೇವನೆಯು ಕೀಲು ನೋವು ಮತ್ತು ಕೂದಲು ಉದುರುವಿಕೆಯ ಸಮಸ್ಯೆಯಲ್ಲೂ ಸಹ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಚಳಿಗಾಲದಲ್ಲಿ ಒಣ ಕೂದಲು ಮತ್ತು ಒಣ ತ್ವಚೆಯ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ ಆಹಾರದಲ್ಲಿ ಮೀನಿನ ಎಣ್ಣೆಯನ್ನು ಸೇರಿಸಿ. ಇದರಿಂದ ಮೊಣಕಾಲು ನೋವಿಗೂ ಪರಿಹಾರ ಸಿಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News