ಬೆಂಗಳೂರು :ನಿಮ್ಮ ಹತ್ತು ವರ್ಷದ ಮಗ ದಿನಕ್ಕೆ 7 ಗಂಟೆ ಮೊಬೈಲ್ ನೋಡ್ತಾನಾ..? ಹಾಗಾದ್ರೆ ಖಂಡಿತಾ ಅಪಾಯ ಕಾದಿದೆ.  ಮಕ್ಕಳು ಮೊಬೈಲ್ ಗೆ ಅಡಿಕ್ಟ್ ಆಗಿ ಬಿಟ್ಟಿದ್ದರೆ, ಅದು ಅವರ ಮೆದುಳಿನ ಮೇಲೆ ಖಂಡಿತಾ ಪರಿಣಾಮ ಬೀರುತ್ತದೆ.  ಮಕ್ಕಳ ಮೆದುಳಿನ ಬೆಳವಣಿಗೆ ಮೇಲೆ ನೇರ ಪರಿಣಾಮ ಬೀರುತ್ತದೆ.
ಈಗಿನ ಮಕ್ಕಳು ಒಂದಲ್ಲ ಒಂದು ರೀತಿಯಲ್ಲಿ ಸ್ಮಾರ್ಟ್ ಫೋನಿಗೆ (Smartphone) ಅಡಿಕ್ಟ್ ಆಗಿರುತ್ತಾರೆ. ಮೊಬೈಲ್ ಫೋನಿಗೆ ಅಡಿಕ್ಟ್  (Smartphone Addiction) ಆಗಿರದ ಮಕ್ಕಳು ಸಿಗುವುದು ತುಂಬಾ ಕಷ್ಟ.  ಈ ಅಡಿಕ್ಷನ್ ಏನೆಲ್ಲಾ ಅವಾಂತರ ಸೃಷ್ಟಿಸಬಹುದು ಗೊತ್ತಾ..? ಮಕ್ಕಳಲ್ಲಿ ಮೊಬೈಲ್ ಅಡಿಕ್ಷನ್ ತಪ್ಪಿಸಿ. 


COMMERCIAL BREAK
SCROLL TO CONTINUE READING

ಮೆದುಳಿನ ಬೆಳವಣಿಗೆಗೆ ಮಾರಕ..!
ಒಂದು ಅಧ್ಯಯನದ (Study)  ಪ್ರಕಾರ ತುಂಬಾ ಹೊತ್ತು ಮಕ್ಕಳು ಸ್ಮಾರ್ಟ್ ಫೋನ್ ಬಳಸಿದರೆ ಮೆದುಳಿನ ಹೊರ ಪದರ ತೆಳ್ಳಗಾಗುತ್ತದೆ.  ಇದರಿಂದ  ಮೆದುಳಿನ ಬೆಳವಣಿಗೆ (Brain Growth) ಕುಂಠಿತವಾಗುತ್ತದೆ. ಮೆದುಳು ಬೇಕಾದ ರೀತಿಯಲ್ಲಿ ಬೆಳವಣಿಗೆಯಾಗುವುದಿಲ್ಲ ಎಂದು ಅಧ್ಯಯನ ಹೇಳುತ್ತದೆ.


ಇದನ್ನೂ ಓದಿ :ಅತಿಯಾದ Tomato ಸೇವನೆ ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು, ಎಚ್ಚರ!


ಕಣ್ಣುಗಳಲ್ಲಿ ಡ್ರೈನೆಸ್ ಕಂಡು ಬರಬಹುದು:
ತುಂಬಾ ಹೊತ್ತು ಮೊಬೈಲ್ (Mobile) ಬಳಸಿದರೆ, ನಿಮ್ಮ ಮುದ್ದಿನ ಮಕ್ಕಳ ಕಣ್ಣುಗಳು ಒಣಗಬಹುದು(Eye Dryness). ಮಕ್ಕಳು ಸ್ಮಾರ್ಟ್ ಫೋನ್ (Smartphone) ಪರದೆಯನ್ನು ಬಹಳ ಹೊತ್ತು ನೋಡುವುದರಿಂದ ಕಣ್ಣು ಒಣಗಿ ಹೋಗುತ್ತದೆ.  ಮಕ್ಕಳಲ್ಲಿ ಕಣ್ಣು (eye) ಒಣಗುವ ಸಮಸ್ಯೆ ಇತ್ತೀಚೆಗೆ ಹೆಚ್ಚಾಗಲು ಇದೇ ಕಾರಣ. ಕಣ್ಣಲ್ಲಿ ನೀರು ಬರುತ್ತದೆ. ಮುಂದೆ ಕಣ್ಣಿನಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. 


ಮೆದುಳು ಬೆಳೆಯದೇ ಇರಬಹುದು:
ಡಾಕ್ಟರ್ಸ್ ಪ್ರಕಾರ, ಮೊದಲ ಆರು ವರ್ಷಗಳಲ್ಲಿ ಮಕ್ಕಳ ಮೆದುಳು ತುಂಬಾ ವೇಗವಾಗಿ ಬೆಳೆಯುತ್ತದೆ.  ಈ ಹೊತ್ತಿನಲ್ಲಿ ಮಕ್ಕಳು ಯಾವುದಾದರೂ ರಚನಾತ್ಮಕ ಕಾರ್ಯದಲ್ಲಿ (Creative Stimulation) ತೊಡಗಬೇಕು. ಆಟ, ಓಟ ಇತ್ಯಾದಿ ಚಟುವಟಿಕೆಗಳಿದ್ದರೆ ಮೆದುಳು ಚೆನ್ನಾಗಿ ಬೆಳೆಯುತ್ತದೆ. ಮಕ್ಕಳು ಕೇವಲ ಕುಳಿತೇ ಇದ್ದರೆ, ಮೆದುಳು ಸರಿಯಾದ ರೀತಿಯಲ್ಲಿ ಬೆಳೆಯುವುದಿಲ್ಲ.. 


ಇದನ್ನೂ ಓದಿ : ರಾತ್ರಿ ಪದೇ ಪದೇ ಎಚ್ಚರವಾಗುತ್ತಾ..? ನಿದ್ರೆ ಬರೋದೇ ಇಲ್ವಾ..? ಸುಖ ನಿದ್ರೆಗೆ ಸಿಂಪಲ್ ಟಿಪ್ಸ್


ಮಕ್ಕಳು ಬೇರೆ ಬೇರೆ ಉದ್ದೇಶಗಳಿಗಾಗಿ ಮೊಬೈಲ್ ಬಳಸುತ್ತಾರೆ. ಇದು ಖಂಡಿತವಾಗಿಯೂ ಅವರ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಹತ್ತು ನಿಮಿಷಕ್ಕಿಂತಲೂ ಹೆಚ್ಚು ಮೊಬೈಲ್ ಪರದೆ ನೋಡುತ್ತಿದ್ದರೆ, ಅದು ಮೆದುಳಿನ ಮೇಲೆ ದಷ್ಪರಿಣಾಮ ಬೀರುತ್ತದೆ.  ಒಂದೇ ಪರದೆಯನ್ನೇ ನೋಡುತ್ತಿದ್ದರೆ, ಅದು ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ.  ಮೆದುಳಿನ ಬೆಳವಣಿಗೆ ಮೇಲೂ ದುಷ್ಪರಿಣಾಮ ಬೀರುತ್ತದೆ.


ಮೊಬೈಲ್ ವೈಬ್ರೇಶನ್ (Mobile Vibration) ಕೂಡಾ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಕ್ಕಳು ಮೊಬೈಲ್ ವೈಬ್ರೇಶನ್ ನಿಂದ ಮಾನಸಿಕ ಕ್ಷೋಭೆಗೂ ಒಳಗಾಗುತ್ತಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.