ಬೆಂಗಳೂರು : ಬಿಸಿ ಬಿಸಿ ಚಹಾ ಯಾರಿಗೆ ಇಷ್ಟ ಇಲ್ಲ ಹೇಳಿ. ಬೆಳಗ್ಗೆ ಬೆಡ್ ಟೀ, ಸಂಜೆ ಸ್ನ್ಯಾಕ್ಸ್ ಜೊತೆ ಟೀ. ಚಹಾ ಕುಡಿಯಲು ನಮ್ಮಲ್ಲಿ ಕಾರಣಗಳು ಬೇಕಾದಷ್ಟಿವೆ. ಚಹಾ ಒಂದು ರೀತಿ ಟಾನಿಕ್ ತರಹ ಕೆಲಸ ಮಾಡುತ್ತದೆ. ಚಳಿಗಾಲ(Winter) ದಲ್ಲಿ ಚಹಾ ಕುಡಿಯೋ ಮಜಾವೇ ಬೇರೆ.  ಆದರೆ, ಗೊತ್ತಿರಲಿ ಅತಿಯಾದರೆ ಅಮೃತವೂ ವಿಷವಾಗುತ್ತದೆ. ಅಧಿಕ ಚಹಾ ಸೇವನೆ ಆರೋಗ್ಯಕ್ಕೆ ಮಾರಕವೂ ಹೌದು. 


COMMERCIAL BREAK
SCROLL TO CONTINUE READING

ತಪ್ಪಿಯೂ ಈ ತಪ್ಪು ಮಾಡಬೇಡಿ:
ಸ್ನ್ಯಾಕ್ಸ್ ಜೊತೆ ಚಹಾ (Tea)ಮಜಾವೇ ಬೇರೆ. ತುಂಬಾ ಜನ ಚಹಾ ಜೊತೆ ಏನಾನ್ನಾದರೂ ತಿನ್ನುತ್ತಾರೆ.  ಆದರೆ, ನೆನಪಿಡಿ, ಕೆಲವೊಂದು ವಸ್ತುಗಳನ್ನು ಚಹಾ ಜೊತೆ ತಿನ್ನಲೇ ಬಾರದು. ತಿಂದರೆ ಅಪಾಯ ತಪ್ಪಿದ್ದಲ್ಲ. ಚಹಾ ಜೊತೆ ಏನ್ನೆಲ್ಲಾ ತಿನ್ನಬಾರದು ನೋಡೋಣ. 


ಪಕೋಡಾ ಮತ್ತು ಟೀ ಕಾಂಬಿನೇಷನ್ ಸರಿಯಲ್ಲ..!
ಚುಮುಚುಮು ಚಳಿ ಇರುವಾಗ ಚಹಾ ಜೊತೆ ಪಕೋಡಾ (Pakoda)  ಇದ್ದರೆ ಅದೇ ಬ್ರಹ್ಮಾನಂದ. ಅದರ ಆನಂದವೇ ಬೇರೆ.  ಆದರೆ,  ಯಾವತ್ತಿಗೂ ಕಡ್ಲೆಹಿಟ್ಟು ಅಥವಾ ಬೇಸನ್ (Besan)  ನಿಂದ ಮಾಡಿದ ವಸ್ತುಗಳನ್ನು ತಿನ್ನಲೇ ಬಾರದು. ಹಾಗೇ ಮಾಡಿದರೆ ಶರೀರದಲ್ಲಿ ಪೋಷಕಾಂಶಗಳ (Nutrients) ಕೊರತೆ ಉಂಟಾಗುತ್ತದೆ.  ಇದರಿಂದ ಜೀರ್ಣ ಸಂಬಂಧಿ (Digestive Problems) ಕಾಯಿಲುಗಳು ಉಂಟಾಗಬಹುದು.  ಹಾಗಾಗಿ ಪಕೋಡಾ ಚಹಾ ಜೊತೆ ಒಳ್ಳೆಯ ಕಾಂಬಿನೇಷನ್ ಅಲ್ಲ.


ಇದನ್ನೂ ಓದಿ: ತಪ್ಪಿಯೂ ಬೋರಲು ಮಲಗಬೇಡಿ..! ಕಾಡಬಹುದು ಇನ್ನಿಲ್ಲದ ಸಮಸ್ಯೆ..!


ಬೇಡ ಲಿಂಬೆ ಜೊತೆ ಚಹಾ..!
ಚಹ ಜೊತೆ ತಪ್ಪಿಯೂ ಲಿಂಬೆ (Lemon) ಬೆರೆತಿರುವ ಯಾವುದೇ ವಸ್ತು ತಿನ್ನಲೇ ಬಾರದು. ಲಿಂಬೆಯುಕ್ತ ಆಹಾರ ತಿಂದರೆ, ಗ್ಯಾಸ್ (Gas) ಆಗಬಹುದು, ಮಲಬದ್ಧತೆ (Constipation) ಉಂಟಾಗಬಹುದು. ಜೀರ್ಣ ಸಂಬಂಧಿ ಕಾಯಿಲೆಗಳು ತಗುಲಬಹುದು. 


ಚಹಾ ಕುಡಿದ ಮೇಲೆ ಕೋಲ್ಡ್ ವಸ್ತುಗಳನ್ನು ತಿನ್ನಬಾರದು:
ಚಹಾ (Tea)  ಹೀರಿದ ಮೇಲೆ ನೀರು (Water) ಅಥವಾ ಬೇರೆ ಯಾವುದಾದರೂ ತಂಪು ಪಾನೀಯ ಕುಡಿಯಬಾರದು.  ಇದರಿಂದ ಬಿಸಿ-ತಂಪು ವಸ್ತುಗಳ ಸಂಕಟ ಎದುರಾಗಬಹುದು. ಇದರಿಂದ ಜೀರ್ಣ ಕ್ರಿಯೆ (Digestive System)  ಏರುಪೇರಾಗಬಹುದು. 


ಇದನ್ನೂ ಓದಿ: Fruit lables : ಹಣ್ಣಿನಲ್ಲಿ ಸ್ಟಿಕರ್ ಯಾಕೆ ಹಾಕಿರುತ್ತಾರೆ ಗೊತ್ತಾ ? ಲೇಬಲ್ ಕೋಡ್ ಏನು ಹೇಳುತ್ತೆ..?


ಚಹಾ ಜೊತೆ ಸಿಹಿ ತಿನಿಸು ಬೇಡವೇ ಬೇಡ.:
ಚಹಾ ಜೊತೆ ಸಿಹಿ (Sugar) ತಿನಿಸು ತಿನ್ನಲೇ ಬಾರದು. ಹಾಗೆ ಮಾಡಿದರೆ, ಡಯಾಬಿಟಿಸ್ (Diabetes) ಅಂಟುವ ಸಾಧ್ಯತೆ ಹೆಚ್ಚಾಗುತ್ತದೆ. ಹೊಟ್ಟೆಯುರಿ (Stomach Irritation) ಕೂಡಾ ಉಂಟಾಗಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.